ಕೊರೊನಾ ಸೋಂಕು: ಟ್ರಂಪ್‌ಗೆ ೪೮ ಗಂಟೆ ನಿರ್ಣಾಯಕ

0
7

ವಾಷಿಂಗ್ಟನ್. ಅ.4- ಕೊರೊನಾ ಸೋಂಕಿಗೆ ಒಳಗಾಗಿ ವಾಷಿಂಗ್ಟನ್ ಡಿಸಿಯಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಮುಂದಿನ ಎರಡು ದಿನಗಳ ಕಾಲ ನಿರ್ಣಾಯಕ ಎಂದು ಹೇಳಲಾಗಿದೆ.
ಶ್ವೇತಭವನ ಮತ್ತು ಸೇನಾಸ್ಪತ್ರೆಯ ವಿಭಿನ್ನ ಹೇಳಿಕೆ ಟ್ರಂಪ್ ಆರೋಗ್ಯದ ಬಗ್ಗೆ ಗೊಂದಲ ಮೂಡಿಸಿದೆ.
ಆರೋಗ್ಯದ ಬಗ್ಗೆ ಶ್ವೇತಭವನದ ಮುಖ್ಯಸ್ಥ ಮಾರ್ಕ್ ಮೆಡೋಸ್, ಟ್ರಂಪ್ ಅವರ ಆರೋಗ್ಯ ಆತಂಕಕಾರಿಯಾಗಿದೆ. ಮುಂದಿನ 48 ಗಂಟೆಗಳ ಕಾಲ ಎಚ್ಚರಿಕೆಯಿಂದ ಇರಬೇಕಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಎರಡು ದಿನಗಳು ಅನಿರ್ಣಾಯಕ ಎಂದು ಹೇಳಿಕೆ ನೀಡಿದ್ದರು.
ನಿಜವಾದ ಪರೀಕ್ಷೆ:
ಆರೋಗ್ಯದ ಅಪಪ್ರಚಾರ ಕೇಳಿಬಂದ ನಡುವೆ ಟ್ವಿಟ್ಟರ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಟ್ರಂಪ್ , ನಾನು ಆರಾಮಾಗಿದ್ದೇನೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದೇನೆ. ನನ್ನ ಆರೋಗ್ಯಕ್ಕಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಮುಂದಿನ ಎರಡು ದಿನಗಳ ಕಾಲ ನಿಜವಾದ ಪರೀಕ್ಷೆಯಾಗಲಿದೆ .ಕೋವಿಡ್ ಸೋಂಕಿನ ವಿರುದ್ಧ ಗೆದ್ದು ಬರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕವನ್ನು ವಿಶ್ವದಲ್ಲಿ ಮತ್ತೊಮ್ಮೆ ಎತ್ತರಕ್ಕೆ ಕೊಂಡೊಯ್ಯುವ ಅಗತ್ಯ ಮತ್ತು ಅನಿವಾರ್ಯತೆ ಇರುವುದರಿಂದ ನಾನು ಸೋಂಕಿನ ವಿರುದ್ಧ ಬರಬೇಕಾಗಿದೆ ಎಂದು ತಿಳಿಸಿದ್ದಾರೆ..
ವಾಲ್ಟರ್ ರೀಡ್ ಹುಸೇನ್ ಆಸ್ಪತ್ರೆಯ ವೈದ್ಯರು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಆರೋಗ್ಯಕಾಗಿ ಶ್ರಮಿಸುತ್ತಿದ್ದಾರೆ. ಎಲ್ಲರ ಚಿಕಿತ್ಸೆಯಿಂದ ಸೂಕ್ತವಾಗಿ ಸ್ಪಂದಿಸುತ್ತಿದ್ದೇನೆ. ಆತಂಕ, ಭಯ ಬೇಡ ಎಂದು ಹೇಳಿದ್ದಾರೆ.
ನವೆಂಬರ್ ೩ ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಎರಡನೇ ಬಾರಿಗೆ ಅಧ್ಯಕ್ಷರಾಗಲು ಡೊನಾಲ್ಡ್ ಟ್ರಂಪ್, ದೇಶಾದ್ಯಂತ ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ವಾಷಿಂಗ್ಟನ್ ಡಿಸಿಯಲ್ಲಿರುವ ವಾಲ್ಟರ್ ರೀಡ್ ಸೇನಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಟ್ರಂಪ್ ಪತ್ನಿ ಮೆಲಾನಿಯಾ ಅವರಿಗೂ ಸೋಂಕು ಕಾಣಿಸಿಕೊಂಡಿದ್ದು ಶ್ವೇತಭವನದಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಿನ್ನೆಡೆ ಸಾಧ್ಯತೆ:
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವ ಸಮಯದಲ್ಲಿ ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವುದು ಅವರಿಗೆ ಚುನಾವಣೆಯಲ್ಲಿ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಮುಂದಿನ ಪರಿಸ್ಥಿತಿಯನ್ನು ಹಾಗೂ ಎದುರಾಗುವ ಸಮಸ್ಯೆಯಿಂದ ಪಾರಾಗಲು ಆಸ್ಪತ್ರೆಗೆ ಸೇರಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ನವಂಬರ್ ೩ ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ

LEAVE A REPLY

Please enter your comment!
Please enter your name here