ಈರುಳ್ಳಿ ದರ ದಿಢೀರ್ ಏರಿಕೆ, ತರಕಾರಿ ಬೆಲೆಯಲ್ಲೂ ಏರಿಳಿತ..!

0
161

ಬೆಂಗಳೂರು, ಅ.5- ಈರುಳ್ಳಿ ಇಲ್ಲದೆ ಅಡುಗೆ ಪೂರ್ಣವಾಗುವುದಿಲ್ಲ ರುಚಿನೂ ಇರೋದಿಲ್ಲ ಆದರೆ ಈವಾಗ ಬೆಲೆ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ.ಕಳೆದ 20 ದಿನಗಳ ಹಿಂದೆ ನೂರು ರೂ.ಗೆ 4 ರಿಂದ 5 ಕೆಜಿ ಇದ್ದ ಈರುಳ್ಳಿ ಈಗ ನೂರು ರೂ.ಗೆ ಎರಡು ಕೆಜಿಯಾಗಿದೆ. ದಿಢೀರ್ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಬೇಡಿಕೆ ಹೆಚ್ಚಾದರೂ ಉತ್ತಮ ಗುಣಮಟ್ಟದ ಈರುಳ್ಳಿ ಮಾತ್ರ ಸಿಗುತ್ತಿಲ್ಲ ಎಂಬುದೆ ಗ್ರಾಹಕರ ಅಳಲು. ಹೊರಗಡೆ ನೋಡಲು ಚೆನ್ನಾಗಿರುತ್ತವೆ ಆದರೆ ಒಳಗೆ ಕೊಳೆತು ಹೋಗಿರುತ್ತವೆ. ನಗರದ ಬಹುತೇಕ ಮಾರುಕಟ್ಟೆ ಹಾಗೂ ಬೀದಿ ಬದಿ ವ್ಯಾಪಾರಿಗಳ ಬಳಿ ಸಿಗುತ್ತಿರುವ ಈರುಳ್ಳಿ ಇದೆ ಆಗಿರುವುದರಿಂದ ಗ್ರಾಹಕರಿಗೆ ದುಡ್ಡು ಕೊಟ್ಟರೂ ಈರುಳ್ಳಿ ಆರಿಸಿ ತರುವುದೆ ಚಿಂತೆ.

ಕಾರಣ ಅತಿವೃಷ್ಟಿ ಹಾಗೂ ಕೋಳೆ ರೋಗ ಹೆಚ್ಚಾಗಿ ಈರುಳ್ಳಿ ಬೆಳೆಯುವ ರಾಜ್ಯದ ಪ್ರದೇಶಗಳಾದ ಬಳ್ಳಾರಿ, ರಾಯಚೂರು, ದಾವಣಗೆರೆ, ಹಿರಿಯೂರು, ಚಿತ್ರದುರ್ಗ, ವಿಜಯಪುರ, ಧಾರವಾಡ, ಗದಗ, ಬಾಗಲಕೋಟೆ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಈ ಭಾರಿ ಮಳೆ ಹೆಚ್ಚಾಗಿದ್ದರಿಂದ ಭೂಮಿಯಲ್ಲೆ ಬೆಳೆ ಕೊಳೆಯುತ್ತಿದ್ದರೆ, ಮತ್ತೊಂದೆಡೆ ಕೊಳೆರೋಗ ಬೆಳೆಗಾರರನ್ನು ಕಾಡುತ್ತಿದೆ.

ಇಲ್ಲಿಯವರೆಗೂ ದಾಸ್ತಾನಾಗಿರುವ ಈರುಳ್ಳಿ ಮಾತ್ರ ಮಾರುಕಟ್ಟೆಗೆ ಆಗಮಿಸಿದ್ದು ಅವು ಕೂಡ ತೇವಾಂಶದಿಂದಾಗಿ ಕೊಳೆಯಲಾರಂಭಿಸಿವೆ.  ನೋಡೋಕೆ ಮೇಲೆ ಚೆನ್ನಾಗಿಯೇ ಇರುವೆ ಈರುಳ್ಳಿ ಮನೆಗೆ ತಂದು ಹಚ್ಚಿದರೆ ಒಳಗಡೆ ಕೊಳೆತ್ತಿರುತ್ತವೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿಳುವ ಜೊತೆಗೆ ಗುಣಮಟ್ಟದ ಕೊರತೆ ಕಾಡುತ್ತಿದೆ.

ಬರಿ ಈರುಳ್ಳಿ ಬೆಲೆ ಮಾತ್ರ ಹೆಚ್ಚಳವಾಗಿದ್ದರೆ ಪರವಾಗಿರಲಿಲ್ಲ. ತರಕಾರಿ ಬೆಲೆಗಳೂ ಸಹ ಗಗನಕ್ಕೆರಿವೆ. ಸಾಮಾನ್ಯವಾಗಿ ಎಲ್ಲಾ ಅಡಿಗೆಗಳು ಎಲ್ಲರೂ ಬಳಸುವ ಕ್ಯಾರೆಟ್ ಕೆಜಿಗೆ 80 ರೂ.ನಿಂದ 90 ರೂ, ಹುರಳಿಕಾಯಿ 90 ರಿಂದ 100 ರೂ,

ಮೂಲಂಗಿ 40, ಟಮೋಟೋ-40, ಬೆಂಡೆಕಾಯಿ-50, ನವಿಲ್‍ಕೊಸ್-60, ಆಲೂಗೆಡ್ಡೆ-40 ರೂ. ಇದ್ದು ಗ್ರಾಹಕರು ಮೊದಲೆ ಕರೋನಾದಿಂದ ಸಂಕಷ್ಟಕ್ಕಿಡಾಗಿದ್ದು ಈಗ ಬೆಲೆ ಏರಿಕೆ ಬಿಸಿಮುಟ್ಟಿಸಿದೆ. ಇದರಿಂದ ಜನಸಾಮಾನ್ಯರ ಜೀವನ ಸಹ ಸಂಕಷ್ಟಕ್ಕೆ ಸಿಲುಕಿದೆ

LEAVE A REPLY

Please enter your comment!
Please enter your name here