ನ.5ರ ವರೆಗೆ ಪ್ರವಾದಿ ಮೊಹಮ್ಮದ್ ರ ಸೀರತ್ (ಜೀವನ ಚರಿತ್ರೆ) ಸಂದೇಶದ “ಮಾನವತೇಯ ಮಾರ್ಗದರ್ಶಕ” ಅಭಿಯಾನ

ಪ್ರವಾದಿ ಮೊಹಮ್ಮದ್ ಅವರ ಜೀವನ ಚರಿತ್ರೆಯನ್ನು ಸಂದೇಶ ಸಾರುವ ನಿಟ್ಟಿನಲ್ಲಿ ಜಮಾಅತ್ ಇಸ್ಲಾಮಿ ಹಿಂದ್ ವತಿಯಿಂದ ದಿನಾಂಕ ಅ. 23 ರಿಂದ. 5ರ ವರೆಗೆ ಮಾನವತೆಯ ಮಾರ್ಗದರ್ಶಕ ಎಂಬ ಶೀರ್ಷಿಕೆ ಅಡಿಯಲ್ಲಿ ಅಭಿಯಾನ

0
320

ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ .5ರ ವರೆಗೆ ಪ್ರವಾದಿ ಮೊಹಮ್ಮದ್ ರ ಸೀರತ್ “ಮಾನವತೇಯ ಮಾರ್ಗದರ್ಶಕ” ಅಭಿಯಾನ

ಮಾನವಿ, ಅ.24 ಶನಿವಾರ. ಪ್ರವಾದಿ ಮೊಹಮ್ಮದ್ ಅವರ ಜೀವನ ಚರಿತ್ರೆಯನ್ನು ಸಂದೇಶ ಸಾರುವ ನಿಟ್ಟಿನಲ್ಲಿ ಜಮಾಅತ್ ಇಸ್ಲಾಮಿ ಹಿಂದ್ ವತಿಯಿಂದ ದಿನಾಂಕ ಅ. 23 ರಿಂದ. 5ರ ವರೆಗೆ ಮಾನವತೆಯ ಮಾರ್ಗದರ್ಶಕ ಎಂಬ ಶೀರ್ಷಿಕೆ ಅಡಿಯಲ್ಲಿ ಅಭಿಯಾನ ನಡೆಯುತ್ತದೆ. ಇದರ ಅಂಗವಾಗಿ ಮಾನವಿ ನಗರದ ಸ್ಥಾನೀಯ ಘಟಕವೂ ಸಹ ನಗರ ಮತ್ತು ತಾಲೂಕ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನ ನಡೆಸಲಾಗುತ್ತದೆ ಎಂದು ಅಭಿಯಾನದ ಸಂಚಾಲಕ ಶಿಕ್ಷಕ  ಸಬ್ಜ ಅಲಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಜಮಾಅತ್ ಇಸ್ಲಾಮಿ ಹಿಂದ್ ಮಾನವಿ ವತಿಯಿಂದ ಸೀರತ್ ಅಭಿಯನದ ಅಂಗವಾಗಿ ವಿಚಾರ ವಿನಿಮಯ ಕಾರ್ಯಕ್ರಮಗಳು

ಅ. 24ರಂದು ಪತ್ರಿಕಾ ಘೊಷ್ಠಿ, 25ರಂದು ಬೆಳಿಗ್ಗೆ 11 ಗಂಟೆಗೆ ಈದ್ಗಾ ಶಾದೀ ಮಹಲ್ ನಲ್ಲಿ, ಅ, 26ರಂದು ಸಂಜೆ 6:30ಕ್ಅಂಕೆ ಬೇಡ್ಕರ್ ಭವನ ದಲ್ಲಿ ಸಾರ್ವಜನಿಕ ವಿಚಾರ ಸಂಕೀರ್ಣ ಜರುಗಲಿವೆ.

ಅದೇ ರೀತಿ ಮುಸ್ಲಿಮ್ ಬಾಂಧವರಿಗಾಗಿ ವಿಶೇಷ ಕಾರ್ಯಕ್ರಮಗಳು ಅ. 30ರಂದು ಕುಬಾ ಮಸೀದಿ ಸಭಾಂಗಣದಲ್ಲಿ ಜರುಗುವುದು ಅ. 31ರಂದು ಸ್ವಚ್ಚತಾ ಅಭಿಯಾನ ಅಮರೇಗೌಡ ಕಾಂಪ್ಲೆಕ್ಸ ನಿಂದ ಸಾರ್ವಜನಿಕ ಬಸ್ ನಿಲ್ದಾಣದವರೆಗೆ ಮತ್ತು ಅ.5 ರಂದು ಸಂಜೆ 6.30ಕ್ಕೆ  ಕುಬಾ ಮಸೀದಿಯ ಸಭಾಂಗಣದಲ್ಲಿ ಬಹಿರಂಗ ವಿಚಾರ ಗೋಷ್ಠಿ ನಡೆಯುತ್ತದೆ ಮತ್ತು ಜಮಾತ್ ನ ಕಾರ್ಯಕರ್ತರು ನಗರದ ಕವಿಗಳನ್ನು ಸಾಹಿತಿಗಳನ್ನು ಹಾಗೂ ನಗರದ ಗಣ್ಯರನ್ನು ವೈಯಕ್ತಿಕ ಭೇಟಿ ನೀಡಿ ಅಭಿಯಾನದ ಸಂದೇಶ ತಲುಪಿಸಲಾಗುವುದು ಎಂದು ತಿಳಿಸಿದರು.

ಉಮರ್ ಫಾರೂಕ್ ಸಹ ಮಾತನಾಡಿ ಅಭಿಯಾನದ ಮಹತ್ವ ತಿಳಿಸಿದರು.

ಈ ಸಂದರ್ಭದಲ್ಲಿ ಜಮಾಅತ್ ನ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಮ್ ಖಾನ್, ಜೆ ಚಂದಾಹುಸೇನ್, ಗುಲಾಮ್ ರಸೂಲ್, ಉಮರ್ ಫಾರೂಕ್ ದೇವರ ಮನಿ, ಶೇಕ್ ಬಾಬ ಹುಸೇನ್, ಜುಬಿನ್ ಅಹಮದ್ ಖಾನ್ ಸೇರಿದಂತೆ ಇತರರು ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here