600 ಕ್ಕೂ ಅಧಿಕ ರನ್ ಗಳಿಸುವ ಮೂಲಕ ಕೆ.ಎಲ್ .ರಾಹುಲ್ ಉತ್ತಮ ಸಾಧನೆ.

ಐಪಿಎಲ್ ನಲ್ಲಿ ಕೊಹ್ಲಿ ದಾಖಲೆ ಸರಿಗಟ್ಟಿದ ರಾಹುಲ್

0
25

ದುಬೈ, ಅ 30- ಇಂಡಿಯನ್ ಪ್ರಿಮೀಯರ್ ಲೀಗ್ ನ ಸತತ ಎರಡು ಆವೃತ್ತಿಯಲ್ಲಿ 600 ಕ್ಕೂ ಅಧಿಕ ರನ್ ಗಳಿಸುವ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್ .ರಾಹುಲ್ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
28 ವರ್ಷದ ರಾಹುಲ್ ಚಂಡೀಗಢ ಮೂಲದ ಫ್ರಾಂಚೈಸಿ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಉತ್ತಮ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಕರ್ನಾಟಕದ ರಾಹುಲ್,ಯಶಸ್ವಿಯಾಗಿ ತಂಡವನ್ನು ಮುನ್ನಡೆಸುವುದರ ಜತೆಗೆ ಬೇಗನೆ ಆರೆಂಜ್ ಕ್ಯಾಪ್ ಗಳಿಸುವಲ್ಲಿ ಸಫಲರಾಗಿದ್ದರು. ಸತತವಾಗಿ ಐದು ಪಂದ್ಯಗಳನ್ನು ಗೆಲುವು ಸಾಧಿಸುವಲ್ಲಿ ರಾಹುಲ್ ಪ್ರಮುಖ ಪಾತ್ರವಹಿಸಿದ್ದಾರೆ.
ಮೊನ್ನೆಯಷ್ಟೆ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟಿ-20,ಏಕದಿನ ಹಾಗೂ ಟೆಸ್ಟ್ ಸರಣಿಗೆ ರಾಹುಲ್ ಅವರನ್ನು ಆಯ್ಕೆ ಆಯ್ಕೆ ಮಾಡಲಾಗಿತ್ತು. ರೋಹಿತ್ ಶರ್ಮಾ ಗಾಯಾಳುವಾಗಿದ್ದು, ಅವರ ಬದಲಿಗೆ ರಾಹುಲ್ ಗೆ ಆಯ್ಕೆ ಸಮಿತಿ ಉಪನಾಯಕನ ಪಟ್ಟ ನೀಡಿದೆ.

LEAVE A REPLY

Please enter your comment!
Please enter your name here