ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಲಷ್ಕರ್ ಎ ತೊಯ್ಬಾ; ಐಜಿಪಿ ವಿಜಯ್ ಕುಮಾರ್

0
182

ಶ್ರೀನಗರ:  ಕುಲ್ಗಾಮ್ ನಲ್ಲಿ ಕಳೆದ ರಾತ್ರಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಲಷ್ಕರ್ ಎ ತೊಯ್ಬಾ ಉಗ್ರರ ಕೈವಾಡವಿದೆಯೆಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.

ಎಲ್ಇಟಿಯ ಛದ್ಮ ಸಂಘಟನೆಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿ ಆರ್ ಎಫ್)  ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ.

ಹತ್ಯೆಗೆ ಬಳಕೆ ಮಾಡಲಾಗಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪಾಕಿಸ್ತಾನದ ಆಣತಿಯಂತೆ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಫಿದಾ ಹುಸೇನ್ ಇಟೂ ಮತ್ತು ಇನ್ನಿಬ್ಬರು ಕಾರ್ಯಕರ್ತರಾದ ಉಮರ್ ಹಜಾಮ್ ಮತ್ತು ಹರೂನ್ ರಶೀದ್ ಬೇಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

LEAVE A REPLY

Please enter your comment!
Please enter your name here