ವಾಟ್ಸಪ್ ಪೇ ಮೂಲಕ ಹಣದ ವರ್ಗಾವಣೆ ಮಾಡಬಹುದು.

0
198

ಈಗ ಒಬ್ಬರಿಂದ ಒಬ್ಬರಿಗೆ ಹಣ ವರ್ಗಾವಣೆ ಅತ್ಯಂತ ಅವಶ್ಯಕವಾಗಿದೆ. ಡಿಜಿಟಲ್ ಯುಗದಲ್ಲಿ ಈಗ ನಗದು ಹಣದ ವ್ಯವಹಾರ ಕಡಿಯಾಗುತ್ತ ಬಂದಿದೆ. ಬೀದು ಬದುಯ ವ್ಯಾಪಾರಿಯೂ ಈಗ ಡಿಜಿಟಲ್ ಮನಿಯ ಮೊರೆ ಹೋಗಿದ್ದಾರೆ. ಇದಕ್ಕೆ Google PAy, BHIM, PAYTM, PhonePay ಹೀಗೆ ಹಲವಾರು ಆಪ್ ಗಳಿವೆ.

ಇದಕ್ಕೆ ಮತ್ತೊಂದು ಸೇರ್ಪಡೆ ನಾವು ವಿಡಿಯೋ, ಫೋಟೋ, ಫೈಲ್, ಚಾಟ್, ಹೀಗೆ ಹಲವಾರು ಸಂಪರ್ಕಗಳಿಗೆ ಬಳಸುವ Whatsapp. ಹೌದು ಈಗ Whatsapp ನಲ್ಲೂ ಈ ಸೌಕರ್ಯ ಲಭ್ಯ. ಸೆಟ್ಟಿಂಗ್ ನಲ್ಲಿ ನಿಮ್ಮ ಬ್ಯಾಂಕ್ ನ್ನು ಲಿಂಕ್ ಮಾಡಿದ್ರೆ ಆಯ್ತು. ಹಣದ ವ್ವಹಾರ ಪ್ರಾರಂಭಿಸಬಹುದು. ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿರುವ ಜುಕರ್ ಬರ್ಗ್, ವಾಟ್ಸಪ್ ನಲ್ಲಿ ಇದೀಗ ನೀವು ಹಣವನ್ನು ಕೂಡ ವರ್ಗಾವಣೆ ಮಾಡಬಹುದು. ವಾಟ್ಸಪ್ ಪೇ ಸೇವೆ 140ಕ್ಕೂ ಹೆಚ್ಚು ಬ್ಯಾಂಕ್ ಗಳನ್ನು ಒಳಗೊಂಡಿದ್ದು, ನಿಮ್ಮ ಸ್ನೇಹಿತರಿಗೆ, ಕುಟುಂಬಸ್ಥರಿಗೆ ಸುಲಭವಾಗಿ ವಾಟ್ಸಪ್ ಮೂಲಕ ಹಣದ ವರ್ಗಾವಣೆ ಮಾಡಬಹುದು. ಈ ಸೇವೆಗೆ ವಾಟ್ಸಪ್ ಯಾವುದೇ ರೀತಿಯ ಶುಲ್ಕ ವಿಧಿಸುತ್ತಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ವಾಟ್ಸಪ್ ಪೇಮೆಂಟ್ ಸೇವೆ ಭಾರತದ 10 ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದ್ದು, ಯುಪಿಐಗೆ ಒಳಗೊಂಡಿರುವ ಚಾಲ್ತಿಯಲ್ಲಿರುವ ಡೆಬಿಟ್ ಕಾರ್ಡ್ ಅನ್ನು ವಾಟ್ಸಪ್ ಪೇಗೆ ಲಿಂಕ್ ಮಾಡುವ ಮೂಲಕ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು. ಈ ಸೇವೆ ಹೊಸ ಆವೃತ್ತಿಯ ವಾಟ್ಸಪ್ ನಲ್ಲಿ ಲಭ್ಯವಿದೆ. ಈ ಕುರಿತಂತೆ ನಾವು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI)ದೊಂದಿಗೆ ಚರ್ಚೆ ನಡೆಸಿದ್ದು, ಅನುಮೋದನೆ ಕೂಡ ಪಡೆದಿದ್ದೇವೆ ಎಂದು ಜುಕರ್ ಬರ್ಗ್ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here