ಪೂನಮ್​​ ಪಾಂಡೆ ಅರೆಸ್ಟ್

0
198

ಬೀಚ್​ನಲ್ಲಿ ರಿಯಲ್​​ ಬಿಚ್ಚಮ್ಮನ ಅವತಾರ ತೋರಿದ್ದ ಪೂನಮ್​​ ಪಾಂಡೆಯನ್ನು ಗೋವಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಲಿವುಡ್​ನ ಫ್ಯಾಷನ್​​ ಡಿಸೈನರ್​​​​​​ ಮಿಲಿಂದ್ ಸೋಮನ್​​ ಹಾಗೂ ಪೂನಮ್​​ ಪಾಂಡೆ ಗೋವಾ ಬೀಚ್​ನ ಚಪೋಲಿ ಡ್ಯಾಂ ಬಳಿ ಹುಟ್ಟುಹಬ್ಬದ ಅಂಗವಾಗಿ ವಿಡಿಯೋ ಶೂಟ್ ಮಾಡಿದ್ದರು.

55 ವರ್ಷದ ಮಿಲಿಂದ್ ಸೋಮನ್​ ಸಂಪೂರ್ಣ ನಗ್ನರಾಗಿ ಪೋಸ್​ ಕೊಟ್ಟಿದ್ರೆ, ಪೂನಮ್​​ ಪಾಂಡೆ ಬಟ್ಟೆ ಬಿಚ್ಚೋ ದೃಶ್ಯ ಶೂಟ್ ಮಾಡಲಾಗಿತ್ತು. ನಗ್ನ ಶೂಟಿಂಗ್​ ದೃಶ್ಯಗಳನ್ನು ಸೋಮನ್​​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ಇದು ಸಾಕಷ್ಟು ವೈರಲ್​​ ಆಗಿತ್ತು. ಅಶ್ಲೀಲ ವಿಡಿಯೋ ಸಂಬಂಧ ಗೋವಾ ಫಾರ್ವರ್ಡ್​ ಪಾರ್ಟಿಯ ಮಹಿಳಾ ವಿಭಾಗ ದೂರು ನೀಡಿತ್ತು. ಉತ್ತರ ಗೋವಾ ಪೊಲೀಸರು ಎಫ್​ಐಆರ್​​ ದಾಖಲಿಸಿ ಪೂನಂ ಪಾಂಡೆಯನ್ನು ಅರೆಸ್ಟ್ ಮಾಡಿ ಜಾಮೀನಿನ ಮೇಲೆ ರಿಲೀಸ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here