ಈಶಾನ್ಯ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ: ಜೆಡಿಎಸ್ ಅಭ್ಯರ್ಥಿ-ತಿಮ್ಮಯ್ಯ ಪುರ್ಲೆ

ಶಿಕ್ಷಕರ ಕ್ಷೇತ್ರದ ಮತದಾರಿಗೆ ಈ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದೆ; ಜೆಡಿಎಸ್ ಅಭ್ಯರ್ಥಿ-ತಿಮ್ಮಯ್ಯ ಪುರ್ಲೆ

0
179

ರಾಯಚೂರು.ಅ.25.ಇದೇ ತಿಂಗಳು 28 ರಂದು ನಡೆಯುವ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಸ್ವಾಭಿಮಾನದ ಚುನಾವಣೆ ಯಾಗಿದ್ದು , ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕನು ಸ್ಪರ್ಧೆಗೆ ಇಳಿದಿದ್ದು , ಚುನಾವಣೆ ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆಯಾಗಿರುವುದರಿಂದ ಮತದಾರರು ನನ್ನನು ಬೆಂಬಲಿಸಿ ಗೆಲ್ಲಿಸುವ ಮೂಲಕ ಸ್ವಾಭಿಮಾನವನ್ನು ಉಳಿಸಿಕೊಳ್ಳುವ ಭರವಸೆ ನಮಗಿದೆ ಎಂದು ಜೆಡಿಎಸ್ ಪಕ್ಷದ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರು ಮಾತನಾಡುತ್ತ,

ಈಶಾನ್ಯ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದ ಒಂದು ಶಿಕ್ಷಕರ ಕ್ಷೇತ್ರವಾಗಿದ್ದು , ಇಲ್ಲಿ ಶಿಕ್ಷಕರೆ ಸ್ಪರ್ಧಿಸಬೇಕು ಎನ್ನುವ ಅಭಿಲಾಷೆಯಿಂದ ಜೆಡಿಎಸ್ ಪಕ್ಷದ ವರಿಷ್ಟರು ನನ್ನನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು , ಪ್ರಥಮವಾಗಿ ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕ ಕಣದಲ್ಲಿ ಇದ್ದು , ಶಿಕ್ಷಕರ ಕ್ಷೇತ್ರದ ಸಣ್ಣ ಸಣ್ಣ ಸಮಸ್ಯೆಗಳು ನಾನು ಬಲ್ಲವನಾಗಿದ್ದು , ಶಿಕ್ಷಕರ ಕ್ಷೇತ್ರದ ಮತದಾರಿಗೆ ಈ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದೆ.

ಶಿಕ್ಷಕರ ಸಮಸ್ಯೆಗಳನ್ನು ಎದುರಿಸಲು ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾದ ಶಿಕ್ಷಕನಷ್ಟೇ ಸಮರ್ಥನಾಗಬಲ್ಲ ಇಲ್ಲಿಯವರೆಗೂ ಬಹಳಷ್ಟು ಕಡೆಗಳಲ್ಲಿ ಶಿಕ್ಷಕರಲ್ಲದವರೂ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಶಿಕ್ಷಕರು ಮತ್ತು ಪ್ರತಿನಿಧಿಗಳ ನಡುವೆ ಸಮನ್ವಯತೆ ಕೊರತೆಯಿಂದ ಕ್ಷೇತ್ರದ ಸಮಸ್ಯೆಗಳು ಪರಿಹಾವಾಗಿಲ್ಲ , ಹಿನ್ನೆಲೆಯಲ್ಲಿ ಈ ಬಾರಿಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ವೀರುಪಾಕ್ಷಿ,ಎಂ.ಪವನ ಕುಮಾರ್,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here