ಪೀಸ್ ಫಾರ್ ಹ್ಯುಮಾನಿಟಿ ಎಜುಕೇಷನಲ್& ಚಾರಿಟೇಬಲ್ ಟ್ರಸ್ಟ್ ವತಿಯಿಂದ – ಸಮಾವೇಶ ಸಿಎಎ ಕಾನೂನು ಸಂವಿಧಾನ ವಿರೋಧಿ: ಇಬ್ರಾಹಿಂ ಖಲೀಲ್

0
205

ಸಿಂಧನೂರು.ಫೆ.4 – ಸಿಎಎ ಕಾನೂನು ಸಂವಿAಧಾನ ವಿರೋಧಿಯಾಗಿದೆ, ಎಲ್ಲಾ ಭಾರತೀಯರು ಇದನ್ನು ತಿರಸ್ಕರಿಸಬೇಕು ಎಂದು ಮಂಗಳೂರಿನ ಇಬ್ರಾಹೀಮ್ ಖಲೀಲ್ ಅಭಿಪ್ರಾಯಪಟ್ಟರು.

ಅವರು ನಗರದ ಮಿಲಾಪ್ ಶಾದಿಮಹಲ್‌ನಲ್ಲಿ ಪೀಸ್‌ಫಾರ್ ಹ್ಯುಮಾನಿಟಿ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್‌ವತಿಯಿಂದ ಹಮ್ಮಿಕೊಂಡಿದ್ದ ಸಿಎಎ ವಿರುದ್ಧ ಸಮಾವೇಶದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಕೇಂದ್ರ ಸರಕಾರ ಜಾರಿ ಮಾಡಿದ ಕಾನೂನುಗಳಿಂದ ಭಾರತೀಯರು ಅನುಭವಿಸುವಂತಾಗುತ್ತದೆ. ಸಿಎಎ ವಿರುದ್ಧ ಹೋರಾಟ ಮಾಡಿದ ಇಬ್ಬರು ಅಮಾಯಕರನ್ನು ಮಂಗಳೂರುನಲ್ಲಿ ಗೋಲಿಬಾರ್ ಮಾಡಲಾಗಿದೆ. ಇದರಿಂದ ಭಾರತೀಯರು ಹೆದರುವುದಿಲ್ಲ. ಹೋರಾಟ ನಿರಂತರವಾಗಿದೆ ಎಂದರು.

ಹಿರಿಯ ಪತ್ರಕರ್ತ ಡಿ.ಎಚ್.ಕಂಬಳಿ ಮಾತನಾಡಿ, ಕೇಂದ್ರ ಸರಕಾರದಿಂದ ಭಾರತದ ಆರ್ಥಿಕತೆಯು ಬುಡಮೇ ಲಾಗಿದೆ. ಈ ಸರಕಾರವು ಆದಿವಾಸಿಗಳಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಬಡವರಿಗೆ ಅನ್ಯಾಯ ಮಾಡಿದೆ ಸಂವಿAಧಾನ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.

ಸಮಾವೇಶದಲ್ಲಿ ತಾಲ್ಲೂಕಿನ ಪ್ರಗತಿಪರ ಚಿಂತಕರು, ದಲಿತ ಮುಖಂಡರು, ಧಾರ್ಮಿಕ ಮುಖಂಡರು, ನಾಗರೀಕರು, ಮಹಿಳೆಯರು ಹಾಗೂ ಪೀಸ್‌ಫಾರ್ ಹ್ಯುಮಾನಿಟಿ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here