ಮಸೀದಿಪುರ ಗ್ರಾಮವನ್ನ ಸ್ಥಳಾಂತರಕ್ಕಾಗಿ ಕಾಲ್ಡಿಗೆ ಜಾಥ

0
160

ದೇವದುರ್ಗ.ಅ.26- ಸತತ ತಿಂಗಳಿದಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಮಸೀದಿಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ ಗ್ರಾಮದಲ್ಲಿ ಭೂಮಿ ಕುಸಿಯುತ್ತಿರುವ ಪರಿಣಾಮ ಮನೆಗಳು ಬೀಳುತ್ತುವೆ ಪ್ರಾಣಭಯದಲ್ಲಿ ಜನರು ಜೀವನ ಸಾಗಿಸುತ್ತಿದ್ದು ಸಮಸ್ಯೆ ಪರಿಹಾರಕ್ಕಾಗಿ ಇದೇ ೨೮ ರಂದು ಮಸೀದಿಪುರ ಗ್ರಾಮದಿಂದ ಗಬ್ಬೂರು ನಾಡ ಕಾರ್ಯಲಯದವರೆಗೆ ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ರಾಜಪ್ಪ ಸಿರಿವಾರಕ್ ಹಾಗೂ ಶಾಂತಕುಮಾರ ಹೊನ್ನಟಗಿ ತಿಳಿಸಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ಧಿಗೊಷ್ಠಿ ನಡೆಸಿ ಮಾತನಾಡಿದರು. ತಿಂಗಳಿಂದ ಸುರಿಯುತ್ತಿರು ಮಳೆಗೆ ಇಡಿ ಗ್ರಾಮ ಜಲಾವೃತಗೊಂಡು ಊರು ಕೊಳಗೇರಿಯಾಗಿ ಮಾರ್ಪಟ್ಟಿದ್ದು ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜನರು ಗ್ರಾಮದಲ್ಲಿ ಓಡಾಡದ ರೀತಿಯಲ್ಲಿ ನೀರು ಸಂಗ್ರಹವಾಗಿರುವುದರಿಂದ ಊರು ವಿಷಜಂತುಗಳಿಗೆ ತಾಣವಾಗುತ್ತಿದೆ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಕಾಳುಗಳನ್ನು ಸಂಗ್ರಹಿಸಲು ಹಗೆವುಗಳು ಇದ್ದವು ಈಗ ಅವುಗಳ ಮೇಲೆ ಮನೆಗಳು ನಿರ್ಮಾಣವಾಗಿದ್ದರಿಂದ ಮನೆಯಲ್ಲಿ ತೆಗ್ಗೆ ಬೀಳುತ್ತಿವೆ, ಗ್ರಾಮದಲ್ಲಿ ಇಂತಹ ಘನ ಘೋರ ಸಮಸ್ಯೆಗಳಿದ್ದರೂ ತಾಲೂಕ ಆಡಳಿತ ಮತ್ತು ಜನಪ್ರತಿನಿಧಿಗಳು ಪರಿಹಾರ ಒದಗಿಸಲು ವಿಫಲವಾಗಿದೆ ಎಂದು ಖಂಡಿಸಿ

ಇಡೀ ಗ್ರಾಮವನ್ನೆ ಬೇರೆಡೆಗೆ ಸ್ಥಳಾಂತರ ಮಾಡಬೇಕು, ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾದವರಿಗೆ ಪರಿಹಾರ ನೀಡಬೇಕು, ಸರ್ಕಾರಿ ಭೂಮಿಯನ್ನಾಗಲಿ ಹಾಗೂ ಖಾಸಗಿ ಭೂಮಿಯನ್ನಾಗಲಿ ಖರೀದಿಸಿ ಪ್ರತಿ ಕುಟುಂಬಕ್ಕೆ ಮನೆಗಳನ್ನ ಕಟ್ಟಿಕೊಡಬೇಕು, ಗ್ರಾಮದಲ್ಲಿ ನೀರು ನಿಂತಲೆಲ್ಲ ಮರಂ ಹಾಕಿ ಜನರು ಓಡಾಡಲು ಅನುಕೂಲ ಮಾಡಿಕೊಡಬೇಕು ಹಾಗೂ ಊರಲ್ಲಿ ನಿಂತ ನೀರನ್ನು ಓರಗಡೆ ಹೋಗಲು ದಾರಿ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿದ್ದನಗೌಡ ಕರ್ಲಿ ಮಸಿದಿಪುರ, ಮರೆಪ್ಪ ಮಲದಕಲ್, ರಂಗನಾಥ ಮಸೀದಿಪುರ, ನಿಜಾನಂದಪ್ಪಗೌಡ ಮಸೀದಿಪುರ, ತುಕಾರಾಮ ಎನ್.ಗಣೇಕಲ್, ಮಾರೆಪ್ಪ ಹೊನ್ನಟಗಿ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here