ಅನಿಕೇತನ ಕಾಲೇಜಿನ ವಿದ್ಯಾರ್ಥಿನಿ ಅನಿತಾಗೆ ಚಿನ್ನದ ಪದಕ.

0
43

ಸಿಂಧನೂರು:ಜ.28 ಗುಲಬರ್ಗಾ ವಿಶ್ವವಿದ್ಯಾಲಯವು 2018-19ನೇ ಸಾಲಿನ ಪದವಿ ವಿಭಾಗದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಪಟ್ಟಿ ಪ್ರಕಟಗೊಳಿಸಿದ್ದು,

ಪಟ್ಟಣದ ಅನಿಕೇತನ ಪದವಿ ಮಹಾವಿದ್ಯಾಲಯದ ಬಿ.ಕಾಂ ವಿಭಾಗದ ‘ವ್ಯವಹಾರ ಕಾನೂನು’ ವಿಷಯದಲ್ಲಿ ಅನಿತಾ ಕೆ ಸಾಲಗುಂದಾ ಎಂಬ ವಿದ್ಯಾರ್ಥಿನಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ ಎಂದು ಪ್ರಾಚಾರ್ಯ ತಿಮ್ಮಣ್ಣ ರಾಮತ್ನಾಳ ತಿಳಿಸಿದ್ದಾರೆ.

ಇದೇ ತಿಂಗಳು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುವ 38ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅನಿತಾಗೆ ಚಿನ್ನದ ಪದಕ ಪ್ರಧಾನ ಮಾಡಲಿದ್ದಾರೆ ಎಂದು ಹೇಳಿದರು.ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ,ಉಪನ್ಯಾಸಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here