ಬಂಗಾಳಿ ನಟಿ‌ ಆರ್ಯ ಬ್ಯಾನರ್ಜಿ ಮೃತದೇಹ ಪತ್ತೆ

ಆರ್ಯ ಬ್ಯಾನರ್ಜಿ ಶವವಾಗಿ ಪತ್ತೆ

0
161

ಕೊಲ್ಕತ್ತ, ಡಿ 12- ಬಂಗಾಳಿ ನಟಿ‌ ಆರ್ಯ ಬ್ಯಾನರ್ಜಿ ಮೃತದೇಹ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ದಕ್ಷಿಣ ಕೊಲ್ಕತ್ತ ದಲ್ಲಿರುವ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಬಾಗಿಲು ಒಡೆದು ನೋಡಿದಾಗ 33 ವರ್ಷದ ನಟಿಯ ಶವ ಬೆಡ್ ರೂಂ ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವದತ್ತ ಎಂಬ ಹೆಸರಿನಿಂದಲೂ ಈ ನಟಿಯನ್ನು ಕರೆಯಲಾಗುತ್ತಿತ್ತುಕರೆಯಲಾಗುತ್ತಿತಿತ ಜೋಧ್ ಪುರ್ ಪಾರ್ಕ್‌ನಲ್ಲಿರುವ ಮನೆಯಲ್ಲಿ‌ ನಟಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದರು. ಈಕೆ ರೂಪದರ್ಶಿಯಾ ಗಿಯೂ ಗುರುತಿಸಿಕೊಂಡಿದ್ದರು.
ಬೆಡ್ ರೂಂ ನಲ್ಲಿ ವಾಂತಿ ಮಾಡಿರುವ ಲಕ್ಷಣಗಳು ಕಂಡುಬಂದಿದ್ದು, ಮುಖ ಕೆಳಕ್ಕೆ ಮಾಡಿಕೊಂಡಿರುವ ರೀತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳದಲ್ಲಿ ರಕ್ತದಹನಿ ಪತ್ತೆಯಾಗಿರುವುದು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಮನೆ ಕಲಸ ಮಾಡುವ ಆಳು ಬೆಲ್ ಮಾಡಿದರೂ ಪ್ರತಿಕ್ರಿಯೆ ಬಾರದ ಕಾರಣ ಅಕ್ಕಪಕ್ಕ ನಿವಾಸಿಗಳು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಸಾವಿನ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ.
ದಿ ಡರ್ಟಿ ಪಿಕ್ಚರ್ ಲವ್ ಸೆಕ್ಸ್ ಔರ್ ಧೋಖಾ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ಆರ್ಯ ಬ್ಯಾನರ್ಜಿ ಅಭಿನಯಿಸಿದ್ದಾರೆ.
ಅನುಮಾನಸ್ಪದ ಸಾವೆಂದು ಪರಿಗಣಿಸಿರುವ ಪೊಲೀಸರು ತನಿಖೆ‌ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here