ಎಚ್ ಡಿ ಕೆ ಅವರನ್ನು ತಬ್ಬಿಕೊಂಡು ಸರ್ಕಾರ ರಚನೆಗೆ ಬಂದೊರು ಅವರು ಇಂದು ನಮ್ಮನ್ನೆ ಟೀಕಿಸುತ್ತಿರುವುದು ಎಷ್ಟು ಸರಿ …??: ಮಾಜಿ ಸಚಿವ ಎಚ್.ಡಿ.ರೇವಣ್ಣ.

0
117

ಹಾಸನ: ಸಮ್ಮಿಶ್ರ ಸರ್ಕಾರ ರಚನೆ ವೇಳೆ ಕಾಲಿಡಿಯಲು ಬಂದವರೂ ಕಾಂಗ್ರೆಸ್ ನಾಯಕರು… ನಾವಲ್ಲ..!!ಎಚ್ ಡಿ ಕೆ ಅವರನ್ನು ತಬ್ಬಿಕೊಂಡು ಸರ್ಕಾರ ರಚನೆಗೆ ಬಂದೊರು ಅವರು ಇಂದು ನಮ್ಮನ್ನೆ ಟೀಕಿಸುತ್ತಿರುವುದು ಎಷ್ಟು ಸರಿ …??ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ನಾಯಕರು ಸಮ್ಮಿಶ್ರ ಸರ್ಕಾರ ರಚೆನ‌ ಹೇಗಾಯಿತು ಎಂದು ತಿಳಿದು ಮಾತಾಡಲಿ ಅಂದು ಎಚ್ ಡಿಕೆ ಅವರನ್ನು ತಬ್ಬಿಕೊಂಡು ಗೊಗರೆದರು ಆದ್ದರಿಂದ ಸರ್ಕಾರ ರಚನೆಗೆ ಸಾಥ್ ನೀಡಿದೆವು; ನಮ್ಮ ಪಕ್ಷದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ‌ ಟೀಕಿಸುವುದು ಸರಿಯಲ್ಲ ಪಕ್ಷದ ವರ್ಚ್ಚಸ್ಸಿನ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.

ರಾತ್ರಿ ಅಭ್ಯರ್ಥಿ ಆಯ್ಕೆ ಮಾಡಿ‌ ಬೆಳಿಗ್ಗೆ ಚುನಾವಣೆ ನಿಲ್ಲಿಸೊ ಪರಿಸ್ಥಿತಿ ಗೆ ರಾಷ್ಟ್ರೀಯ ಪಕ್ಷ ಬಂದಿರೊದು ಹಾಸ್ಯಾಸ್ಪದ.. ಆ ಮಹಿಳೆಯನ್ನು ಯಾವ ಹಂತಕ್ಕೆ ಕಾಂಗ್ರೆಸ್ ತಂದು ನಿಲ್ಲಿಸುತ್ತದೆ ಎಂದು‌ ಕಾದು ನೋಡಬೇಕಿದೆ..ಯಾರೋ ಒರ್ವ ಸ್ವಾಮೀಜಿ ಅವರ ಅಣತಿಯಂತೆ ಕಾಂಗ್ರೆಸ್ ಡಿ.ಕೆ.ರವಿ ಅವರ ಪತ್ನಿಯನ್ನು ಆಯ್ಕೆಮಾಡಿದ್ದಾರೆ.. ಅವರ ತಲೆ ಮೇಲೆ ಕೈ ಹಾಕಿರುವ ಕಾಂಗ್ರೆಸ್ ನಾಯಕರು ಅವರನ್ನು ಎಷ್ಟರ ಮಟ್ಟಿಗೆ ರಾಜಕೀಯ ದಡ ಸೇರಿಸುವರೊ ಗೊತ್ತಿಲ್ಲಾ ಎಂದು ಟೀಕಿಸಿದರು.

ಜೆಡಿಎಸ್ ಪಕ್ಷವನ್ನು ಮುಗಿಸಲು ಎರಡು ರಾಷ್ಟ್ರೀಯ ಪಕ್ಷಗಳು ಹೊರಟಂತ್ತಿದೆ.. ಶಿರ ಉಪ ಚುನಾವಣೆ ವೇಳೆ ಎರಡು ಪಕ್ಷದವರು ಜೆಡಿಎಸ್ ಹಾಗೂ ಎಚ್‌ಡಿ ಕೆ ವಿರುದ್ಧ ಆರೋಪ ಮಾಡುತ್ತಿವೆ ಇನ್ನು ಜೆಡಿಎಸ್ ಪ್ರಾಭಲ್ಯವಿರುವ ಕ್ಷೇತ್ರದಲ್ಲಿ ಸಿಬಿಐ ದಾಳಿ ನಡೆಯುತ್ತಿದೆ ಕಾನೂನು ಪ್ರಕಾರ ದಾಳಿಯಾದರೇ ನಮ್ಮ ವಿರೋಧ ವಿಲ್ಲ ಎಂದರು.

LEAVE A REPLY

Please enter your comment!
Please enter your name here