ಪ್ರವಾದಿ ಮೊಹಮ್ಮದ್ (ಸ) ಮಾನವತೇಯ ಮಾರ್ಗದರ್ಶಕ ಅಭಿಯಾನದ ಪ್ರಯುಕ್ತ ಜಮಾತೇ ಇಸ್ಲಾಮಿ ಹಿಂದ್ ಮಾನವಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

0
170

ಪ್ರವಾದಿ ಮೊಹಮ್ಮದ್ (ಸ) ಮಾನವತೇಯ ಮಾರ್ಗದರ್ಶಕ ಅಭಿಯಾನದ ಪ್ರಯುಕ್ತ ಜಮಾತೇ ಇಸ್ಲಾಮಿ ಹಿಂದ್ ಮಾನವಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಮಾನವಿ,ಅ.31- ಪ್ರತಿಯೋಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಂದಿಗೂ ಪ್ಲಾಸಟಿಕ್ ವಸ್ತು ಬಳಸುವುದಿಲ್ಲವೆಂದು ನಿರ್ಧರಿಸಿ ತನ್ನ ಸುತ್ತ ಮುತ್ತಲಿನ ವಾತಾವರಣವನ್ನ ಸ್ವಚ್ಚವಾಗಿ ಇಟ್ಟುಕೊಂಡು ಬಾಳಿದರೇ ಅದು ಯಶಸ್ವಿ ಜೀವನ ಜೋತೆಗೆ ಪರಸ್ಪರ ಆತ್ಮೀಯತೆ ಪ್ರೀತಿ ವಿಶ್ವಾಸದೊಂದಿಗೆ ಆತ್ಮ ಶುದ್ಧಿಯನ್ನ ಕಾಪಾಡಿಕೋಂಡು ಹೋಗಬೇಕೆಂದು ಕಲ್ಮಠದ ಶ್ರೀಗಳು ಹೇಳಿದರು.

ಅವರು ಇಂದು ಪ್ರವಾದಿ ಮೊಹಮ್ಮದ್ (ಸ) ಮಾನವತೇಯ ಮಾರ್ಗದರ್ಶಕ ಅಭಿಯಾನದ ಪ್ರಯುಕ್ತ ಜಮಾತೇ ಇಸ್ಲಾಮಿ ಹಿಂದ್ ಮಾನವಿ ವತಿಯಿಂದ ಹಮ್ಮಿಕೊಂಡ ಸ್ವಚ್ಚತಾ ಕರ‍್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡುತ್ತಾ ದೇಶವನ್ನ ಒಗ್ಗೂಡಿಸುವ ನಿಟ್ಟಿನಲ್ಲಿ ಜಮಾತೇ ಇಸ್ಲಾಮಿ ಹಿಂದ್ ಸದಾ ಮುಂದೆ ಇದ್ದು ನೂರಾರು ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಮಾನವಿಯತೇ ತೋರುವ ಸಂಘ ಎಂದು ಹೇಳಿದರು.

ನಗರದ ಖುಬಾ ಮಸೀದಿ ಯಿಂದ ಸಾರ್ವಜನಿಕ ಬಸ್ ನಿಲ್ದಾಣದವರೆಗೆ ಹಾಗೂ ಅಮರೇ ಗೌಡ ಕಾಂಪ್ಲೆಕ್ಸ್, ಪಂಪಾ ಕಾಂಪ್ಲೆಕ್ಸ್ ಮತ್ತು ಬಸ್ಸು ನಿಲ್ದಾಣದ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ಮತ್ತು ಸ್ರಮದಾನ ನಡೆಯಿತು.


ಕ್ರೆಸ್ತ ಧರ್ಮದ ಗುರುಗಳು ಜ್ನಾನಪ್ರಕಾಶಮ್ ಮಾತನಾಡಿ ಮನೆ ಮಠ ಮತ್ತು ನಗರ ಬಡಾವಣೆ ಸ್ವಚ್ಚವಾಗಿ ಇಟ್ಟುಕೊಂಡು ನಮ್ಮ ಮನಸ್ಸುಗಳನ್ನ ಸಹ ಸ್ವಚ್ಚವಾಗಿಡಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುರಸಭೆಯ ಮುಖ್ಯ ಅಧಿಕಾರಿ ಜಗದೀಶ್ ಅವರು ಮಾತನಾಡುತ್ತಾ ಜಮಾತೇ ಇಸ್ಲಾಮ್ ಸಂಗದ ಸದಸ್ಯರು ವಿಶೇಷ ವಾಗಿ ಸ್ರಮಾದಾನ ಮಾಡಿರುವ ಮಹಿಳೆಯರು ಬಹಳ ಉತ್ತಮ ಕಾರ್ಯ ಮಾಡಿದ್ದಾರೆ ಎಲ್ಲರೂ ಇಂತಹ ಉತ್ತಮ ಜನಸೇವೆ ರೂಡಿಸಿಕೊಳ್ಳಬೇಕು ಎಂದು ಹೇಳಿದ ಅವರು ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಚತೆ ಕಾಪಾಡಿಕೋಳ್ಳಲು ಅತ್ಯುತ್ತಮವಾದ ವ್ಯವಸ್ಥೆ ಮಾಡಲಾಗುವುದು ಈಕೆಲಸದಲ್ಲಿ ನಗರದ ಎಲ್ಲಾ ಗಣ್ಯ ವ್ಯಕ್ತಿಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು

ವೆಲ್ಫೇರ್ ಪಾರ್ಟಿಯ ಪುರಭೆ ಸದಸ್ಯ ಫರೀದ್ ಉಮರಿ ಮಾತನಾಡಿ ಪ್ರವಾದಿಯ ವಚನ ಸ್ವಚ್ಚತೆ ಸತ್ಯವಿಶ್ವಾಸದ ಅರ್ಧಬಾಗ ಮತ್ತು ಪವಿತ್ರ ಕುರಾನ್ ನ ಸೂಕ್ತ “ ಪಾಪದ ಕೃತ್ಯಗಳ ಮೇಲೆ ಪಶ್ಚಾತ್ತಾಪ ಪಡುವವರಿಗೆ ಹಾಗೂ ಸ್ವಚ್ಚತೆಯನ್ನ ಕಾಪಾಡುವವರಿಗೆ ಅಲ್ಲಹನು ಪ್ರೀತಿಸುತ್ತಾನೆ ಕಾರಣ ಈ ನಿಟ್ಟಿನಲ್ಲಿ ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಆಯೋಜನೆ ಮಾಡಿರುವ ಈ ಸ್ರಮದಾನ ಶ್ಲಾಘನೀಯ ಪ್ರವಾದಿಯ ಮೋಹಮ್ಮದ್ (ಸ) ಕೇವಲ ಆರಾಧನೆಗಳ ಉಪದೇಶ ನೀಡಿಲ್ಲ ಬದಲಾಗಿ ತನ್ನ ಅನುಯಾಯಿಗಳಿಗೆ ಸ್ವಚ್ಚತೆಯನ್ನಳವಡಿಸಲು ಸಹ ಪ್ರೇರೇಪಿಸಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘಟನೆಯ ಅಧ್ಯಕ್ಷೆ ಕುಮಾರಿ ನಾಝಿಯಾ ತನ್ನ ಎಲ್ಲಾ ಸದಸ್ಯ ವಿದ್ಯಾರ್ಥಿನಿಯರ ಜೋತೆ ಭಾಗವಹಿಸಿ ಸ್ವಚ್ಚತೆಯ ಕಾರ್ಯಕ್ಕೆ ಬೆಂಬಲ ಘೋ಼ಸಿದರು.

ಈ ಸ್ರಮದಾನದಲ್ಲಿ ಜಮಾತ್ ನ ಅಧ್ಯಕ್ಷ ಅಬ್ದುಲ್ ಕರೀಮ್ ಖಾನ್ ಮಹಿಳಾ ವಿಭಾಗಬ ಜಿಲ್ಲಾ ಸಂಚಾಲಕಿ ಶ್ರೀಮತಿ ನುಸ್ರತ್ ಜಹಂ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಇಶ್ರತ್ ಜಹಾ ಮತು ಸದಸ್ಯರು, ಜಿ ಐ ಓ ಹಾಗು ಎಸ್ ಐ ಓ ಸಂಘದ ವಿದ್ಯಾರ್ಥಿಗಳು ಮತ್ತು ಒಂದೇಮಾತರಮ್ ಸಂಘಟನೆಯ ಅಧ್ಯಕ ಮಹಿಬೂಬ್ ಮದ್ಲಾಪೂರ್, ಮಾನವಿ ಸ್ವಚ್ಚತಾ ಪರಿಶತ್ ನ ಸದಸ್ಯ ಅರವಿಂದ್ ಬಾಸುತ್ಕರ್, ರಾಬಿತಯೇ ಮಿಲ್ಲತ್ ನ ಅಧ್ಯಕ್ಷ ಹಾಗೂ ಪ್ರಥಮ ದರ್ಜೆಗುತ್ತೇದಾರ ಸೈಯದ್ ಅಕ್ಬರ್ ಸಾಬ್, ಜಮಾತ್ ನ ಉಪಾಧ್ಯಕ್ಷ ಅಬ್ದುಲ್ ರಹೆಮಾನ್ ಶಿಕ್ಷಕ ಸಬ್ಜಲಿ, ಉಮರ್ ದೇವರಮನಿ, ಏಮ್ ಏಚ್ ಮುಖೀಮ್, ದಾದಾ ಸಾಹುಕಾರ, ಜಿಲಾನಿ ಮಿಯಾ, ಶೇಕ್ ಬಾಬ ಹುಸೇನ್, ಜೆ ಚಂದಾಹುಸೇನ್ ಹಾಗೂ ಇತರೇ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here