ಸನ್ ರೈಸರ್ಸ್ ಹೈದರಾಬಾದ್ ಮಾಡು ಇಲ್ಲವೇ ಮಡಿ ಪರಿಸ್ಥಿತಿ.

0
169

ದುಬೈ, ಅ27- ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಸಾರಥ್ಯದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ೧೩ನೇ ಆವೃತ್ತಿಯ ೪೭ ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲು ಎದುರಿಸಲಿದ್ದು, ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಿಸುತ್ತಿದೆ.
ಆಡಿರುವ ೧೧ ಪಂದ್ಯಗಳಲ್ಲಿ ೪ ಜಯ ಮತ್ತು ೭ ಸೋಲುಂಡಿರುವ ಹೈದರಾಬಾದ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಡೆಲ್ಲಿ ವಿರುದ್ಧ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ಪ್ಲೇ ಆಫ್ ಹಂತದಿಂದ ಬಹುತೇಕ ಹೊರಬೀಳಲಿದೆ. ಈಗಾಗಲೇ ಅಗ್ರ ನಾಲ್ಕು ಸ್ಥಾನಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರಬಿದ್ದಿದೆ.

ಮತ್ತೊಂದೆಡೆ ಇಷ್ಟೇ ಪಂದ್ಯಗಳಿಂದ ೭ ಜಯ, ೪ ಸೋಲುಗಳೊಂದಿಗೆ ಒಟ್ಟು ೧೪ ಹೊಂದಿರುವ ಶ್ರೇಯಸ್ ಅಯ್ಯರ್ ಪಡೆ ಮಂಗಳವಾರದ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರೊಂದಿಗೆ ಪ್ಲೇ ಆಫ್ ಸ್ಥಾನವನ್ನು ಖಾತರಿಪಡಿಸಿಕೊಳ್ಳುವ ಗುರಿ ಹೊಂದಿದೆ.
ಸೆಪ್ಟೆಂಬರ್ ೨೯ರಂದು ಅಬುಧಾಬಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ತಂಡ ೧೫ ರನ್ ಗಳ ಜಯ ಗಳಿಸಿತ್ತು. ಇದೀಗ ಆ ತೀರಿಸಿಕೊಳ್ಳಲು ಡೆಲ್ಲಿ ಹವಣಿಸುತ್ತಿದೆ. ಶಿಖರ್ ಧವನ್, ಶ್ರೇಯಸ್ ಅಯ್ಯರ್ ಮತ್ತು ವೇಗಿ ಕಗಿಸೊ ರಬಾಡ ಅವರ ಶ್ರೇಷ್ಠ ಪ್ರದರ್ಶನದಿಂದ ಡೆಲ್ಲಿ ಅಂಕಪಟ್ಟಿಯ್ಲಲಿ ಉತ್ತಮ ಸ್ಥಿತಿಯಲ್ಲಿದ್ದರೂ ತನ್ನ ಹಿಂದಿನ ಎರಡು ಪಂದ್ಯಗಳಲ್ಲಿ ಪಂಜಾಬ್ ಮತ್ತು ಕೋಲ್ಕೊತಾ ವಿರುದ್ಧ ಸೋತಿರುವುದು ಆಟಗಾರರ ಹುಮ್ಮಸ್ಸಿಗೆ ಹಿನ್ನಡೆಯಾಗಿದೆ.

ಪಂದ್ಯ ಆರಂಭ: ರಾತ್ರಿ ೭.೩೦ಕ್ಕೆ
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಸನ್ ರೈಸರ್ಸ್ ಹೈದರಾಬಾದ್
ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ ಸ್ಟೋವ್, ಮನೀಶ್ ಪಾಂಡೆ, ವಿಜಯ್ ಶಂಕರ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಖಲೀಲ್ ಅಹ್ಮದ್, ಸಂದೀಪ್ ಶರ್ಮ, ಟಿ. ನಟರಾಜನ್.
ಡೆಲ್ಲಿ ಕ್ಯಾಪಿಟಲ್ಸ್ ಶ್ರೇಯಸ್ ಅಯ್ಯರ್(ನಾಯಕ), ಅಜಿಂಕ್ಯ ರಹಾನೆ, ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್, ಶಿಮ್ರಾನ್ ಹೆಟ್ಮಾಯರ್, ಮಾರ್ಕಸ್ ಸ್ಟೋಯ್ನಿಸ್, ಅಕ್ಷರ್ ಪಟೇಲ್, ಕಗಿಸೊ ರಬಾಡ, ರವಿಚಂದ್ರನ್ ಅಶ್ವಿನ್, ತುಷಾರ್ ದೇಶಪಾಂಡೆ, ಆ?ಯನ್ರಿಜ್ ನೋರ್ಜೆ.

LEAVE A REPLY

Please enter your comment!
Please enter your name here