ಅತ್ಯಾಚಾರಿ ಆರೋಪಿಗಳಿಗೆ ಗಲ್ಲಿಗೇರಿಸಲು ಆಗ್ರಹ : ಎಬಿವಿಪಿ

0
156

ಸುರಪುರ:ಅ.4: ಕೆಲ ದಿನಗಳ ಹಿಂದೆ ಮಾನವ ಕುಲವೆ ತಲೆತಗ್ಗಿಸುವಂತಹ ಘಟನೆ ಉತ್ತರ ಪ್ರದೇಶ ರಾಜ್ಯದ ಹತ್ರಾಸ ಜಿಲ್ಲೆಯಲ್ಲಿ ನಡೆದಿದೆ. ದಲಿತ ಅಪ್ರಾಪ್ತ ಯುವತಿ ಮನಿಷಾ ವಾಲ್ಮೀಕಿ ಮೇಲೆ ನಡೆದ ಸಾಮೊಹಿಕ ಅತ್ಯಾಚಾರಿಗಳಿಗೆ ಗಲ್ಲಿಗೇರಿಸುವಂತೆ ಒತ್ತಾಯಿಸಿ ನಗರದ ತಹಶಿಲ್ದಾರರ ಕಛೇರಿ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶಿಲ್ದಾರರ ಮೂಲಕ ಸಲ್ಲಿಸಿದರು.

ಜಗತ್ತಿನಲ್ಲಿ ಯಾವುದೇ ದೇಶ ನಿಡದಂತಹ ಗೌರವ ಸ್ಥಾನ, ಮಾನ. ನಮ್ಮ ಭಾರತ ದೇಶ ಮಹಿಳೆಗೆ ನೀಡುತ್ತಾ ಬಂದಿದೆ.ನಾವು ಮಹಿಳೆಯರ ಜೊತೆಯಲ್ಲಿ ಮಾತನಾಡುವಾಗ‌‌‌‌‌.ಸಂಭೋದಿಸುವಾಗ “ಮ್ಮ” ಬಳುಸುತ್ತೆವೆ ‌.ಅಂದರೆ ಅಮ್ಮ ಎಂದು ಅರ್ಥವನ್ನು ಕೊಡುತ್ತದೆ .ಇಂತಹ ಭಾರತದಲ್ಲಿ ಪ್ರತಿದಿನವೂ ಮಹಿಳಾ ಮೇಲೆ ಅತ್ಯಾಚಾರವಾಗುತ್ತಿದೆ ಎಂದರೆ ಅದಕ್ಕೆ ಭಾರತ ದೇಶದ ದುರ್ಬಲ ಕಾನೂನು ಕಾರಣವಾಗುತ್ತದೆ.ದುರ್ಬಲ ಕಾನೂನಿಗೆ ಅತ್ಯಾಚಾರಿಗಳು ಕೊಲೆಗಡುಕರು ಭಯೋತ್ಪಾದಕರು ಭಯಪಡುವುದಿಲ್ಲ .ಅದ್ದರಿಂದ ಈಗಾಲಾದರು ದುರ್ಬಲ ಕಾನೂನನ್ನು ಪ್ರಭಲ ಕಾನೂನನ್ನಾಗಿ ಮಾಡುವ ಕಾಲ ಬಂದಿದೆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಗಿಂತ ಅತೀ ಕಠಿಣವಾದ ಕಾನೂನು ಜಾರಿಗೆ ತರಬೇಕು ‌ಅತ್ಯಾಚಾರಿಗಳ ಪಾಲಿಗೆ ಆ ಶಿಕ್ಷೆ ನರಕುವಾಗಿರಬೇಕು ‌ಅವಗ ಮಾತ್ರ ದೇಶದಲ್ಲಿ ಅತ್ಯಾಚಾರ ನಿಲುತ್ತವೆ ಎಂದು ಡಾ:ಉಪೇಂದ್ರ ನಾಯಕ ಸುಬೆದಾರ ಅಭಾವಿಪ ಕಲಬುರಗಿ ವಿಭಾಗ ಸಹ ಪ್ರಮುಖ 

ಕಲ್ಬುರ್ಗಿ ವಿಭಾಗ ಸಂಚಾಲಕ ನಾಗರಾಜ ಮಕಾಶಿ ಮಾತನಾಡಿ ಭಾರತ ರಾಷ್ಟ್ರದಲ್ಲಿ ಹೆಣ್ಣಿಗೆ ವಿಶೇಷವಾದ ಪೂಜ್ಯನೀಯ ಸ್ಥಾನವಿದೆ ಇಂತಹ ಮಣ್ಣಿನಲ್ಲಿ ಜನಿಸಿದ ಕೆಲ ಮೃಗಗಳು ಹೆಣ್ಣುಮಕ್ಕಳ ಮೇಲೆ ಇಂತಹ ದೌರ್ಜನ್ಯ ಮಾಡುತ್ತಿದ್ದಾರೆ. ಮನಿಷಾಳ ಮೇಲೆ ಸಾಮೊಹಿಕವಾಗಿ ಅತ್ಯಾಚಾರವೇಸಗಿ ಆಕೆಯ ಕಾಲು ಮುರಿದು, ಬೆನ್ನುಮೂಳೆಯನ್ನು ಮೂರಿದು, ನಾಲಿಗೆ ಕತ್ತರಿಸಿ ವಿಕೃತಿ ಮೆರೆದ ಪಾಪಿಗಳನ್ನು ಗಲ್ಲಿಗೇರಿಸಬೇಕು ಮತ್ತು ಮನಿಷಾಳ ಕುಟುಂಬಕ್ಕೆ ಸರಕಾರ ರಕ್ಷಣೆ ನೀಡಬೇಕು ಜೊತೆಗೆ ಆರ್ಥಿಕ ನೇರವು ಒದಗಿಸಬೇಕೆಂದು ಆಗ್ರಹಿಸಿದರು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೇಶಾದ್ಯಂತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ ವತಿಯಿಂದ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶರಣು ನಾಯಕ ರಾಮಸೇನಾ ತಾಲ್ಲೂಕು ಅಧ್ಯಕ್ಷರು, ಮೌನೇಶ ಕಲ್ಬುರ್ಗಿ ವಿಶ್ವಹಿಂದೂ ಪರಿಷತ ಅಧ್ಯಕ್ಷರು, ಕುಮಾರ ನಾಯಕ , ರವಿಕುಮಾರ ಚಿಕ್ಕನಹಳ್ಳಿ, ಹಣಮಂತ್ರಾಯ, ಅಂಬ್ರೀಶ ಡೊಣ್ಣೆಗೇರಾ,ಬಸ್ಸು ಮೇದಾ ಬಸವರಾಜ ನಾಯಕ ಸೇರಿದಂತೆ ಅನೇಕರಿದ್ದರು.

 

 

LEAVE A REPLY

Please enter your comment!
Please enter your name here