ಸಿಂಧನೂರಿನಲ್ಲಿ ಜಶ್ನೆ ಈದ್‌ಮಿಲಾದುನ್ನಬಿ(ಸ್ವ) ಆಚರಣೆ. ಸಾರ್ಥಕ ಬದುಕಿನತ್ತ ಪ್ರತಿಯೊಬ್ಬರು ಸಾಗಬೇಕು: ಶಾಸಕ ನಾಡಗೌಡ

ಇಂದಿನ ಯುವಪೀಳಿಗೆಗೆ ಶರಣರ, ದಾರ್ಶನಿಕರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು.

0
251

ಸಿಂಧನೂರು.ಅ.30- ಪ್ರವಾದಿ ಪೈಗಂಬರರು ಸದಾ ಸಮಾಜದ ಒಳಿತಗಾಗಿ ಜೀವನ ಸಾಗಿಸಿದ್ದಾರೆ. ಅವರ ಸಾರ್ಥಕ ಬದುಕು ಪ್ರತಿಯೊಬ್ಬರಿಗೆ ಆದರ್ಶವಾಗಬೇಕು. ಅವರ ಆಶಯದಂತೆ ಪ್ರತಿಯೊಬ್ಬರು ಸಾಗಬೇಕು ಎಂದು ಮಾಜಿ ಸಚಿವ, ಶಾಸಕ ವೆಂಕಟರಾವ್ ನಾಡಗೌಡ ಅಭಿಪ್ರಾಯಪಟ್ಟರು.

ಅವರು ನಗರದ ಮಹಿಬೂಬಿಯಾ ಕಾಲೋನಿಯ ಮಸ್ಜಿದ್‌ನಲ್ಲಿ ಪ್ರವಾದಿ ಪೈಗಂಬರರ ಜನ್ಮದಿನದ ಅಂಗವಾಗಿ ರೋಷನ್ ಯುವಕ ಮಂಡಳಿಯಿAದ ಹಮ್ಮಿಕೊಂಡಿದ್ದ ಜಶ್ನೆ ಈದ್ ಮಿಲಾದುನ್ನಬಿ(ಸ್ವ) ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡಿನ ಅನೇಕ ಸೂಫಿ-ಸಂತರು ಸತ್ಯದ ಮಾರ್ಗದ ಶಾಂತಿ ಮತ್ತು ಸೌಹಾರ್ದತೆಯಿಂದ ಜೀವನ ಸಾಗಿಸಿದ್ದಾರೆ. ಪ್ರವಾದಿ ಅವರ ಜೀವನಗಾಥೆಯನ್ನು ಪ್ರತಿಯೊಬ್ಬರು ಅನುಸರಿಸಬೇಕು. ದೇವರು ಒಬ್ಬನೇ ಆದರೆ ಅವರನ್ನು ಆರಾಧಿಸುವ ಮಾರ್ಗಗಳು ಬೇರೆ-ಬೇರೆಯಾಗಿವೆ. ಅನಿರ್ವಾಯತೆಯ ಬದುಕು ಬದುಕಬಾರದು. ಜನಪರ ಕೆಲಸದಲ್ಲಿ ಭಾಗಿ ಸಾರ್ಥಕತೆಯ ಬದುಕಿನತ್ತ ಹೆಜ್ಜೆ ಹಾಕಬೇಕು. ಇಂದಿನ ಯುವಪೀಳಿಗೆಗೆ ಶರಣರ, ದಾರ್ಶನಿಕರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು ಎಂದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ನಗರಸಭೆ ಉಪಾಧ್ಯಕ್ಷ ಮುರ್ತುಜಾಹುಸೇನ್ ಮಾತನಾಡಿದರು. ನಗರಸಭೆ ಸದಸ್ಯರಾದ ಕೆ.ಜಿಲಾನಿಪಾಷಾ, ಮುನೀರ್‌ಪಾಷಾ, ಶರಣಪ್ಪ ಉಪ್ಪಲದೊಡ್ಡಿ, ಆಲಂಭಾಷಾ, ಹೆಚ್.ಭಾಷಾ, ಮುಖಂಡರಾದ ಪಂಪನಗೌಡ ಬಾದರ್ಲಿ, ಜಾಫರ್‌ಅಲಿ ಜಾಹಗೀರ್‌ದಾರ್, ಬಾಬರ್‌ಪಾಷಾ, ಹೆಚ್.ಎನ್.ಬಡಿಗೇರ್, ಖಾದರ್‌ಸುಭಾನಿ, ಎಂ.ಡಿ.ನದೀಮುಲ್ಲಾ, ಹಾಜಿಮಸ್ತಾನ್, ಖಾಜಿಮಲಿಕ್ ವಕೀಲ, ಹುಸೇನ್‌ಸಾಬ್ ಟಿ., ಧರ್ಮನಗೌಡ ಮಲ್ಕಾಪುರ, ಅಬ್ದುಲ್ ಖದೀರ್, ಮೌಲಾನಾ ತಾಜುಮುದ್ದೀನ್‌ಸಾಬ್, ಶಿವುಗುಂಜಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here