ಜಿಲ್ಲಾಧಿಕಾರಿ ಆರ್ ವೆಂಕಟೇಶ ಕುಮಾರ್‌ರಿಂದ ಮತ ಪೆಟ್ಟಿಗೆ ಪರಿಶೀಲನೆ

0
169

ರಾಯಚೂರು, ಅ 28:-  ಬಿಸಿಲು ನಾಡಿನ ಆರು ಜಿಲ್ಲೆಗಳನ್ನೊಳಗೊಂಡ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು ಶೇ 73.32 ಮತದಾನವಾಗಿದೆ.

ಕರ್ಲ್ಬುಗಿ ವಿಭಾಗ ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆ ಗಳಲ್ಲಿ ಪ್ರತಿಷ್ಠಿತ ಈ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದೆ.
ಮತ ಕ್ಷೇತ್ರದಲ್ಲಿ ಒಟ್ಟು 29236 ಮತದಾರರು ಇದ್ದು ಇದರಲ್ಲಿ 18,943, ಪುರುಷ ಮತ್ತು 10,285 ಮಹಿಳಾ ಮತದಾರರು ಇದ್ದಾರೆ. ಇವರಲ್ಲಿ ಇಂದಿನ ಮತದಾನದಲ್ಲಿ 15058 ಪುರುಷರು ಮತ್ತು 6378 ಮಹಿಳೆಯರು ಸೇರಿ ಒಟ್ಟು 21,436 ಜನರು ಹಕ್ಕು ಚಲಾಯಿಸಿದ್ದಾರೆ.

ಕರ್ಲ್ಬುಗಿ-ಶೇ 67.72, ಬೀದರ ಶೇ 74.40, ಯಾದಗಿರಿ ಶೇ 81.59. ರಾಯಚೂರು ಶೇ 74.97. ಕೊಪ್ಪಳ ಶೇ 80, ಬಳ್ಳಾರಿ ಶೇ 74.34. ಮತದಾನವಾಗಿದೆ.

ಎಲ್ಲಾ ಜಿಲ್ಲೆಗಳಿಂದ ಮತ ಪೆಟ್ಟಿಗೆಗಳನ್ನು ಮತ ಎಣಿಕೆಗಾಗಿ ಕರ್ಲ್ಬುಗಿಗೆ ಕಳುಹಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಡಿಮಸ್ಟ್ರಿಂಗ್ ಪರಿಶೀಲಿಸಿದರು.

LEAVE A REPLY

Please enter your comment!
Please enter your name here