ಕಲ್ಮಠ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿ ಯರಿಂದ “ತರಕಾರಿ ಸೇವನೆ ಆರೋಗ್ಯಕ್ಕೆ ಅನುಕೂಲಕರ” ಜಾಗೃತಿ ಕಾರ್ಯಕ್ರಮ

ಕಲ್ಮಠ ಕಾಲೇಜು-5 ನೇ ಆಯುರ್ವೇದಿಕ್ ದಿನಾಚರಣೆ

0
49

ಕಲ್ಮಠ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯರಿಂದ “ತರಕಾರಿ ಸೇವನೆ ಆರೋಗ್ಯಕ್ಕೆ ಅನುಕೂಲಕರ” ಜಾಗೃತಿ ಕಾರ್ಯಕ್ರಮ. 

ಮಾನವಿ.ನ.14- ಮಾನ್ವಿಯ ಎಸ್‌ವಿವಿಕೆ ಟ್ರಸ್ಟ್ ಕೆಪಿಎಸ್‌ವಿಎಸ್ ಆಯುರ್ವೇದಿಕೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಐದನೇ ಆಯುರ್ವೇದಿಕ್ ಆಚರಿಸಲಾಯಿತು.

ಕಲ್ಮಠದ ಶ್ರೀ ವಿರುಪಾಕ್ಷ ಶಿವಾಚಾರ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ತರಕಾರಿ ಸೇವನೆ ಆರೋಗ್ಯಕ್ಕೆ ಅನುಕೂಲಕರ ಮತ್ತು ಆಯುರ್ವೇದಿಕೆ ಔಷಧಿಯ ಗುಣ ಹೊಂದಿರುತ್ತದೆ ಎನ್ನುವ ಜಾಗೃತಿಯನ್ನು ಮೂಡಿಸಲಾಯಿತು.

ಸ್ವತಃ ವಿದ್ಯಾರ್ಥಿಗಳು ತರಕಾರಿ ಖರೀದಿಸುವ ಮೂಲಕ ಈ ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯದರ್ಶಿಗಳು, ಕಛೇರಿಯ ಅಧೀಕ್ಷಕರು, ಮುಖ್ಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here