ವಿವಿಧ ಸಂಘಟನೆಗಳ ಒಕ್ಕೂಟ ದಿಂದ ರಾಜ್ಯಾಪಾಲರಿಗೆ ಮನವಿ ಪತ್ರ

0
175

ಮಾನ್ವಿ.ಅ.04-ವಿವಿಧ ಸಂಘಟನೆಗಳ ಒಕ್ಕೂಟ ದಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಉತ್ತರಪ್ರದೇಶದ ಹತ್ರಾಸ್ ನಗರದಲ್ಲಿ 19 ವರ್ಷದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದನ್ನು ಖಂಡಿಸಿ ಕಿಡಿಗೇಡಿಗಳಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಮೇಣದಬತ್ತಿ ಹಚ್ಚುವ ಮೂಲಕ ರಾಜ್ಯಾಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ದೇಶದಲ್ಲಿ ಮಹಿಳೆಯರ ಮೇಲೆ ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುವ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ದಶಕ ಕಳೆದರೂ ಕೂಡ ಇಂದು ನಿರಂತರವಾಗಿ ಮಹಿಳೆಯರ ಮೇಲೆ ಮಕ್ಕಳ ಮೇಲೆ ನಡೆಯುತ್ತಿದೆ ಆದರೆ ಪೋಲಿಸ್ ಠಾಣೆಗಳು ಮತ್ತು ಸರ್ಕಾರ ಕಠಿಣ ಶಿಕ್ಷೆ ನೀಡುವಲ್ಲಿ ವಿಫಲವಾಗಿದೆ.
ಇಂಥ ಘಟನೆಗಳು ದೇಶದಲ್ಲಿ ಮರುಕಳಿಸದಂತೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳು ಮನಿಷಾ ವಾಲ್ಮೀಕಿ ಅವರ ಪ್ರಕರಣವನ್ನು ಮುಂದೆ ಯಾರಿಗೂ ಆಗದಂತೆ ರಾಜ್ಯ ಸರ್ಕಾರಗಳು ಕಠಿಣವಾದ ಕಾನೂನನ್ನು ಜಾರಿಗೆ ತರಬೇಕು. ಕೃತ್ಯಕ್ಕೆ ಮುಂದಾಗುವ ಕಾಮ ಪಿಚಾಚಿಗಳಿಗೆ ಎಚ್ಚರಿಕೆ ಗಂಟೆ ಆಗಬೇಕಿದೆ ಎಂದು ಸಂಘಟನಾಕರರು ಹೇಳಿದರು.
ಈ ಸಂದರ್ಭದಲ್ಲಿ ಗುರುರಾಜ ನಾಗಲಾಪುರ,ಶ್ರೀಕಾಂತ ಪಾಟೀಲ ಗೂಳಿ,ರಾಮಣ್ಣ ನಾಯಕ, ಮಲ್ಲಿಕಾರ್ಜುನಸ್ವಾಮಿ,
ಹುಸೇನ ಬೇಗ ಮಾಜಿ ಪುರಸಭಾ ಅಧ್ಯಕ್ಷರು, ವೀರೇಶ್ ನಾಯಕ ಬೆಟ್ಟದೂರು ನಗರ ಯೊಜನಾ ಪ್ರಾಧಿಕಾರ ಅಧ್ಯಕ್ಷರು, ಅಯ್ಯಪ್ಪ ಮ್ಯಾಕಲ್ ಬಿಜೆಪಿ ಮುಖಂಡರು, ದೊಡ್ಡಣ್ಣ ಹೂಗಾರ, ಅಬ್ದುಲ್ ರಹಮಾನ್ ಬಾಗಲಕೋಟ, ಕೆ ಶಿವಕುಮಾರ್ ಕೊನಪೂರ್ ಪೇಟೆ, ಬಸವರಾಜ್, ಶಿವಕುಮಾರ್ ಗೋವಿಂದದೊಡ್ಡಿ, ವೀರೇಶ್ ಹಾಗೂ ಇನ್ನಿತರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here