“ಕೊವಿಡ್-19 ಮರಳಿ ಸೃಷ್ಠಿಕರ್ತನ ಕಡೆಗೆ” ರಾಜ್ಯವ್ಯಾಪಿ ಅಭಿಯಾನ :- ಶೇಖ್ ಫರೀದ್ ಉಮ್ರಿ

0
236

09-08-20 ರವಿವಾರ, ಮಾನವಿ :- ದೇಶದಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಕೊರೊನಾದಿಂದ ಮರಳಿ ಸೃಷ್ಟಿ ಕರ್ತನ ಕಡೆಗೆ” ಎನ್ನುವ ಸಂದೇಶವನ್ನು ಸಾರುವ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಗಷ್ಟ್ 5 ರಿಂದ 20 ಆಗಸ್ಟ್‌ನವರೆಗೂ ರಾಜ್ಯವ್ಯಾಪಿ ಅಭಿಯಾನದ ಪ್ರಯುಕ್ತ ವಿವಿಧ ಆನ್ಲೈನ್ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಅಭಿಯಾನದ ಸಂಚಾಲಕ ಹಾಗೂ ಪುರಸಭೆ ಸದಸ್ಯ ಶೇಕ್ ಫರೀದ್ ಉಮ್ರಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಕೋವಿಡ್ 19 ಸೋಂಕಿನಿಂದಾಗಿ ಜಗತ್ತು ತೀರಾ ಆತಂಕದೊಂದಿಗೆ ಸಾಗುತ್ತಿದೆ ವಿಶೇಷತಃ ನಮ್ಮ ದೇಶ, ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಹಬ್ಬುತ್ತಾ ಮಾನವನ ಅಸಹಾಯಕತೆಯ ಅನಾವರಣ ಗೊಳಿಸುತ್ತಿದೆ ರೋಗವು ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ. ರೋಗಕ್ಕೆ ಈವರೆಗೆ ಚಿಕಿತ್ಸೆ ಇಲ್ಲ, ವ್ಯಾಕ್ಸಿನ್ ಶೀಘ್ರ ಲಭ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ ತಜ್ಞರ ಪ್ರಕಾರ ಈ ರೋಗವು ದೀರ್ಘಕಾಲದವರೆಗೆ ಮುಂದುವರೆಯುವ ಮತ್ತು ವಿಶ್ವದ ಶೇಕಡಾ 25 ರಷ್ಟು ಜನಸಂಖ್ಯೆಯನ್ನು ಕಡಿಮೆಗೊಳಿಸಲು ಲಕ್ಷಣಗಳನ್ನು ಹೊಂದಿದೆ ಎಂದು ಎಚ್ಚರಿಸಿದ್ದಾರೆ. ಜೊತೆಗೆ ಇದರ ಪರಿಣಾಮ ದಿಂದಾಗಿ ಹಸಿವು, ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದೆ. ಜೊತೆ ಜೊತೆಗೆ ನೆರೆ ಹಾವಳಿ, ಭೂಕುಸಿತಗಳು, ಮಾನಸಿಕ ಖಿನ್ನತೆಗಳು, ಗೃಹಕಲಹ ಗಳು, ಯುದ್ಧದ ವಾತಾವರಣ ಗಳಂತಹ ಸಣ್ಣ ದೊಡ್ಡ ಪ್ರಮಾಣದ ವಿಪತ್ತುಗಳು ಜನರನ್ನು ಬಲಿ ತೆಗೆದುಕೊಳ್ಳುತ್ತದೆ ಇದಕ್ಕೆ ಭಯ ಬೇಡ ಜಾಗೃತರಾಗಿರಿ ಎನ್ನುವ ಸಂದೇಶವನ್ನು ಸಾರುತ್ತೇವೆ ಎಂದರು.

ಆದ್ದರಿಂದ ಈ ಸಂದೇಶವನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಲು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಮಟ್ಟದಲ್ಲಿ ಆಗಸ್ಟ್ 5 ರಿಂದ 20ರ ವರೆಗೆ, 15 ದಿನಗಳ ‘ಕೋವಿಡ್-19 : ಮರಳಿ ಸೃಷ್ಟಿಕರ್ತನ ಕಡೆಗೆ’ ಎಂಬ ರಾಜ್ಯವ್ಯಾಪಿ ಅಭಿಯಾನವನ್ನು ಹಮ್ಮಿಕೊಂಡಿದೆ. ಮತ್ತು ನಿನ್ನೆ ಆಗಸ್ಟ್ 9ರಂದು ಒಂದು ಅಂತರ್ಧಮೀಯ ವೇಬ್ ನಾರ್ ನಡೆಸಲಾಯಿತು ಮತ್ತು ಆಗಸ್ಟ್ 16ಕ್ಕೆ ಒಂದು ಆನ್‌ಲೈನ್ ವಿಚಾರಗೋಷ್ಠಿಯಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಈ ಮೂಲಕ ರಾಜ್ಯದ ಕನಿಷ್ಠ ಒಂದು ಕೋಟಿ ಜನರಿಗೆ ಈ ಸಂದೇಶವನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜಮಾಅತೆ ಇಸ್ಲಾಮಿ ಹಿಂದ್ ಮಾನವಿ ಘಟಕದ ವತಿಯಿಂದ 15 ದಿನಗಳ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದೆ. ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್, ಯೂಟೂಬ್ ಇತ್ಯಾದಿ ಡಿಜಿಟಲ್ ಸಾಮಾಜಿಕ ಜಾಲತಾಣಗಳ ವೇದಿಕೆಗಳ ಮೂಲಕ ಈ ಅಭಿಯಾನದ ಸಂದೇಶವನ್ನು ಪ್ರಸಾರ ಮಾಡಲಾಗುವುದು. ಈ ನಡುವೆ ವಿವಿಧ ಧಾರ್ಮಿಕ ಗುರುಗಳನ್ನು, ವೈದ್ಯರನ್ನು, ಪ್ರಭಾವಿ ವ್ಯಕ್ತಿಗಳನ್ನು ಹಾಗೂ ಕೋವಿಡ್ ವಾರಿಯ‌ರ್ ಗಳನ್ನು ಭೇಟಿ ಮಾಡಿ ಅವರಿಂದ ಜನರಲ್ಲಿ ಆತ್ಮಸ್ಥೆರ್ಯ, ಸಹನೆ ಹಾಗೂ ದೇವರಲ್ಲಿ ವಿಶ್ವಾಸವನ್ನು ಮೂಡಿಸುವ ಸಂಧೇಶಗಳ ಆಡಿಯೋ ವಿಡಿಯೋ ಕ್ಲಿಪ್‌ಗಳನ್ನು ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವುದು, ಮಸೀದ್‌ಗಳಲ್ಲಿ ಶುಕ್ರವಾರದ ಪ್ರವಚನ, ಮೊಹಲ್ಲಾ ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ನಂತರ ಸಂಘಟನೆಯ ಅಧ್ಯಕ್ಷ ಅಬ್ದುಲ್ ಕರೀಮ್ ಖಾನ್ ಮಾತಾನಾಡಿ ದೇಶದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾನವ ಜೀವನ ರಕ್ಷಣೆ, ರೋಗದ ಪ್ರಭಾವ ಕುಗ್ಗಿಸಲು ಮತ್ತು ಸೋಂಕು ಹರಡದಂತೆ ತಡೆಯಲು ಸರ್ಕಾರ ಮತ್ತು ಆರೋಗ್ಯ ತಜ್ಞರು ಸೂಚಿಸುವ ಮುಂಜಾಗೃತಾ ಕ್ರಮಗಳ ಪಾಲನೆ ಅತ್ಯಗತ್ಯ. ಆದರೆ ಇಂತಹ ಪರಿಸ್ಥಿತಿಯ ಏರುಪೇರುಗಳಲ್ಲಿ ಕಾರ್ಯವೆಸಗುವ ಎರಡು ದೊಡ್ಡ ವಾಸ್ತವಗಳನ್ನು ಮಾನವ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ಈ ವಿಶ್ವದ ಸೃಷ್ಟಿಕರ್ತನ ಅಸಾಮಾನ್ಯ ಸಾಮರ್ಥ್ಯ ಮತ್ತು ಎರಡನೆಯದು ಕರ್ಮಗಳ ಪರಿಣಾಮದ ಕುರಿತು ಅಚಲ ನಂಬಿಕೆ. ಮತ್ತು ಅವುಗಳ ನಿರ್ಲಕ್ಷವೇ ಅವನ ಇಹಪರಗಳ ವಿನಾಶಕ್ಕೆ ಕಾರಣವಾಗುತ್ತದೆ. ಈ ನೈತಿಕ ತತ್ವವನ್ನು ನೆನಪಿನಲ್ಲಿಡುವುದು ಇಂದು ತೀರಾ ಅವಶ್ಯ ವಾಗಿದೆ. ಇಂತಹ ಸಮಯದಲ್ಲಿ ಜನರು ಸೃಷ್ಟಿ ಕರ್ತನಲ್ಲಿ ತಮ್ಮ ಪಾಪಗಳು ಪಶ್ಚಾತ್ತಾಪ ಮಾಡುವುದು. ಅವರ ಮೇಲೆ ಭರವಸೆ ಇಡುವುದು, ದೇವ ಸ್ಮರಣೆ ಮಾಡುವುದು, ಸಹನೆ ವಹಿಸುವುದು ಮತ್ತು ದೇವನ ಸಹಾಯಕ್ಕಾಗಿ ಪರಿಸ್ಥಿತಿಯ ಸುಧಾರಣೆಗಾಗಿ ದೇವನಲ್ಲಿ ಪ್ರಾರ್ಥನೆ ಮಾಡುವುದು ಅಗತ್ಯ. ಇದು ಜಮಾಅತೆ ಇಸ್ಲಾಮಿ ಹಿಂದ್‌ನ ಬಲವಾದ ನಂಬಿಕೆ ಇಡಬೇಕು ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಅಬ್ದುಲ್ ರೆಹಮಾನ್ .ಸಬ್ಜಲಿ ಶಿಕ್ಷಕರು.ಶೇಕ್ ಬಾಬಾ ಹುಸೇನ್.ಉಮರ್ ಫಾರುಕ್. ಎಂ ಎಚ್ ಎ ಮುಖೀಮ್.ಜುಬೇರ ಖಾನ್.ಸಮೀರ್ ಪಾಷ.ಅಬ್ದುಲ್ ಖ್ಯಯಂ.ಅಲೀಮ್ ಖಾನ್. ಮಹಮ್ಮದ್ ಮೂಸಾ.ಅಬ್ದುಲ್ ಜಬ್ಬರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here