ನೂತನ ಪುರಸಭೆ ಅಧ್ಯಕ್ಷೆಯ ಪತಿ ಜಿಲಾನಿ ಖುರೇಶಿಯವರಿಂದ ವಿವಿಧ ಗಣ್ಯರಿಗೆ ಸನ್ಮಾನ

ನಗರದ ಮೂಲ ಸಮಸ್ಯಗಳ ಕಡೆ ಗಮನ ಹರಿಸಿ ಯೆಲ್ಲಾ ಸದಸ್ಯರನ್ನ ನಂಬಿಕೆಗೆ ತೆಗೆದುಕೋಂಡು ಉತ್ತಮವಾದ ಆಡಳಿತ ನಡೆಸಿರಿ ಎಂದು ಸಲಹೆ

0
203

ನೂತನ ಪುರಸಭೆ ಅಧ್ಯಕ್ಷೆಯ ಪತಿ ಜಿಲಾನಿ ಖುರೇಶಿಯವರಿಂದ ವಿವಿಧ ಗಣ್ಯರಿಗೆ ಸನ್ಮಾನ.

ನೂತನ ಪುರಸಭೆ ಅಧ್ಯಕ್ಷೆಯ ಪತಿ ಜಿಲಾನಿ ಖುರೇಶಿಯವರಿಂದ ವಿವಿಧ ಗಣ್ಯರಿಗೆ ಸನ್ಮಾನ

ಮಾನವಿ, ನ.11- ನಗರದ ಪುರಸಭೆ ಅಧ್ಯಕ್ಷೆ ಶ್ರೀಮತಿ ಸುಫಿಯಾ ಬೇಗಮ್ ಅವರ ಪತಿ ಮಾಜಿ ಪುರಸಭಾ ನಿರ್ದೇಶಿತ ಸದಸ್ಯ ಜಿಲಾನಿ ಖುರೇಶಿ ತಮ್ಮನ್ನು ಬೆಂಬಲಿಸಿ ಪುರಸಭೆ ಅಧ್ಯಕ್ಷ ಸ್ಥಾನ ಪಡೆಯಲು ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ವಿವಿಧ ಗಣ್ಯರಿಗೆ ಭೇಟಿಕೊಟ್ಟು ಅವರಿಗೆ ಸನ್ಮಾನಿಸಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಈ ನಿಟ್ಟಿನಲ್ಲಿ ಅವರು ಹೆಚ್ ಸಿ ಸಿ ಕಂಪನಿ ಕಾರ್ಯಾಲಯಕ್ಕೆ ತೆರಳಿ ಕಂಪನಿ ಮಾಲಿಕ ಮತ್ತು ಪ್ರಥಮ ದರ್ಜೆಗುತ್ತೇದಾರ ಹಾಗೂ ರಾಬಿತಯೇ ಮಿಲ್ಲತ್ ವೇದಿಕೆಯ ಅಧ್ಯಕ್ಷರಾದ ಸೈಯದ್ ಅಕ್ಬರ್ ಪಾಶ ರವರನ್ನ ಶಾಲು ಹೋದಿಸಿ ಹೂವಿನ ಹಾರ ಹಾಕುವ ಮೂಲಕ ಸನ್ಮಾನಿಸಿ ಗೌರವಿಸಿ ಧನ್ಯವಾದ ಹೇಳಿದರು.

ಇದೇ ಸಂದರ್ಭದಲ್ಲಿ ಸೈಯದ್ ಅಕ್ಬರ್ ಸಾಬ್ ಅವರು ಪುರಸಭೆ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಎಶಸ್ವಿಯಾಗಿ ತಮ್ಮ ಪತ್ನಿಗೆ ಅಧ್ಯಕ್ಷ ಸ್ಥಾನ ಪಡೆದ ಜಿಲಾನಿ ಖುರೇಶಿಯವರಿಗೆ ಸನ್ಮಾನಿಸಿ ಶುಭ ಕೋರಿ ನಗರದ ಮೂಲ ಸಮಸ್ಯಗಳ ಕಡೆ ಗಮನ ಹರಿಸಿ ಯೆಲ್ಲಾ ಸದಸ್ಯರನ್ನ ನಂಬಿಕೆಗೆ ತೆಗೆದುಕೋಂಡು ಉತ್ತಮವಾದ ಆಡಳಿತ ನಡೆಸಿರಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮೌಲಾನ ಫರೀದ್ ಉಮರಿ, ಎಮ್ ಎ ಎಚ್ ಮುಖೀಮ್ ಮತು ಶೇಕ್ ಬಾಬಾ ಹುಸೆನ್ ಹಾಗು ರೋಹಿತ್ ಪಾಶ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here