ಪೋತ್ನಾಳ್ ಗ್ರಾಮಕ್ಕೆ ರೈಲ್ವೆ ನಿಲ್ದಾಣ ಮಂಜೂರಾತಿಗೆ ಮನವಿ

0
20

ಮಾನ್ವಿ, 08-10-20 ಮಾನ್ವಿ ತಾಲೂಕಿನ ಅತಿ ದೊಡ್ಡ ಗ್ರಾಮವಾದ ಪೋತ್ನಾಳ್‌ದಲ್ಲಿ ಮುನಿರಾಬಾದ್ ಮಹೆಬೂಬ್‌ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ನಿಲ್ದಾಣ ಕೇಂದ್ರವನ್ನು ಪೋತ್ನಾಳ್‌ಗೆ ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಚೀಪ್ ಆಡ್ಮಿಸ್ಟೆçÃಷನ್ (ಸಿಎಒ) ಕನ್ಟೋನ್ಮೆಂಟ್ ಅಧಿಕಾರಿ ಕೆ.ಸಿ.ಸ್ವಾಮಿ ಇವರಿಗೆ ಪೋತ್ನಾಳ್ ಗ್ರಾಮದ ಹೋರಾಟ ಸಮನ್ವಯ ಸಮಿತಿ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಹೋರಾಟ ಸಮನ್ವಯ ಸಮಿತಿ ಮುಖಂಡ ಹೆಚ್.ಶರ್ಫುದ್ದೀನ್ ಅವರು ೧೯೯೦ ಮುನಿರಾಬಾದ್-ಮಹೆಬೂಬ್‌ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗೆ ಅಡಿಗಲ್ಲು ಹಾಕಿದಾಗನಿಂದ ಇಲ್ಲಿಯವರೆಗೂ ಪೋತ್ನಾಳ್ ಹತ್ತಿರ ರೈಲ್ವೆ ನಿಲ್ದಾಣ ಸ್ಥಾಪನೆಗೆ ಒತ್ತಾಯಪಡಿಸುತ್ತ ಬರಲಾಗಿದೆ ಎಂದರು.
ಇದುವರೆಗೂ ಪೋತ್ನಾಳ್ ಬಳಿ ರೈಲ್ವೆ ನಿಲ್ದಾಣ ಕೇಂದ್ರ ಸ್ಥಾಪನೆಯ ಬೇಡಿಕೆ ಈಡೇರಿಕೆಗೆ ರಾಜ್ಯ ರೈಲ್ವೆ ಖಾತೆ ಸಚಿವ ದಿ.ಸುರೇಶ ಅಂಗಡಿ, ರಾಯಚೂರು ಸಂಸದ ರಾಜಾಅಮರೇಶ್ವರನಾಯಕ, ರಾಜ್ಯಸಭಾ ಸದಸ್ಯ ದಿ.ಅಶೋಕ ಗಸ್ತಿ ಸೇರಿದಂತೆ ಈ ಭಾಗದ ಶಾಸಕರಿಗೆ, ಇತರೆ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಹೆಚ್.ಶರ್ಫುದ್ದೀನ್ ಹೇಳಿದರು.
ಪೋತ್ನಾಳ್ ಗ್ರಾಮವು ಬೌಗೋಳಿಕವಾಗಿ ಮಾನ್ವಿ ತಾಲೂಕಿನ ೧೫ಕ್ಕೂ ಹೆಚ್ಚು ಗ್ರಾಮಗಳು ಮತ್ತು ಸಿಂಧನೂರು ತಾಲೂಕಿನ ೨೦ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಲ್ಪಿಸುವ ದೊಡ್ಡ ಗ್ರಾಮ ಇದಾಗಿದ್ದು ಈ ಎಲ್ಲಾ ಗ್ರಾಮಗಳ ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರಿಗೆ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಕೇಂದ್ರ ಬಿಂದುವಾಗಿದೆ. ಈ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು, ಪಾಲಿಟೆಕ್ನಿಕ್, ಪ್ರಾಥಮಿಕ, ಫ್ರೌಢಶಾಲೆ, ಬ್ಯಾಂಕ್‌ಗಳು, ಪೆಟ್ರೋಲ್ ಬಂಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಸಿಎಂ ವಸತಿ ನಿಲಯ ಸೇರಿದಂತೆ ಅನೇಕ ರೀತಿಯ ವ್ಯಾಪಾರ ವಹಿವಾಟುಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದು ಮುಖಂಡ ಕೆ.ಎಸ್.ಕುಮಾರಸ್ವಾಮಿ ಪೋತ್ನಾಳ್ ತಿಳಿಸಿದರು.
ಕಳೆದ ೨೮ ವರ್ಷಗಳಿಂದ ಪೋತ್ನಾಳ್ ಗ್ರಾಮದಲ್ಲಿ ರೈಲ್ವೆ ನಿಲ್ದಾಣ ಕೇಂದ್ರ ಸ್ಥಾಪನೆಗೆ ಅನೇಕ ಮನವಿಗಳನ್ನು ಸಲ್ಲಿಸಲಾಗಿದ್ದು ಈ ಭಾಗದ ಹೋರಾಟಗಾರರ ಹಾಗೂ ಸಾರ್ವಜನಿಕರ, ವ್ಯಾಪರಸ್ಥರ, ರೈತರ ಹಿತದೃಷ್ಠಿಯಿಂದ ರೈಲ್ವೆ ನಿಲ್ದಾಣ ಸ್ಥಾಪನೆಗೆ ಒತ್ತು ನೀಡಬೇಕೆಂದು ಆಗ್ರಹಿಸಲಾಯಿತು.
ಈ ವರ್ಷದಲ್ಲಿ ಪೋತ್ನಾಳ್ ಗ್ರಾಮದಲ್ಲಿ ರೈಲ್ವೆ ಕೇಂದ್ರ ಸ್ಥಾಪನೆಗೆ ಸಂಬAಧಪಟ್ಟ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದು ರೈಲ್ವೆ ನಿಲ್ದಾಣ ಮಂಜೂರಾತಿಗೆ ಪ್ರಾಮುಖ್ಯತೆ ನೀಡಬೇಕೆಂದು ಬೆಂಗಳೂರು ಚೀಪ್ ಆಡ್ಮಿಸ್ಟೆçÃಷನ್ (ಸಿಎಒ) ಕನ್ಟೋನ್ಮೆಂಟ್ ಅಧಿಕಾರಿ ಕೆ.ಸಿ.ಸ್ವಾಮಿಯವರಲ್ಲಿ ಪೋತ್ನಾಳ್ ಗ್ರಾಮದ ಹೋರಾಟ ಸಮನ್ವಯ ಸಮಿತಿ ಮುಖಂಡರಿAದ ಒಕ್ಕೂರಲಿನ ಹಕ್ಕೋತ್ತಾಯ ಮಾಡಲಾಯಿತು.

LEAVE A REPLY

Please enter your comment!
Please enter your name here