ವಿದ್ಯಾರ್ಥಿಗಳಿಗೆ ಎರಡು-ಮೂರು ವಾರ ಹೋಮ್ ವರ್ಕ್ ಬೇಡ- ಕೇಂದ್ರ

0
230

ನವದೆಹಲಿ. ಅ.5- ದೇಶಾದ್ಯಂತ ಅಕ್ಟೋಬರ್ 15 ರಿಂದ ಶಾಲಾ-ಕಾಲೇಜುಗಳು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೊಸ ಮಾರ್ಗಸೂಚಿ ಪ್ರಕಾರ ಶಾಲೆ ಆರಂಭವಾದ ಎರಡು ಮೂರು ವಾರಗಳ ತನಕ ವಿದ್ಯಾರ್ಥಿಗಳಿಗೆ ಯಾವುದೇ ಹೋಂ‌ ವರ್ಕ್ ನೀಡಬಾರದು ಮತ್ತು ಆನ್ ಲೈನ್ ತರಗತಿ ಮುಂದುವರಿಸಬೇಕು ಎಂದು ಸೂಚಿಸಲಾಗಿದೆ‌.

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟವನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ವಿದ್ಯಾರ್ಥಿಗಳಿಗೆ ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹೊಸ ‌ಕಾಲೆಂಡರ್ ಮಾರ್ಗಸೂಚಿಯನ್ವಯ ಶಾಲಾ ಕಾಲೇಜು ಆರಂಭವಾಗಲಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ‌ ಹಿತದೃಷ್ಟಿಯಿಂದ ಆಲ್ ಲೈನ್ ತರಗತಿ ಮುಂದುವರಿಸುವಂತೆ‌ ಸೂಚನೆ ನಿಡಿರುವ ಅವರು, ಹೊಸ ಮಾರ್ಗಸೂಚಿಯತ್ನ ಶಾಲೆ ಆರಂಭಿಸುವಂತೆ ಸೂಚಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಸೆಪ್ಟೆಂಬರ್ 30 ರಂದು ಹೊರಡಿಸಿದ್ದ ಅನ್ ಲಾಕ್ -5 ರ ಮಾರ್ಗಸೂಚಿಯ ಪ್ರಕಾರ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ

ಹೊಸ ಮಾರ್ಗಸೂಚಿ :.

  • ಶಾಲೆಗಳ ಸ್ವಚ್ಛತೆಗೆ ಒತ್ತು ನೀಡಬೇಕು
  • ಸೋಂಕು ನಿವಾರಕ ಔಷಧಿ ಕಾಲಕಾಲಕ್ಕೆ ಸಿಂಪಡಿಸಬೇಕು
  • ಒಳಾಂಗಣದಲ್ಲಿ ಗಾಳಿ ಆಡಲು ಅವಕಾಶವಿರಬೇಕು
  • ಶಾಲೆಗಳಲ್ಲಿ ತುರ್ತುಪರಿಸ್ಥಿತಿ ಘಟಕ ತೆರೆಯಬೇಕು
  • ಆಗಾಗ ಸ್ವಚ್ಛತೆ ಪರಿಶೀಲಿಸಬೇಕು
  • ಪ್ರತಿ ಶಾಲೆಯ ಪ್ರತ್ಯೇಕ ಮಾರ್ಗಸೂಚಿ ಹೊಂದಿರಬೇಕು
  • ಶಾಲೆಯಲ್ಲಿ ಕುಳಿತುಕೊಳ್ಳುವಾಗ ಅಂತರ ಇರಬೇಕು
  • ಒಳಬರಲು ಹೊರಹೋಗಲು ಪ್ರತ್ಯೇಕ ಇಬ್ಬರ ಅಗತ್ಯ
  • ತರಗತಿಯ ಅವಧಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
  • ಆಗಾಗ ಸ್ಯಾನಿಟೈಸ್ ಮಾಡಬೇಕು
  • ಸದ್ಯ ಹೊಸ ಶಾಲಾ ವೇಳಾ ಪಟ್ಟಿ ಪ್ರಕಟಿಸಬೇಉ
  • ಶಾಲೆಯಲ್ಲಿ ವೈದ್ಯರು ಕಡ್ಡಾಯವಾಗಿ ಇರಬೇಕು ಅಥವಾ ಆರೋಗ್ಯ ಕಾರ್ಯ ಕರ್ತರ ಹಾಜರಿ ಅನಿವಾರ್ಯ
  • ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ರಜೆ ಕೊಡುವುದು ಕಡ್ಡಾಯ
  • ಎರಡು ಮೂರು ವಾರ ಆರಂಭ ದಲ್ಲಿ ಹೋಂ ವರ್ಕ್ ಬೇಡ
  • ಆನ್ ಲೈನ್ ತರಗತಿ ಮುಂದುವರಿಸಬೇಕು
  • ಪೋಷಕರ ಒಪ್ಪಿಗೆ ಇರುವ ವಿದ್ಯಾರ್ಥಿಗಳು ಮಾತ್ರ ಹಾಜರಿರಬೇಕು

LEAVE A REPLY

Please enter your comment!
Please enter your name here