ಐಪಿಎಲ್: ಹೈದ್ರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಜಯ

ವೇಗಿ ಕ್ರಿಸ್ ಜೋರ್ಡನ್ ಹಾಗೂ ಆರ್ಶ್ ದೀಪ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್ ರೈಸರ್ಸ್ ಹೈದರಾಬಾದ್,

0
75

ಐಪಿಎಲ್: ಹೈದ್ರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಜಯ.

ದುಬೈ: ವೇಗಿ ಕ್ರಿಸ್ ಜೋರ್ಡನ್ ಹಾಗೂ ಆರ್ಶ್ ದೀಪ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್ ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 12 ರನ್ ಗಳ ವಿರೋಚಿತ ಸೋಲು ಅನುಭವಿಸಿತು.
ಡೆತ್‌ ಓವರ್ ನ ಕೊನೆಯ 2 ಓವರಲ್ಲಿ ಹೈದ್ರಾಬಾದ್ ನ 5 ವಿಕೆಟ್ ಕಿತ್ತ ವೇಗಿಗಳು ಪಂಜಾಬ್ ಗೆ ಅಧಿಕಾರಯುತ ಗೆಲುವು ತಂದುಕೊಟ್ಟರು. ಈ ಜಯದೊಂದಿಗೆ ‌10 ಅಂಕ ಪಡೆದ ಪಂಜಾಬ್ 5 ನೇ ಸ್ಥಾನಕ್ಕೇರಿದ್ದು ಪ್ಲೇ ಆಫ್ ಆಸೆಯನ್ನು ಜೀವಂತ ಇರಿಸಿದೆ. ಟೂರ್ನಿಯಲ್ಲಿ ಪಂಜಾಬ್ ಸತತ 4 ನೇ ಗೆಲುವು ಪಡೆಯಿತು.

ಹೀನಾಯ ಸೋಲುಂಡ ಹೈದ್ರಾಬಾದ್ ಮುಂದಿ‌ನ ಹಾದಿ ಕಠಿಣ ವಾಗಿದೆ.

ಜೋರ್ಡನ್-ಆರ್ಶ್ ದೀಪ್ ಮಾರಕ ದಾಳಿ:

 

ಪಂಜಾಬ್ ನೀಡಿದ 127 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಹೈದ್ರಾಬಾದ್ ಉತ್ತಮ ಆರಂಭ ಪಡೆಯಿತು. ಮೊದಲ ಪವರ್ ಪ್ಲೇ ನಲ್ಲಿ ಹೈದ್ರಾಬಾದ್ 50 ರನ್ ಗಳಿಸಿತ್ತು. 7 ನೇ ಓವರ್ ಸ್ಪಿನ್ನರ್ ಬಿಷ್ಣೋಯಿಗೆ ನಾಯಕ ರಾಹುಲ್ ಚೆಂಡನ್ನಿತ್ತರು. ಬಿಷ್ಣೋಯಿ, ನಾಯಕನ ಭರವಸೆ ಹುಸಿ ಮಾಡಲಿಲ್ಲ. ತನ್ನ ಓವರ್ ನ 2 ನೇ ಎಸೆತದಲ್ಲಿ ವಾರ್ನರ್ (35) ವಿಕೆಟ್ ಪಡೆಯುವ ಮೂಲಕ ಹೈದ್ರಾಬಾದ್ ಗೆ ಆರಂಭಿಕ ಆಘಾತ ನೀಡಿದರು. ನಂತರದ ಓವರಲ್ಲಿ ಮುರುಗನ್ ಅಶ್ವಿನ್ ಎಸೆತವನ್ನು ಅರಿಯುವಲ್ಲಿ ಎಡವಿದ ಬೇರ್ ಸ್ಟೋ (19) ಕ್ಲೀನ್ ಬೌಲ್ಡ್ ಆದರು. ಹೈದ್ರಾಬಾದ್ 58 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಅಬ್ದುಲ್ ಸಮದ್ (7) ಹೆಚ್ಚು ಹೊತ್ತು ನಿಲ್ಲಲಿಲ್ಲ. 4 ನೇ ವಿಕೆಟ್ ಗೆ ವಿಜಯ್ ಶಂಕರ್ ಹಾಗೂ ಮನೀಶ್ ಪಾಂಡೆ ತಾಳ್ಮೆಯ ಬ್ಯಾಟಿಂಗ್ ನಿಂದ ಚೇತರಿಕೆ ನೀಡಿದರು.

ಜೋರ್ಡನ್ ಓವರಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮನೀಶ್ (15) ಸುಚಿತ್ ಹಿಡಿದ ಅತ್ಯದ್ಭುತ ಕ್ಯಾಚ್ ಗೆ ವಿಕೆಟ್ ಕೈ ಚೆಲ್ಲಿ ಹೊರನಡೆದರು. ಮನೀಶ್ ಔಟಾದಾಗ ಹೈದ್ರಾಬಾದ್ 100 ರನ್ ಗಳಿಸಿತ್ತು. ನಂತರದ 14 ರನ್ ಗಳಿಸುವಷ್ಟರಲ್ಲಿ ಹೈದ್ರಾಬಾದ್ ಆಲೌಟ್ ಗೆ ಗುರಿ ಯಾಯಿತು. ಹೈದ್ರಾಬಾದ್ 19.5 ಓವರಲ್ಲಿ 114 ರನ್ ಗಳಿಸಿ ಆಲೌಟ್ ಆಯಿತು.

ಪೂರನ್ ಆಸರೆ:

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭದಿಂದಲೂ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪಂಜಾಬ್ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ ಪೂರನ್, ತಂಡದ‌ ಸಾಧಾರಣ ಮೊತ್ತಕ್ಕೆ ಆಸರೆಯಾದರು. ಪೂರನ್ 32 ರನ್ ಗಳಿಸಿದರು. ಪಂಜಾಬ್ 20 ಓವರಲ್ಲಿ 7 ವಿಕೆಟ್ ಗೆ 126 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರ್

ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರಲ್ಲಿ 126/7
(ಪೂರನ್ 32*, ರಾಹುಲ್ 27, ನೋಕಿಯೆ 2-27)
ಹೈದ್ರಾಬಾದ್ 19.5 ಓವರಲ್ಲಿ 114/10
(ವಾರ್ನರ್ 35, ಶಂಕರ್ 26, ಜೋರ್ಡನ್ 3-17)

ಪಂದ್ಯ ಶ್ರೇಷ್ಠ: ಕ್ರಿಸ್ ಜೋರ್ಡನ್

LEAVE A REPLY

Please enter your comment!
Please enter your name here