ಪ್ರವಾದಿ ಮೊಹಮ್ಮದ್ ಪೈಗಂಬರ್ ಇಡೀ ಮಾನವ ಕುಲಕ್ಕೆ ಮಾರ್ಗದರ್ಶಕ; ಜೆಐಏಚ್ ಮಾನವಿ

ಆಮಾಅತೆ ಇಸ್ಲಾಮಿ ಹಿಂದ್ ಸದಾ ಧಾರ್ಮಿಕ ಸಂದೇಶಗಳನ್ನ ನೀಡುತ್ತಾ ಬಂದಿರುವ ಸಂಘಟನೆ

0
156

ಪ್ರವಾದಿ ಮೊಹಮ್ಮದ್ ಪೈಗಂಬರ್ ಇಡೀ ಮಾನವ ಕುಲಕ್ಕೆ ಮಾರ್ಗದರ್ಶಕ

ಅ,25. ರವಿವಾರ. ಪ್ರವಾದಿ ಮೊಹಮ್ಮದ್ ಪೈಗಂಬರ್ ಇಡೀ ಮಾನವ ಕುಲಕ್ಕೆ ಮಾರ್ಗದರ್ಶಕರಾಗಿ ಬಂದಿದ್ದರು ಅವರ ಜೀವನ ಚರಿತ್ರೆಯ ಸಂದೇಶ ದೇಶದ ಜನತೆಗೆ ತಲುಪಿಸುವ ಮತ್ತು ಅದರ ಪ್ರಕಾರ ನಮ್ಮ ಬದುಕು ನಡೆಸಲು ಪ್ರತಿಯೊಬ್ಬರೂ ಸಹ ಪ್ರಯತ್ನಿಸ ಬೇಕು ಧಾರ್ಮಿಕ ವಿಚಾರಗಳನ್ನ ಎಲ್ಲರೂ ಅರಿತು ಬಾಳಿದರೆ ಶಾಂತಿ ಸುಖ ಬದುಕಿನಲ್ಲಿ ಕಾಣಲು ಸಾಧ್ಯ ಎಂದು ಕ.ಸಾ.ಪಾ ತಾಲೂಕ ಅಧ್ಯಕ್ಷ ಮುಜೀಬ್ ಹೇಳಿದರು

ಅವರಿಂದು ಈದ್ಗಾ ಶಾದಿಮಹಲ್ ನಲ್ಲಿ ಜಮಾಅತೇ ಇಸ್ಲಾಮಿ ಹಿಂದ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಆಮಾಅತೆ ಇಸ್ಲಾಮಿ ಹಿಂದ್ ಸದಾ ಧಾರ್ಮಿಕ ಸಂದೇಶಗಳನ್ನ ನೀಡುತ್ತಾ ಬಂದಿರುವ ಸಂಘಟನೆ ಪ್ರವಾದಿ ಮೋಹಮ್ಮದ್ ಅವರ ಹುಟ್ಟಿದ ದಿನ ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವಾದಿಯ ಚರಿತ್ರೆಯ ಸಂದೇಶ ತಲುಪಿಸುವ ನಿಟ್ಟಿನಲ್ಲಿ ರಾಜ್ಯದ್ಯಂತ ಅಭಿಯಾನ ಹಮ್ಮಿಕೋಂಡಿರುವುದು ಸ್ವಾಗತಾರ್ಹ ಈ ಲೊಕದಲ್ಲಿ ಸತ್ಯ ಮಿಥ್ಯವನ್ನ ತಿಳಿದು ಪ್ರವಾದಿಗಳನ್ನ ಶರಣರನ್ನ ಇತರೇ ಧರ‍್ಮಿಕ ಗುರುಗಳನ್ನ ನಂಬಿಕೋAಡು ಅವರ ಮಾರ್ಗದರ್ಶನದಲ್ಲಿ ಬದುಕುವುದು ಉತ್ತಮ ಎಂದು ಕ.ಸಾ.ಪಾ ನಿಕಟಪೂರ್ವ ಅಧಯಕ್ಷ ಮೂಕಪ್ಪ ಕಟ್ಟಿಮನಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಜಮಾತ್ ಸದಸ್ಯರಾದ ಗುಲಾಮ್ ರಸೂ¯ ಪ್ರಾಸ್ತಾವಿಕ ನುಡಿ ಹೇಳಿದರೆ ಶಿಕ್ಷಕ ಸಬ್ಜಲಿ ಸಾಬ್ ವಿಷಯ ಮಂಡಿಸಿದರು, ಉಮರ ಫಾರೂಕ್ ಸಮಾರೋಪ ಭಾಷಣ ಮಾಡಿದರು. ಅಬುಲ್ ಆಲಾ ಖುರಾನ್ ಪಠಿಸಿದರೆ ಶೇಕ್ ಬಾಬ ಹುಸೇನ್ ನಿರೂಪಿಸಿದರು.
ವೇದಿಕೆಯಲ್ಲಿ ಆಮಾತ್ ನ ಅಧ್ಯಕ್ಷ ಅಬ್ದುಲ್ ಕರೀಮ್ ಖಾನ್ ಹಾಗೂ ಉಪಾಧ್ಯಕ್ಷ ಅಬ್ದರ‍್ರಹ್ಮಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here