ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬಸನಗೌಡ ಬಾದರ್ಲಿ ಫೌಂಡೇಶನ್ ನಿಂದ ಬಡವರಿಗೆ, ರೋಗಿಗಳಿಗೆ ಹಾಗೂ ನಿರ್ಗತಿಕರಿಗೆ ಉಚಿತ ಊಟ, ಮಾಸ್ಕ್, ಸಹಾಯವಾಣಿಯ ನಿರಂತರ ಸೇವೆ

0
280

ಸಿಂಧನೂರು,ಮಾ,31-: ಕೊರೊನಾ ಮಹಾಮಾರಿ ವೈರಸ್ ನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು‌ ಆಡಳಿತದಿಂದ 144 ಸೆಕ್ಷನ್ ಜಾರಿಗೊಳಿಸಿ ಸಿಂಧನೂರು ಲಾಕ್ ಡೌನ್ ಮಾಡಲಾಗಿದೆ. ಆ ಹಿನ್ನಲೆಯಲ್ಲಿ ಅಂಗಡಿ ಮುಗ್ಗಟ್ಟು ಬಂದ್ ಆಗಿದ್ದು, ನಗರದಲ್ಲಿರುವ ಬಡವರಿಗೆ, ರೋಗಿಗಳಿಗೆ ಹಾಗೂ ನಿರ್ಗತಿಕರಿಗೆ ನಗರದ ಬಸನಗೌಡ ಬಾದರ್ಲಿ ಫೌಂಡೇಶನ್ ನಿಂದ ಹಮ್ಮಿಕೊಂಡಿರುವ ನಿರಂತರ ಉಚಿತ ಊಟದ ಸೇವೆ 8 ದಿನಕ್ಕೆ ಕಾಲಿಟ್ಟಿದ್ದು, ಯುವಕರ ನಿರಂತರ ಸೇವೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಲಾಕ್ ಡೌನ್ ಹಿನ್ನಲೆಯಲ್ಲಿ ನಗರದಲ್ಲಿ ಕುಡಿಯುವ ನೀರು, ಆಹಾರಕ್ಕಾಗಿ ಬಡವರು ಹಾಗೂ ರೋಗಿಗಳ ಜೊತೆ ಬಂದವರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭಗಳಲ್ಲಿ ಎರಡು ವಾಹನ, ಎರಡು ಆಟೋ ಹಾಗೂ 50ಕ್ಕಿಂತ ಹೆಚ್ಚಿನ ಯುವಕರು ಜೊತೆಗೂಡಿ ರೋಗಿಗಳಿಗೆ ಹಾಗೂ ಅವರ ಜೊತೆಯಿರುವವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಸೇವೆಗೆ ಸಿದ್ಧ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಮಾರ್ಗದರ್ಶನದಲ್ಲಿ ಯುವ ಪಡೆ ತನ್ನ ಕಾರ್ಯ ಆರಂಭಿಸಿದೆ. ಯುವಕರು ತಾವೇ ಅಡುಗೆ ಮಾಡಿ, ಯುವ ಕಾಂಗ್ರೆಸ್ ಕಛೇರಿಯಲ್ಲೇ ಅಹಾರದ ಪೊಟ್ಟಣ ಸಿದ್ಧಪಡಿಸಿ, ಪ್ರತಿದಿನ ಸೇವೆ ಸಿದ್ಧರಾಗಿ, ವಾಹನಗಳ ಮೂಲಕ ಹಾಗೂ ಬೈಕ್ ಮೂಲಕ ಬಡವರಿಗೆ ಹಂಚಿಕೆ ಮಾಡಿ ಅನುಕೂಲ ಕಲ್ಪಿಸುತ್ತಿದ್ದಾರೆ‌.

ಮಾಸ್ಕ್ ವಿತರಣೆ: ಕೇವಲ ಆಹಾರ ವಿತರಣಾ ಸೇವೆಗಷ್ಟೇ ಸೀಮಿತರಾಗದ ಫೌಂಡೇಶನ್‌ ನ ಯುವಕರು ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಅನುಸರಿಸಬೇಕಾದ ಮಾಸ್ಕ್ ಇನ್ನಿತರ ಅಗತ್ಯ ವಸ್ತುಗಳನ್ನು ಸಹ ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಜನರಿಗೆ ಉಚಿತವಾಗಿ ಹಂಚಿಕೆ ಮಾಡಿದ್ದಾರೆ‌ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ‌.

ಇದ್ದಲ್ಲಿಯೇ ಸೇವೆ, ಸಹಾಯವಾಣಿ ಆರಂಭ: ಫೌಂಡೇಶನ್ ನಿಂದ ಈಗಾಗಲೇ ಸಹಾಯವಾಣಿ ಆರಂಭಿಸಲಾಗಿದೆ. ಬೆಂಗಳೂರಿನಿಂದ ಸಿಂಧನೂರು ಮಾರ್ಗವಾಗಿ ತೆರಳುವ ಪ್ರಯಾಣಿಕರಿಗೆ ಅವರುಗಳು ಇದ್ದಲ್ಲಿಯೇ ತೆರಳಿ ಆಹಾರದ ಪೊಟ್ಟಣ, ನೀರು, ಬಿಸ್ಕತ್ತು, ಹಣ್ಣು ಇನ್ನಿತರ ಅಗತ್ಯವನ್ನು ವಸ್ತುಗಳನ್ನು ನೀಡಲಾಗುತ್ತಿದ್ದು, ಸಹಾಯವಾಣಿ ನಂಬರುಗಳಿಗೆ ದೂರವಾಣಿ ಮೂಲಕ ಕರೆ ಮಾಡಿದರೆ ಸಾಕು ಅರ್ಧ ಗಂಟೆಯೊಳಗೆ ಇದ್ದಲ್ಲಿಯೇ ಅವರ ಹತ್ತಿರ ತೆರಳಿ ಅವರ ಸೇವೆಯನ್ನು ಯುವ ಪಡೆ ಮಾಡುತ್ತಿದೆ. ಒಟ್ಟಾರೆಯಾಗಿ ಬಸನಗೌಡ ಬಾದರ್ಲಿ ಫೌಂಡೇಶನ್ ನಿಂದ ಈ ಸಾಮಾಜಿಕ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದೇ ಸೇವಾಮನೋಭಾವನೆ ಮುಂದುವರೆಯುವ ಮೂಲಕ ಇನ್ನಷ್ಟು ಜನರಿಗೆ ಇವರ ಸಿಗಲಿ ಎನ್ನುವುದೇ ಪ್ರಜ್ಞಾವಂತ ನಾಗರೀಕರ ಆಶಯವಾಗಿದೆ.

LEAVE A REPLY

Please enter your comment!
Please enter your name here