ಇವಿಎಂ ರದ್ದತಿಗೆ ಒತ್ತಾಯಿಸಿ 29ರಂದು ಭಾರತ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆಗೆ ಕರೆ; ಆದಿಲ್ ಶೇಕ್ ಜಿಲ್ಲಾ ಸಂಚಾಲಕ ಬಹುಜನ ಕ್ರಾಂತಿ ಮೋರ್ಚಾ

0
232

ರಾಯಚೂರು:ಜ.28- ಚುನಾವಣೆಗಳಲ್ಲಿ ಇವಿಎಂ ಮತಯಂತ್ರಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ನಿಷ್ಪಕ್ಷಪಾತವಾದ ಚುನಾವಣೆ, ಪೌರತ್ವ ಕಾಯ್ದೆ ರದ್ಧತಿಗೆ ಒತ್ತಾಯಿಸಿ ಆಗ್ರಹಿಸಲು ನಾಳೆ 29ಕ್ಕೆ ಭಾರತ ಬಂದ್ ಹಿನ್ನಲೆಯಲ್ಲಿ ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಶಾಂತಿಯುತವಾದ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಜಿಲ್ಲಾ ಸಂಯೋಜಕ ಆದಿಲ್ ಶೇಕ್,(ಹಮ್ಮದ್ ಅಜೀಮ್ ) ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,ಇವಿಎಂ ಮತಯಂತ್ರ ಲೋಪವಾಗಿದ್ದು ನಿಷ್ಪಕ್ಷಪಾತ ಚುನಾವಣೆಯಾಗುವುದಿಲ್ಲ ಎಂದು ಸುಪ್ರಿಂಕೋರ್ಟ್ 2013 ರಲ್ಲಿ ಹೇಳಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ಶೆ.100 ರಷ್ಟು ವಿವಿಪ್ಯಾಡ್ ಅಳವಡಿಸದೆ ಸುಪ್ರಿಂಕೋರ್ಟ್ ಆದೇಶವನ್ನು ಚುನಾವಣಾ ಆಯೋಗ ಜಾರಿಗೊಳಿಸಿಲ್ಲ.
2019ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಮತಯಂತ್ರ ಹಾಗೂ ವಿವಿಪ್ಯಾಡ್ ಅಂಕಿ ಅಂಶಗಳ ತಾಳೆಯಾಗುತ್ತಿಲ್ಲ,ಅಧಿಕೃತ ಅಂಕಿ ಅಂಶಗಳು ಹೊರಹಾಕುತ್ತಿಲ್ಲ,ದೇಶದಲ್ಲಿ ಮನುವಾದಿ ಸರ್ಕಾರಗಳು ಭಾರತೀಯ ಮೂಲ ನಿವಾಸಿಗಳಾದ ಬಹುಜನರ ಯಾವುದೇ ಮೂಲಭೂತ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರಸ್ತುತ ಭಾರತೀಯ ಸಂವಿಧಾನ ಸಮಾನತೆಯ ವಿರೋಧದಲ್ಲಿದೆ. ನಮ್ಮ ಸಂವಿಧಾನಿಕ ಹಕ್ಕು ಮತ್ತು ಅಧಿಕಾರ ಪಡೆಯುವುದಕ್ಕಾಗಿ ಎಲ್ಲಾ ಮೂಲ ನಿವಾಸಿ ಬಹುಜನರು ಸಾಮೂಹಿಕವಾಗಿ ಸಹಮತ ವೇದಿಕೆಯನ್ನು ರಚಿಸಿಕೊಂಡು,ಇದೀಗ ರಾಷ್ಟ್ರಮಟ್ಟದಲ್ಲಿ ಒಂದಾಗುವುದು ಅನಿವಾರ್ಯವಾಗಿದ್ದು,ಇವಿಎಂ ವಿರುದ್ಧ ಧ್ವನಿ ಎತ್ತುವುದಕ್ಕಾಗಿ ಸಂಘಟಿತರಾಗಬೇಕು, ಜಾತ್ಯಾತೀತ ಪ್ರತಿಪರ ಸಂಘಟನೆಗಳು ಬಹುಜನ ಕ್ರಾಂತಿ ಮೋರ್ಚಾದ ಕೈ ಜೋಡಿಸಿ ಸಂವಿಧಾನ ಮತ್ತು ಪ್ರಜಾ ಪ್ರಭುತ್ವದ ವ್ಯವಸ್ಥೆ ಕಾಪಾಡುವ ಈ ಆಂದೋಲನಕ್ಕೆ ಬೆಂಬಲಿಸಿ ಎಂದರು.

ಇಂದಿನ ಎಲ್ಲಾ ಪ್ರಗತಿಪರ ಸಂಘಟನೆಯ ಮುಖಂಡರು ಹೋರಾಟಕ್ಕೆ ಸ್ವಯಂ ಪ್ರೇರಿತರಾಗಿ ಬೆಂಬಲಿಸಬೇಕು ಎಂದರು.
ನಗರದ ಟಿಪ್ಪು ಉದ್ಯಾವನದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಅಸೀಮುದ್ದೀನ್, ಲತೀಫ್ ಸಾಬ್, ಫಾರೂಕ್ ಸಾಬ್ ಮತ್ತು ಇತರೇ ಮುಖಂಡರು ಉಪಸ್ಥಿತರಿ

LEAVE A REPLY

Please enter your comment!
Please enter your name here