ಪ್ರತಿಯೊಬ್ಬರು ಮನಸ್ಸು ಶುದ್ಧವಾಗಿಟ್ಟುಕೊಳ್ಳಿ : ರವಿಶಂಕರ ಗುರೂಜಿ

0
64

ಸಿಂಧನೂರು.ಫೆ.06 –  ಪ್ರತಿಯೊಬ್ಬರು ಮನಸ್ಸು ಶುದ್ದವಾಗಿಟ್ಟುಕೊಳ್ಳಬೇಕು. ದ್ವೇಷ, ಅಸೂಯೆ, ಚಿಂತೆ ಇಲ್ಲಿಯೇ ಬಿಟ್ಟು ಹೋಗಿ ಪರಿಶುದ್ದವಾದ ಜೀವನ ನಡೆಸಿ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ ಸಲಹೆ ನೀಡಿದರು.
ಅವರು ನಗರದ ಶ್ರೀಕೃಷ್ಣದೇವರಾಯ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆರ್ಟ್ ಆಫ್ ಲಿವಿಂಗ್ ನಿಂದ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯವೇ ಮಹಾಭಾಗ್ಯವಾಗಿದ್ದು, ಈ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಮಕ್ಕಳು ಪೌಷ್ಟಿಕಾಂಶ ಆಹಾರ ಸೇವೆನೆ ಮಾಡಬೇಕು. ಈ ಬಗ್ಗೆ ಪಾಲಕರು ಗಮನ ಹರಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು. ವಿದ್ಯಾರ್ಥಿಗಳು ಕಷ್ಟ ಪಟ್ಟು ಅಭ್ಯಾಸ ಮಾಡಬೇಕು. ಜೀವನದಲ್ಲಿ ಸಾಧನೆ ಮಾಡಬೇಕು ಎಂದರು.

ಸಾಬೂನು ಸೇರಿದಂತೆ ವಿದೇಶಿ ಎಲ್ಲಾ ವಸ್ತುಗಳಲ್ಲಿಯೂ ರಾಸಾಯನಿಕ ಅಂಶಗಳಿದ್ದು, ಆಯುರ್ವೇದಿಕ ಒಳಗೊಂಡಿರುವದು ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ, ನೀರು ಹಾಗೂ ಮಣ್ಣಿನ ಗುಣಮಟ್ಟ ಕಾಯ್ದುಕೊಳ್ಳಲು ಎಂದರು.

ಇದೇ ಸಂದರ್ಭದಲ್ಲಿ ರವಿಶಂಕರ ಗುರೂಜಿ ಅವರಿಗೆ ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ಗಣ್ಯರು ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅನೇಕ ಮಕ್ಕಳಿಗೆ ಗುರೂಜಿಯವರು ಅಕ್ಷರಾಭ್ಯಾಸ ಮಾಡಿಸಿದರು.

LEAVE A REPLY

Please enter your comment!
Please enter your name here