14ನೇ ಹಣಕಾಸು ತನಿಖೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಧರಣಿ

ಬ್ಯಾಂಕ್ ಖಾತೆಯಿಂದ ಹಣವನ್ನು ಎತ್ತುವಳಿ ಮಾಡಿಕೊಳ್ಳುವ ಮೂಲಕ ಗುತ್ತಿಗೆದಾರರು ಕಿರಿಯ ಅಭಿಯಂತರರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಸಂಪೂರ್ಣವಾಗಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ

0
176

14ನೇ ಹಣಕಾಸು ತನಿಖೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಧರಣಿ. 

ಮಾನ್ವಿ, ನ.12- ತಾಲೂಕಿನ ಗೋರ್ಕಲ್, ಕುರ್ಡಿ, ಜಾನೇಕಲ್, ಕಪಗಲ್, ಸಾದಾಪೂರ, ಸುಂಕೇಶ್ವರ ಹಿರೇಕೊಟ್ನೆಕಲ್, ಚಿಕ್ಕಕೊಟ್ನೆಕಲ್, ಭೋಗಾವತಿ, ಬ್ಯಾಗವಾಟ, ನೀರಮಾನ್ವಿ, ಹಾಗೂ ಉಟಕನೂರು ಗ್ರಾಮ ಪಂಚಾಯತಿಯ 14ನೇ ಹಣಕಾಸು ಯೋಜನೆಯ ಅನುದಾನವನ್ನು ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಂಡು ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕ ಪಂಚಾಯತಿ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಲಾಯಿತು.

ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ 14ನೇ ಹಣಕಾಸು ಪಂಚವಾರ್ಷಿಕ ಯೋಜನೆ ಅನುದಾನದಡಿಯಲ್ಲಿ ಯಾವುದೇ ಕಾಮಗಾರಿಗಳನ್ನು ನಿರ್ವಹಿಸಿದೆ ಕೇವಲ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬ್ಯಾಂಕ್ ಖಾತೆಯಿಂದ ಹಣವನ್ನು ಎತ್ತುವಳಿ ಮಾಡಿಕೊಳ್ಳುವ ಮೂಲಕ ಗುತ್ತಿಗೆದಾರರು ಕಿರಿಯ ಅಭಿಯಂತರರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಸಂಪೂರ್ಣವಾಗಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ನಿರ್ದಾಕ್ಷಿಣ್ಯವಾದ ಕಠಿಣ ಕ್ರಮ ಕೈಗೊಂಡು ಕೂಡಲೇ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ತಾಲೂಕ ಪಂಚಾಯತಿ ಕಾರ್ಯಾಲಯದಲ್ಲಿ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬಾರದೆ ಕರ್ತವ್ಯಲೋಪ ಎಸಗಿರುವ ಮೇಲೆ ಸೂಕ್ತ ಕ್ರಮ ಜರುಗಿಸಬೇಕು, ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಳಪೆಮಟ್ಟದ ಶುದ್ಧಕುಡಿಯುವ ಘಟನೆಗಳನ್ನು ಅಳವಡಿಸಿದ ಏಜೆನ್ಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಕೂಡಲೇ ದುರಸ್ತಿ ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು, ಗ್ರಾಮ ಪಂಚಾಯಿತಿ ಗ್ರಂಥಾಲಯ ಕೆಲವರು ಕಾರಣದಿಂದ ದಿನಪತ್ರಿಕೆಗಳು ಬರುತ್ತಿಲ್ಲ ಸಂತಾನಕ್ಕೆ ದಿನಪತ್ರಿಕೆ ಸರಬರಾಜು ಮಾಡಲು ಆದೇಶಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಚ್ ಹನುಮಂತ ಸೀಕಲ್, ತಾಲೂಕ ಅಧ್ಯಕ್ಷ ತಿಪ್ಪಣ್ಣ ಜಾನಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶಿನಾಥ್ ಕುರುಡಿ, ಜಿಲ್ಲಾ ಕಾರ್ಯಾಧ್ಯಕ್ಷ ಸಾಬಣ್ಣ ಕಪಗಲ್, ಜಿಲ್ಲಾ ಕಾರ್ಯದರ್ಶಿ ಹುಸೇನಪ್ಪ ನಂದದಿಹಾಳ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಪೋತ್ನಾಳ, ತಾಲೂಕ ಉಪಾಧ್ಯಕ್ಷ ಭೀಮಣ್ಣ ಗುಡದಿನ್ನಿ, ತಾಲೂಕ ಪ್ರಧಾನ ಕಾರ್ಯದರ್ಶಿ ತಾಯಣ್ಣ ಕಪಗಲ್, ಈರಣ್ಣ ಕುರ್ಡಿ, ನರಸಿಂಹ ಕುರ್ಡಿ, ಶಂಕರ್ ಜಾನೇಕಲ್ ಇದ್ದರು.

LEAVE A REPLY

Please enter your comment!
Please enter your name here