ನಾಡಗೌಡರಿಂದ ಜನರನ್ನು ದಾರಿ ತಪ್ಪಿಸುವ ಕೆಲಸ ಸಲ್ಲದು ಶಾಸಕರ ದೂರು ಸತ್ಯಕ್ಕೆ ದೂರ: ಶ್ರೀದೇವಿ ಶ್ರೀನಿವಾಸ

ಶಾಸಕ ವೆಂಟಕರಾವ ನಾಡಗೌಡ ನೀಡಿದ ದೂರಿನನ್ವಯ ಜಿ.ಪಂ.ನ ಮುಖ್ಯಲೆಕ್ಕಾಧಿಕಾರಿ ವಿಜಯಶಂಕರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಭೇಟಿ ನೀಡಿ ಒಕ್ಕೂಟದ ಕಡತನಗಳನ್ನು ಪರಿಶೀಲನೆ ನಡೆಸಿದರು. ನಂತರ ಒಕ್ಕೂಟಕ್ಕೆ ಸಂಬAಧಿಸಿದAತೆ ಖರ್ಚು-ವೆಚ್ಚದ ರಸೀದಿ, ಠರಾವು ಪ್ರತಿ, ಭವನಕ್ಕೆ ಬಂದ ಬಾಡಿಗೆ ವಿವರ, ಆಡಿಟ್ ವರದಿಯನ್ನು ಕೊಂಡ್ಯೊಯ್ಯಲಾಗಿದೆ.

0
199

ನಾಡಗೌಡರಿಂದ ಜನರನ್ನು ದಾರಿ ತಪ್ಪಿಸುವ ಕೆಲಸ ಸಲ್ಲದು ಶಾಸಕರ ದೂರು ಸತ್ಯಕ್ಕೆ ದೂರ: ಶ್ರೀದೇವಿ ಶ್ರೀನಿವಾಸ.

ಸಿಂಧನೂರು,ನ.03 – ಶಾಸಕ ವೆಂಕಟರಾವ್ ನಾಡಗೌಡ ಅವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಾ.ಪಂ.ಭವನವನ್ನು ಅಕ್ರಮವಾಗಿ ಪಡೆದು, ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆಂದು ಶಾಸಕರು ದೂರು ನೀಡಿದ್ದು ಸರಿಯಲ್ಲ. ಅವರ ದೂರು ಸತ್ಯಕ್ಕೆ ದೂರವಾಗಿದೆ ಎಂದು ಸಿಂಧನೂರು ತಾಲೂಕು ಇಂದಿರಾ ಗಾಂಧಿ ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಸ್ಪಷ್ಟನೆ ನೀಡಿದರು.

ಅವರು ನಗರದ ಇಂದಿರಾ ಗಾಂಧಿ ಸ್ತಿಶಕ್ತಿ ಒಕ್ಕೂಟದ ತಮ್ಮ ಕಛೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿನಡೆಸಿ ಮಾತನಾಡಿದರು. ಮಹಿಳೆಯರ ಶ್ರೇಮಾಭಿವೃದ್ಧಿಗಾಗಿ ಶ್ರಮಿಸಬೇಕಿದ್ದ ಶಾಸಕರು ಈ ರೀತಿಯ ದೂರುಗಳನ್ನು ಸಲ್ಲಿಸುತ್ತಿರುವುದು ಅವರ ಸ್ಥಾನಕ್ಕೆ ಗೌರವ ನೀಡುವುದಿಲ್ಲ. ಶಾಸಕ ವೆಂಕಟರಾವ ನಾಡಗೌಡ ದುರುದ್ದೇಶದಿಂದ ನಮ್ಮ ಒಕ್ಕೂಟದ ವಿರುದ್ದ ದೂರು ನೀಡಿದ್ದಾರೆ. ಒಕ್ಕೂಟ ತಾ.ಪಂ. ವ್ಯಾಪ್ತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಡಿಯಲ್ಲಿ ಬರುವದರಿಂದ ತಾ.ಪಂ.ಈ ಭವನ ನಿರ್ಮಿಸಿ ೨೦೧೩ ರಲ್ಲಿ ನಮಗೆ ಅಧಿಕೃತವಾಗಿ ಹಸ್ತಾಂತರ ಮಾಡಿದೆ. ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದೇವೆ.

ಈ ಹಿಂದೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಶಾಸಕರಾಗಿದ್ದಾಗ ಹೈ-ಕ ಪ್ರದೇಶ ಅಭಿವೃದ್ಧಿ ಮಂಡಳಿಯಿAದ ಹಾಗೂ ಶಾಸಕರ ಅನುದಾನದಿಂದ ೧೦ ಲಕ್ಷ ರೂ ಅನುದಾನ ಬಿಡುಗಡೆಗೊಳಿಸಿದ್ದರು. ಇಲ್ಲಿಯವರೆಗೆ ಇಲಾಖೆ ಹಾಗೂ ಒಕ್ಕೂಟದ ನೇತೃತ್ವದಲ್ಲಿ ಯಾವುದೇ ರೀತಿಯ ಹಣಕಾಸಿನ ಅವ್ಯವಹಾರ ನಡೆಯದಂತೆ ನೋಡಿಕೊಳ್ಳಲಾಗಿದೆ. ನಮ್ಮ ಮಹಿಳೆಯರಿಗೆ ಇಲಾಖೆ ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ ಎಂದರು.

ಭವನದ ನಿರ್ವಹಣೆಗಾಗಿ ಖಾಸಗಿ ಕಾರ್ಯಕ್ರಮಗಳಿಗೆ ೫ ಸಾವಿರದಂತೆ ದೇಣಿಗೆ ಸಂಗ್ರಹಿಸಲು ಆಡಳಿತ ಮಂಡಳಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ೧ ಲಕ್ಷ ೫ ಸಾವಿರ ರೂ. ದೇಣಿಗೆ ಸಂಗ್ರಹವಾಗಿದ್ದು, ಆ ಮೊತ್ತಕ್ಕೆ ಸರಿಯಾದ ಲೆಕ್ಕ ಇದೆ. ಸರಕಾರಿ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಹಣ ಪಡೆದಿಲ್ಲ. ಹಣದ ಅವ್ಯವಹಾರ ನಡೆದಿಲ್ಲ. ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳ ತಂಡಕ್ಕೂ ಎಲ್ಲಾ ರೀತಿಯ ಮಾಹಿತಿ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀದೇವಿ ದಶರಥ ರೆಡ್ಡಿ, ಉಪಾಧ್ಯಕ್ಷೆ ಶಿವಲಿಂಗಮ್ಮ, ಖಜಾಂಚಿ ನೂರ್‌ಬೀ, ಗೌರಮ್ಮ, ರೇಣುಕಾ, ಲಕ್ಷಿö್ಮÃದೇವಿ ಇತರರು ಇದ್ದರು.

ಪರಿಶೀಲನಾ ತಂಡ ಭೇಟಿ: ಶಾಸಕ ವೆಂಟಕರಾವ ನಾಡಗೌಡ ನೀಡಿದ ದೂರಿನನ್ವಯ ಜಿ.ಪಂ.ನ ಮುಖ್ಯಲೆಕ್ಕಾಧಿಕಾರಿ ವಿಜಯಶಂಕರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಭೇಟಿ ನೀಡಿ ಒಕ್ಕೂಟದ ಕಡತನಗಳನ್ನು ಪರಿಶೀಲನೆ ನಡೆಸಿದರು. ನಂತರ ಒಕ್ಕೂಟಕ್ಕೆ ಸಂಬAಧಿಸಿದAತೆ ಖರ್ಚು-ವೆಚ್ಚದ ರಸೀದಿ, ಠರಾವು ಪ್ರತಿ, ಭವನಕ್ಕೆ ಬಂದ ಬಾಡಿಗೆ ವಿವರ, ಆಡಿಟ್ ವರದಿಯನ್ನು ಕೊಂಡ್ಯೊಯ್ಯಲಾಗಿದೆ.

LEAVE A REPLY

Please enter your comment!
Please enter your name here