ಬಂಧನ ಭೀತಿಯಿಂದ ಮಾಜಿ ಮೇಯರ್ ಸಂಪತ್  ರಾಜ್ ರಾತ್ರೋರಾತ್ರಿ ಆಸ್ಪತ್ರೆಯಿಂದ ಪರಾರಿ

ಸಂಪತ್ ರಾಜ್ ಗಾಗಿ ಸಿಸಿಬಿ ಅಧಿಕಾರಿಗಳು ಹಾಗೂ ಎನ್ ಐಎ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ

0
11

ಬೆಂಗಳೂರು: ಸಿಸಿಬಿಯಿಂದ ಬಂಧನ ಭೀತಿಯಿಂದಾಗಿ ಮಾಜಿ ಮೇಯರ್ ಸಂಪತ್  ರಾಜ್ ರಾತ್ರೋರಾತ್ರಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಪತ್ ರಾಜ್ ಬುಧವಾರವೇ ಬಿಡುಗಡೆಗೊಂಡಿದ್ದು, ಬಳಿಕ ಪರಾರಿಯಾಗಿದ್ದಾರೆ.ಗುರುವಾರ ರಾತ್ರಿ ಸಿಸಿಬಿ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗುವ ಭೀತಿಯಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪ್ರಕರಣದ 51ನೇ ಆರೋಪಿ ಸಂಪತ್  ರಾಜ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಬ್ಯಾಪಿಸ್ಟ್ ಆಸ್ಪತ್ರೆ ವಿರುದ್ಧ ಸಿಸಿಬಿ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಸಂಪತ್ ರಾಜ್ ಡಿಶ್ಚಾರ್ಜ್ ಆಗುವ ಬಗ್ಗೆ ಮಾಹಿತಿ ನೀಡದ ಆಸ್ಪತ್ರೆಗೆ ತೆರಳಿ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಹಾಗಾಗಿ ಸದ್ಯ ಸಂಪತ್ ರಾಜ್ ಗಾಗಿ ಸಿಸಿಬಿ ಅಧಿಕಾರಿಗಳು ಹಾಗೂ ಎನ್ ಐಎ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here