ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ

0
167

ಗುರುಮಠಕಲ್ :ಅ.4: ಒಪ್ಪಂದ ಆಧಾರಿತ ಕೃಷಿಯ ಮೂಲಕ ರೈತರ ಬದುಕನ್ನು ನಾಶ ಮಾಡಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಪಾಲರೆಡ್ಡಿ ಹತ್ತಿಕುಣಿ ಆರೋಪಿಸಿದರು.

ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ ಬೃಹತ್ ಪ್ರತಿಭಟನೆ ರ್ಯಾಲಿಯನ್ನು ಮಾಡಿ ತಹಸೀಲ್ದಾರ ಸಂಗಮೇಶ ಜಿಡಿಗೆ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರಸಲ್ಲಿಸಿ ಮಾತನಾಡಿದ ಅವರು, ರೈತನ ಬದುಕನ್ನು ಕೇಂದ್ರ ಸರಕಾರ ಕೆಲವು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದುಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ. ರೈತ ದೇಶದ ಬೆನ್ನೆಲುಬು ಎನ್ನುತ್ತ ಅವನ ಬೆನ್ನು ಮುರಿಯುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸರ್ಕಾರಿ ನೌಕರರಿಗೆ ಸಿಗುವಂತೆ ವೇತನವಾಗಲಿ, ಬೋನಸ್ ಆಗಲಿ, ಪಿಂಚಣೆಯಾಗಲಿ, ಕನಿಷ್ಟ ಲಂಚವೂ ಸಿಗುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ರೈತರಿಗೆ ಭೂಮಿ ಕೊಡುವ ಕೆಲಸ ಮಾಡಿದೆ, ಬಿಜೆಪಿ ಸರ್ಕಾರ ಭೂಮಿ ಕಸಿಯುವ ಕೆಲಸ ಮಾಡುತ್ತಿದೆ. ಬಡವರಿಗೆ ನಿವೇಶನ, ಭೂಮಿ ಕೊಡುವುದು, ನ್ಯಾಯಾಧೀಕರಣ ರಚನೆ ಮಾಡುವುದು ಕಾಂಗ್ರೆಸ್ ಇತಿಹಾಸವಾದರೆ, ಬಿಜೆಪಿಯದು ಕಿತ್ತುಕೊಳ್ಳುವ ಇತಿಹಾಸ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಕಿಶನ್ ಬ್ಲಾಕ್ ಅಧ್ಯಕ್ಷ ಆನಂದ ಬೋಯಿನ್ ಯದ್ಲಾಪೂರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಅಧ್ಯಕ್ಷ ಕೃಷ್ಣಾ ಚಪೇಟ್ಲಾ, ಪುರಸಭೆ ಸದಸ್ಯರಾದ ಮೈನೋದ್ದೀನ್, ಬಾಬು ತಲಾರಿ,ಅಶೋಕ ಕಲಾಲ್,ವಿರೇಪ್ಪ ಪಡಿಗೆ, ಪಯಾಜ್, ಸಂಜೀವಕುಮಾರ ಚಂದಾಪೂರ ಸೇರಿದಂತೆ ಮುಖಂಡರು ಇದ್ದರು.

LEAVE A REPLY

Please enter your comment!
Please enter your name here