ಕೆನರಾ ಬ್ಯಾಂಕ್ ದರೋಡೆಗೆ ಯತ್ನ: ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಭೇಟಿ 

ಪಟ್ಟಣದ ಕೆನರಾ ಬ್ಯಾಂಕ ದರೋಡೆ ಮಾಡಲು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಳ್ಳರ ಗುಂಪೊಂದು ಬ್ಯಾಂಕಿನ ಶಟರ್ ಕೀಯನ್ನು ಕಬ್ಬಿಣದ ರಾಡಿನಿಂದ ಒಡೆಯುತ್ತಿರುವ ಶಬ್ದಕ್ಕೆ  ಪಕ್ಕದ ಮನೆಯ ಜಾನಕಿ ರಾಮಯ್ಯ  ರವರು ಎದ್ದು ಬಂದು ಯಾರು ನೀವು ಬ್ಯಾಂಕಿನ ಸೆಟ್ರು ಯಾಕೆ ಮುರಿದಿದ್ದೀರಿ ಎಂದು ಕೇಳಿ

0
9
ಮಾನ್ವಿ,
ಮಾನ್ವಿ ಪಟ್ಟಣದಲ್ಲಿ ಇರುವ  ಕೆನರಾ ಬ್ಯಾಂಕ್ ದರೋಡೆ ಮಾಡಲು ಕಳ್ಳರ ಗುಂಪು ಯತ್ನಿಸಿದ ಸುದ್ದಿ ಕೇಳಿ ಹೆಚ್ಚುವರಿ  ಪೋಲಿಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ.
ಪಟ್ಟಣದ ಕೆನರಾ ಬ್ಯಾಂಕ ದರೋಡೆ ಮಾಡಲು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಳ್ಳರ ಗುಂಪೊಂದು ಬ್ಯಾಂಕಿನ ಶಟರ್ ಕೀಯನ್ನು ಕಬ್ಬಿಣದ ರಾಡಿನಿಂದ ಒಡೆಯುತ್ತಿರುವ ಶಬ್ದಕ್ಕೆ  ಪಕ್ಕದ ಮನೆಯ ಜಾನಕಿ ರಾಮಯ್ಯ  ರವರು ಎದ್ದು ಬಂದು ಯಾರು ನೀವು ಬ್ಯಾಂಕಿನ ಸೆಟ್ರು ಯಾಕೆ ಮುರಿದಿದ್ದೀರಿ ಎಂದು ಕೇಳಿ ತನ್ನ ಮೊಬೈಲ್ ನಿಂದ ಫೋಟೊ ತೆಗೆದುಕೊಂಡನು  3 ಜನ ಕಳ್ಳರ ಗುಂಪಿನಲ್ಲಿ ಒಬ್ಬ ಕಳ್ಳನು ಜಾನಕಿರಾಮಯ್ಯ ಅವರ ಮೊಬೈಲ್ ನಿಂದ ಫೋಟೊ ತೆಗೆದುಕೊಂಡದ್ದನ್ನು ನೋಡಿ ಮೊಬೈಲ್ ಕೊಡು ಇಲ್ಲದಿದ್ದರೆ ಕಬ್ಬಿಣದ ರಾಡ್  ತಗೊಂಡು ಗುದ್ದಿ ಬಿಡ್ತೀವಿ ಎಂದು ಎದುರಿಸಿ  ಮೊಬೈಲ್ ಕಸಿದುಕೊಂಡು ಓಡಿಹೋದರು ಎಂಬ ಮಾಹಿತಿ  ತಿಳಿದುಬಂದಿದೆ. ಕಳ್ಳರ ಗುಂಪು ಮೊದಲು ಬ್ಯಾಂಕಿನ   ಸಿಸಿ ಕ್ಯಾಮರಾ ಒಡೆದು ದರೋಡೆ ಮಾಡಲು ಪ್ರಯತ್ನಿಸಿದ್ದಾರೆ.
ತಕ್ಷಣ ಜಾನಕಿರಾಮಯ್ಯ ಅವರು ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ ತಕ್ಷಣ ಪೋಲಿಸ್ ಸಿಬ್ಬಂದಿಯವರು ಓಡಿ ಓಡಿ ಬಂದು ನೋಡಿದರೆ ಕಳ್ಳರ ಗುಂಪು ಓಡಿಹೋಗಿತ್ತು.
11 ಗಂಟೆ ಸುಮಾರಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅಡಿಷನಲ್ ಎಸ್ ಪಿ ಸಿಪಿಐ ಪಿಎಸ್ ಐ ಅವರು ಭೇಟಿ ನೀಡಿ ತನಿಖೆಗೆ ಬಲೆ ಬೀಸಿದ್ದಾರೆ

LEAVE A REPLY

Please enter your comment!
Please enter your name here