ಫೇಸ್ ಶೀಲ್ಡ್ ಗಿಂತ ಮಾಸ್ಕ್ ಸುರಕ್ಷಿತ

0
171

ಬೆಂಗಳೂರು, ಅ.25: ಒಂದು ಕಣ್ಣಿಗೆ ಕಾಣದ ಕೊರೊನ ಎಂಬ ದುಷ್ಟ ಶಕ್ತಿಗೆ ಹೆದರಿಕೊಂಡು ಕೇವಲ ಹಗಲು ಹೊತ್ತಿನಲ್ಲೇ ನಾವು ಮಾಸ್ಕ್ ಇಲ್ಲದೆ ಮನೆಯಿಂದ ಹೊರ ಬರುವಂತಿಲ್ಲ. ಈಗ ನಮಗೆ ಮಾಸ್ಕ್ ಬಿಟ್ಟರೆ ಕೊರೋನ ವೈರಸ್ ಸೋಂಕಿನ ವಿರುದ್ಧ ರಕ್ಷಣೆ ಮಾಡಿಕೊಳ್ಳಲು ಬೇರೆ ಯಾವುದೇ ಮಾರ್ಗವಿಲ್ಲ.  ಯಾವುದೇ ದೇಶ ಕಂಡು ಹಿಡಿಯುತ್ತಿರುವ ಲಸಿಕೆ ಸದ್ಯದ ಕೊರೊನಾ ವೈರಸ್ ಹಾವಳಿಯ ವಿರುದ್ಧ ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಸಹ ಸಾಧ್ಯವಿಲ್ಲ.

ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಕಲೇಬೇಕು ಮಾಸ್ಕ್ ಅಂದರೆ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿರುವುದು ಏನೆಂದರೆ, ಒಂದು ವೇಳೆ ಈಗ ಕೋವಿಡ್ – 19 ರ ವಿರುದ್ಧ ಲಸಿಕೆ ಬಂದರೂ ಕೂಡ ಅದನ್ನು ಸೋಂಕಿತ ವ್ಯಕ್ತಿಗೆ ಒಮ್ಮೆ ನೀಡಿದ ಬಳಿಕ ಅದರ ಪ್ರಭಾವ ಕೇವಲ ಕೆಲವು ದಿನಗಳು ಮಾತ್ರ ಇದ್ದು, ಮೊದಲು ಸೋಂಕಿತನಾಗಿದ್ದ ವ್ಯಕ್ತಿಯಲ್ಲಿ ರೋಗ – ಲಕ್ಷಣಗಳು ಮತ್ತೊಮ್ಮೆ ಉಲ್ಬಣ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಲಸಿಕೆಯನ್ನು ವರ್ಷದಲ್ಲಿ ಮೂರು- ನಾಲ್ಕು ಬಾರಿ ನೀಡಬೇಕಾಗಿ ಬರುತ್ತದೆ. ಹಾಗಾಗಿ ಲಸಿಕೆಯ ಮೇಲೆ ಜನರಿಗೆ ನಂಬಿಕೆ ಸದ್ಯಕ್ಕೆ ಅಷ್ಟಕಷ್ಟೇ ಇದೆ. ನಮ್ಮನ್ನು ನಾವು ಕೊರೋನಾ ವೈರಸ್ ಸೋಂಕಿನಿಂದ ರಕ್ಷಣೆ ಮಾಡಿಕೊಳ್ಳಲು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಸಂಸ್ಥೆಯ ಶಿಫಾರಸಿನಂತೆ ಫೇಸ್ ಮಾಸ್ಕ್ ಸದ್ಯ ಎಲ್ಲಾ ಕಡೆ ಚಾಲ್ತಿಯಲ್ಲಿದೆ. ಫೇಸ್ ಮಾಸ್ಕ್ ಜೊತೆಗೆ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಕೂಡ ಜನರು ಬಳಕೆ ಮಾಡುತ್ತಿರುವುದು ನಾವು ಪ್ರತಿ ದಿನ ಮನೆಯ ಹೊರಗಡೆ ಅಲ್ಲಿ – ಇಲ್ಲಿ ನೋಡುತ್ತಿದ್ದೇವೆ. ಮೊದಲಿಗೆ ಆಸ್ಪತ್ರೆಯ ವೈದ್ಯರು, ದಾದಿಯರಿಂದ ಪ್ರಾರಂಭವಾದ ಫೇಸ್ ಶೀಲ್ಡ್ ಸದ್ಯ ಸಾಮಾನ್ಯ ಜನರಿಗೂ ಸುಲಭವಾಗಿ ಉಪಲಬ್ಧವಿದೆ. ಆದರೆ ಕೊರೋನ ವೈರಸ್ ಸೋಂಕಿನ ವಿರುದ್ಧ ಇದು ಅಷ್ಟೇನೂ ಪರಿಣಾಮಕಾರಿಯಲ್ಲ ಎಂಬುದು ಆರೋಗ್ಯ ತಜ್ಞರ ವಾದ.

ಪ್ಲಾಸ್ಟಿಕ್ ಫೇಸ್ ಶೀಲ್ಡ್ ಧರಿಸಿದ ಸಂದರ್ಭದಲ್ಲಿ ನಿಮ್ಮ ಮೂಗು ಹಾಗೂ ಬಾಯಿ ಮುಚ್ಚುವಂತೆ ಫೇಸ್ ಮಾಸ್ಕ್ ಧರಿಸಿರುವುದು ಉತ್ತಮ. ಫೇಸ್ ಮಾಸ್ಕ್ ಬದಲು ಪ್ಲಾಸ್ಟಿಕ್ ಫೇಸ್ ಶೀಲ್ಡ್ ಬಳಕೆ ಮಾಡಲು ಮುಂದಾಗಿದ್ದಾರೆ. ಫೇಸ್ ಮಾಸ್ಕ್ ಗೆ ಹೋಲಿಸಿದರೆ ಇದು ಧರಿಸಲು ತುಂಬಾ ಆರಾಮದಾಯಕ ಎನ್ನುವುದು ಪ್ರತಿಯೊಬ್ಬರ ಭಾವನೆ. ಆದರೆ ಕೊರೊನಾ ವೈರಸ್ ಸೋಂಕು ತಡೆಗಟ್ಟುವಿಕೆಯಲ್ಲಿ ಇದರ ಪಾತ್ರ ಅಷ್ಟೇನಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಸತ್ಯ. ಹಾಗಾಗಿ ತಜ್ಞರ ಪ್ರಕಾರ ಒಂದು ವೇಳೆ ನೀವು ಪ್ಲಾಸ್ಟಿಕ್ ಫೇಸ್ ಶೀಲ್ಡ್ ಅನ್ನು ಬಳಸುತ್ತೀರಿ ಎಂದಾದರೆ ಅದನ್ನು ಕೇವಲ ನೀವು ಧರಿಸುವ ಹತ್ತಿ ಬಟ್ಟೆಯ ಫೇಸ್ ಮಾಸ್ಕ್ ಜೊತೆಗೆ ಪೂರಕವಾಗಿ ಬಳಸಬೇಕು. ಫೇಸ್ ಮಾಸ್ಕ್ ಬಳಸದೆ ಯಾವುದೇ ಕಾರಣಕ್ಕೂ ನೇರವಾಗಿ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಒಂದನ್ನೇ ಬಳಸುವ ಹಾಗಿಲ್ಲ.

ಪ್ಲಾಸ್ಟಿಕ್ ಫೇಸ್ ಶೀಲ್ಡ್ ಸ್ವಲ್ಪ ಪ್ರಮಾಣದವರೆಗೆ ಹರಡುವಿಕೆಯನ್ನು ತಡೆಯಬಲ್ಲದು ಎಂಬ ಮಾತಿದೆ. ಏಕೆಂದರೆ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಧರಿಸುವುದರಿಂದ ಕಣ್ಣು, ಮೂಗು, ಬಾಯಿ ಅಥವಾ ಮುಖದ ಮೇಲೆ ಬೇರೆಯವರು ಕೆಮ್ಮಿದಾಗ ಅಥವಾ ಸೀನಿದಾಗ ಸಣ್ಣ ಮತ್ತು ಅತಿ ಸಣ್ಣ ನೀರಿನ ಕಣಗಳು ಬಂದು ಬೀಳುವುದರಿಂದ ತಪ್ಪಿಸಿಕೊಳ್ಳಬಹುದು.  ಪ್ಲಾಸ್ಟಿಕ್ ಫೇಸ್ ಶೀಲ್ಡ್ ಧರಿಸಿದರೂ ಕೂಡ ಒಂದು ವೇಳೆ ಒಳಗೆ ಬಟ್ಟೆಯ ಫೇಸ್ ಮಾಸ್ಕ್ ಹಾಕಿಕೊಳ್ಳದಿದ್ದರೆ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಅಕ್ಕಪಕ್ಕದ ಜಾಗಗಳಿಂದ ಉಸಿರಾಡುವ ಸಂದರ್ಭದಲ್ಲಿ ಸುಲಭವಾಗಿ ವ್ಯಕ್ತಿಯ ದೇಹ ಪ್ರವೇಶ ಮಾಡುವ ಸಾಧ್ಯತೆ ಇದೆ. ಹಾಗಾಗಿ ಪ್ಲಾಸ್ಟಿಕ್ ಫೇಸ್ ಶೀಲ್ಡ್ ತನ್ನ ಪರಿಣಾಮಕಾರಿತ್ವವನ್ನು ಸಾಧಿಸಬೇಕಾದರೆ ಅದನ್ನು ಫೇಸ್ ಮಾಸ್ಕ್ ಜೊತೆಗೆ ಉಪಯೋಗಿಸಬೇಕು.

LEAVE A REPLY

Please enter your comment!
Please enter your name here