ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಿಗಳನ್ನು ಬಂಧಿಸಲು ಒತ್ತಾಯಿಸಿ ಭೋವಿ ಸಮಾಜದಿಂದ ಪ್ರತಿಭಟನೆ

0
39

ಸಿಂಧಂನೂರು.ಜ.29: ತಾಲ್ಲೂಕಿನ ಸಿದ್ರಾಂಪುರ ಗ್ರಾಮದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಭೋವಿ (ವಡ್ಡರ) ಸಮಾಜದ ತಾಲ್ಲೂಕು ಘಟಕ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮಿನಿ ವಿಧಾನಸೌದಕ್ಕೆ ಬಂದು ತಲುಪಿತು. ಅತ್ಯಾಚಾರ ಘಟನೆ ನಡೆದು ಇಂದಿಗೂ ಆರು ದಿನಗಳಾದರೂ ಸಹ ಆರೋಪಿಯನ್ನು ಪೋಲಿಸರು ಬಂಧಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಖಂಡಿಸಿದರು.

ಪ್ರತಿಭಟನೆಯಲ್ಲಿ ಭೋವಿ (ವಡ್ಡರ) ಸಮಾಜದ ಮುಖಂಡರಾದ ಅಶೋಕ ಉಮಲೂಟಿ, ದುರುಗಪ್ಪ ಮಲ್ಲದಗುಡ್ಡ, ಗೋವಿಂದರಾಜ, ಹಂಸರಾಜ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಡಿ.ಎಚ್.ಕಂಬಳಿ, ಎಚ್.ಎನ್. ಬಡಿಗೇರ, ಖಾದರ್ ಸುಬಾನಿ, ಖಾಜಿ ಮಲ್ಲಿಕ್, ಅಶೋಕ ನಂಜಲದಿನ್ನಿ, ನಾಗರಾಜ ಪೂಜಾರ, ಬಾಬರ್ ಪಟೇಲ್, ವೆಂಕಟೇಶ ಭೋವಿ, ಲಕ್ಷö್ಮಣ ಬೋವಿ, ಬಾಲಕಿಯ ತಾಯಿ ಲಕ್ಷ್ಮೀ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here