ವಿದೇಶದಲ್ಲಿ ಮಹಾತ್ಮ ಗಾಂಧೀಜಿಯ ಪ್ರತಿಮೆ ಧ್ವಂಸ

ರಾಷ್ಟ್ರ ಪಿತೃಗಳ ಮಹಾತ್ಮ ಗಾಂಧಿ ಯ ಪ್ರತಿಮೆ ಗೆ ಅವಮಾನ.

0
198

ವಾಷಿಂಗ್ಟನ್,ಜ.30- ಭಾರತದ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಕಂಚಿನ ಪ್ರತಿಮೆಯನ್ನು ಕೆಲ ದುಷ್ಟ ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬೆಳಕಿಗೆ ಬಂದಿದೆ.

ಈ ಘಟನೆಗೆ ಭಾರತೀಯ ಮೂಲದ ಅಮೆರಿಕನ್ನರಿಂದ ಉಗ್ರ ವಿರೋಧ ವ್ಯಕ್ತವಾಗಿದ್ದು, ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಉತ್ತರ ದಿಕ್ಕಿನಲ್ಲಿರುವ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿರುವ ೬ ಅಡಿ ಎತ್ತರದ ೨೯೪ ಕೆಜಿ ತೂಕವುಳ್ಳ ಗಾಂಧೀಜಿ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದ್ದು, ಪ್ರತಿಮೆಯ ಪಾದ ಮತ್ತು ಮುಖ ಭಾಗ ಜಖಂಗೊಂಡಿರುವುದನ್ನು ಉಲ್ಲೇಖಿಸಿ ಸುದ್ದ ಸಂಸ್ಥೆ ವರದಿ ಮಾಡಿದೆ.

ಹಾನಿಯಾಗಿರುವ ಪ್ರತಿಮೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

ಈ ಪ್ರತಿಮೆ ಡೇವಿಸ್ ನಗರದ ಸಂಸ್ಕೃತಿಯ ಒಂದು ಭಾಗವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತೇವೆ ಎಂದು ಡೇವಿಸ್ ನಗರದ ಪೊಲೀಸ್ ಉಪ ಮುಖ್ಯಸ್ಥ ಪೌಲ್ ಡೊರೋಶಾವ್ ಹೇಳಿದ್ದಾರೆ.

ಜ ೨೭ ರಂದು ಈ ಘಟನೆ ನಡೆದಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಪಾರ್ಕಿನ ಸಿಬ್ಬಂದಿ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here