ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಐಪಿಎಲ್ 13 ರಿಂದ ಹೊರಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು.

ಕೊಹ್ಲಿ ಹೊರತಾದ ಹೊಸ ನಾಯಕನನ್ನು ಹುಡುಕುವುದು ಉತ್ತಮ: ಗಂಭೀರ್

0
27

ಬೆಂಗಳೂರು : ಈ ಬಾರಿ ಕೊಹ್ಲಿ ಪಡೆ ಸುಧಾರಿತ ಪ್ರದರ್ಶನ ನೀಡಿದ್ದರಿಂದ ಫೈನಲ್ ತಲುಪಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 6 ವಿಕೆಟ್ ಗಳಿಂದ ಸೋತು ಕೂಟದಿಂದ ನಿರ್ಗಮಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಎಬಿಡಿ ವಿಲಿಯರ್ಸ್ ಅವರ 56 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಹೈದರಾಬಾದ್ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 132 ರನ್ ಗಳಿಸುವ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಹೈದರಾಬಾದ್ 2 ನೇ ಕ್ವಾಲಿಫೈಯರ್ ಗೆ ಲಗ್ಗೆಯಿಟ್ಟಿತು. ಬ್ಯಾಟಿಂಗ್ ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ ಆರ್ ಸಿಬಿ ಅದಕ್ಕೆ ತಕ್ಕ ಬೆಲೆ ತೆತ್ತಿತು.

ಈ ಹಿಂದೆ ಆರ್ ಸಿಬಿ ನಾಯಕರಾಗಿ ಕೊಹ್ಲಿಯನ್ನು ಟೀಕಿಸಿದ್ದ ಗಂಭೀರ್ ಈಗ ಮತ್ತೆ ಇದೇ ಮಾತನ್ನಾಡಿದ್ದು, ಕೊಹ್ಲಿ ಹೊರತಾದ ಹೊಸ ನಾಯಕನನ್ನು ಹುಡುಕುವುದು ಉತ್ತಮ ಎಂದಿದ್ದಾರೆ. ‘ಎಂಟು ವರ್ಷ ಎನ್ನುವುದು ಸಾಕಷ್ಟು ಸಮಯ ನೀಡಿದಂತಾಯ್ತು.

ಪಂಜಾಬ್ ತಂಡವನ್ನೇ ನೋಡಿ, ಎರಡು ವರ್ಷ ಅಶ್ವಿನ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲವೆಂದು ಅವರನ್ನು ಕಿತ್ತು ಹಾಕಲಾಯಿತು. ಧೋನಿ, ರೋಹಿತ್ ಅವರನ್ನು ನೋಡಿ. ಅವರು ತಮ್ಮ ತಂಡಕ್ಕೆ ಸುದೀರ್ಘ ಸಮಯದಿಂದ ನಾಯಕತ್ವ ವಹಿಸಿದ್ದು ಮಾತ್ರವಲ್ಲ, ಚಾಂಪಿಯನ್ ಪಟ್ಟಕ್ಕೇರಿಸಿದರು. ಒಂದು ವೇಳೆ ಧೋನಿ, ರೋಹಿತ್ ಕೂಡಾ ಪ್ರದರ್ಶನ ನೀಡಿರದೇ ಇದ್ದಿದ್ದರೆ ಅವರನ್ನೂ ಕಿತ್ತು ಹಾಕಲಾಗುತ್ತಿತ್ತು’ ಎಂದು ಗಂಭೀರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here