ಪೋತ್ನಾಳ ಮುಸ್ಲಿಂ ಸಮಾಜದ ಸೇವೆ ಶ್ಲಾಘನೀಯ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಕುಮಾರಸ್ವಾಮಿ.

0
141

ಪೊತ್ನಾಳ್, ಏಪ್ರೇಲ್ 09 – ಇಂದು ಬೆಳಿಗ್ಗೆ ಪೋತ್ನಾಳ ಬಸ್‌ಸ್ಟಾö್ಯಂಡನಲ್ಲಿ ಸಾರ್ವಜನಿಕರಿಗೆ ಮುಸ್ಲಿಂ ಸಮಾಜದಿಂದ ಉಚಿತವಾಗಿ 1000 ಮಾಸ್ಕ್ ಗಳನ್ನು ವಿತರಿಸಲಾಯಿತು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಸ್, ಕುಮಾರಸ್ವಾಮಿ ಪೋತ್ನಾಳ ಇವರು ಸಾರ್ವಜನಿಕರಿಗೆ ಮಾಸ್ಕ್ ವಿತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಮಾತನಾಡಿದ ಕೆ.ಎಸ್. ಕುಮಾರಸ್ವಾಮಿಯವರು ಪೋತ್ನಾಳ ಮುಸ್ಲಿಂಮರು ಉಚಿತವಾಗಿ ಮಾಸ್ಕ್ ವಿತರಿಸುವುದರ ಮೂಲಕ ಈ ಮಹಾಮಾರಿ ಕೋರೊನಾ ವೈರಸ್ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ, ಅಭಿನಂದನೀಯ ಎಂದು ಹೇಳಿದರು. ಇತ್ತಿಚಿಗೆ ಆರ್.ಎಸ್.ಎಸ್ ವತಿಯಿಂದ ಪೋತ್ನಾಳದಲ್ಲಿ ಪಥಸಂಚಲನ ಮಾಡಿದಾಗ ಪಥಸಂಚಲನದಲ್ಲಿ ಭಾಗವಹಿಸಿದ್ದ ಗಣವೇಷಧಾರಿಗಳಿಗೆ ಮುಸ್ಲಿಂ ಸಮಾಜದ ವತಿಯಿಂದ ಪಾನಕ ಹಾಗೂ ಹಣ್ಣುಗಳನ್ನು ವಿತರಿಸುವುದರ ಮೂಲಕ ಸಹೋದರತ್ವ ಸಾರಿದ್ದರು ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.

ಕೋವಿಡ-19 ಕೋರೊನಾ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ, ವಿಶೇಷವಾಗಿ ಆರೋಗ್ಯ ಇಲಾಖೆ ಸಿಬ್ಬಂಧಿ, ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಆಶಾಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ನರ್ಸ್ಗಳಿಗೆ ಮುಸ್ಲಿಂ ಸಮಾಜದ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಅರ್ಪಿಸಿದ್ದಾರೆ.
ನಂತರ ನ್ಯಾಯಬೆಲೆ ಅಂಗಡಿಗೆ ತೆರಳಿ ಅಲ್ಲಿ ಸೇರಿದ್ದ ಎಲ್ಲಾ ಪಡಿತರದಾರರಿಗೆ ಮಾಸ್ಕ್ಗಳನ್ನು ವಿತರಿಸಲಾಯಿತು,

ಈ ಕಾರ್ಯಕ್ರಮದಲ್ಲಿ ಮಾನವಿ ತಾಲೂಕ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಏಚ್ ಶರ್ಫುದ್ದೀನ್, ಡಾ|| ಪ್ರಶಾಂತ ಇಲ್ಲೂರು, ಮುಸ್ಲಿಂ ಸಮಾಜದ ಮುಖಂಡರಾದ ಖಾನಸಾಬು, ಇಸ್ಮಾಯಿಲ್ ಅಫೀಜ್‌ಸಾಬು, ರಾಜಾ ಮೇಸ್ತಿç, ಪಕೀರಸಾಬು, ನದಾಫ ಸಂಘದ ಗ್ರಾಮ ಘಟಕದ ಅಧ್ಯಕ್ಷರಾದ ಮೋದಿನ್‌ಸಾಬು, ಗ್ರಾ ಪಂ ಸದಸ್ಯರಾದ ಎಂ.ಪಿ. ಶರೀಪ್, ಜಾಕೀರ್ ಜೀನೂರ, ರಾಯಲ್ ಟೇಲರ್, ನಬಿಸಾಬು ಹಾಲಪುರ, ಯಂಕಪ್ಪ ನಾಯಕ, ಬಿಜೆಪಿ ಮಲ್ಲಯ್ಯ, ಹನ್ಮಂತ್ರಾಯ, ಗುರರಾಜ ನ್ಯಾಯಬೆಲೆ ಅಂಗಡಿ, ಬಸವರಾಜ ಭಜಂತ್ರಿ, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here