ಶಿವಯೋಗಿ ಸಿದ್ದರಾಮೇಶ್ವರ 848ನೇ ಜಯಂತಿ. ವಿಜೃಂಭಣೆಯಿಂದ ಜರುಗಿದ ಭಾವಚಿತ್ರ ಮೆರವಣಿಗೆ.

0
68

ರಾಯಚೂರು: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ನಗರಸಭೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಂಯುಕ್ತಾಶ್ರಯದಲ್ಲಿ 848ನೇ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ನಗರದಲ್ಲಿ ಶನಿವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಪುತ್ಥಳಿಗೆ ಪೂಜೆ ಸಲ್ಲಿಸಿ ಗಣ್ಯರು ಮಾಲಾರ್ಪಣೆ ಮಾಡಿದರು.
ನಂತರ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆಗೆ ವಿಧಾನಪರಿಷತ್ ಸದಸ್ಯ ಎನ್ ಎಸ್ ಬೋಸರಾಜ್ ಅವರು ಚಾಲನೆ ನೀಡಿದರು.
ಸ್ಟೇಷನ್ ವೃತ್ತ ಮಾರ್ಗವಾಗಿ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದ ವರೆಗೆ ನಡೆಯಿತು.

ಮೆರವಣಿಗೆಯಲ್ಲಿ ವಿಧಾನಪರಿಷತ್ ಸದಸ್ಯ ಎಂಎಸ್ ಬೋಸರಾಜ್, ಶಾಸಕರಾದ ಡಾ. ಶಿವರಾಜ್ ಪಾಟೀಲ್,ಬಸನಗೌಡ ದದ್ದಲ್, ನಗರಸಭೆ ಸದಸ್ಯರಾದ ಜಯಣ್ಣ, ಬಿ ರಮೇಶ್, ಬೀ ನಾಗರಾಜ, ನಾಗರಾಜ್,ಶ್ರೀನಿವಾಸ್ ರೆಡ್ಡಿ, ಬಿಜೆಪಿ ಮುಖಂಡ ರವೀಂದ್ರ ಜಲ್ದರ್, ಕೆ ಶಾಂತಪ್ಪ,ಗAಗಾಧರ್ ನಾಯಕ್,ಅಬ್ದುಲ್ ಕರೀಂ,ಜಿ ಶಿವಮೂರ್ತಿ, ತಾ ಯಣ್ಣ ನಾಯ,ಜಿ ತಿಮ್ಮಾರೆಡ್ಡಿ,ಶಶಿಕಲಾ,ವೈ ಗೋಪಿ, ವಿಜಯಾ ರಾಜೇಶ್ವರಿ, ಸೇರಿದಂತೆ ಅನೇಕರಿದ್ದರು.

LEAVE A REPLY

Please enter your comment!
Please enter your name here