`ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ’ ವೆಲ್ಫೇರ್ ಪಾರ್ಟಿ ವತಿಯಿಂದ ಜನವರಿ 23-30 ವರೆಗೆ ದೇಶವ್ಯಾಪಿ ಅಭಿಯಾನ,ಪೂಸ್ಟರ್ ಬಿಡುಗಡೆ; ಸುಲೈಮಾನ್ ಕಲ್ಲರ್ಪೆ

0
289

ಪುತ್ತೂರು : ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ `ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ’ ಎಂಬ ಅಭಿಯಾನ ನಡೆಸಲಿದೆ. ಈ ಅಭಿಯಾನವು ಜನವರಿ 23 ರಿಂದ ಜನವರಿ 30 ರ ವರೆಗೆ ಒಂದು ವಾರ ಕಾಲ ನಡೆಯಲಿದೆ ಎಂದು ಸುಲೈಮಾನ್ ಕಲ್ಲರ್ಪೆ ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು.

ಅವರು ಇಂದು ಪುತ್ತೂರಿನ ಪತ್ರಿಕಾ ಭವನದಲ್ಲಿ ಸುದ್ದಿ ಘೊಷ್ಟಿ ನಡೆಸಿ ಮಾತನಾಡಿ ಸಿಎಎ ಕಾಯ್ದೆಯು ದೇಶದ ಸಂವಿಧಾನದ ಮೂಲ ಆಶಯಕ್ಕೆ ಮತ್ತು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನಿಗ ವಿರುದ್ಧವಾಗಿದ್ದು, ಜಾತಿ ತಾರತಮ್ಯತೆಯಿಂದ ಕೂಡಿದೆ. ಇದು ಭಾರತದ ಜಾತ್ಯಾತೀತತೆಯ ಪರಂಪರೆಗೆ ಕೊನೆ ಹಾಡಲಿದೆ. ಮಾತ್ರವಲ್ಲದೆ, ಸರಕಾರದ ಅವೈಜ್ಞಾನಿಕ ಸರಕು ಮತ್ತು ಸೇವಾ ತೆರಿಗೆ ಹಾಗೂ ನೋಟ್ ಅಮಾನ್ಯೀಕರಣದಂತಹ ಕರಾಳ ಕ್ರಮಗಳಿಂದ ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟ ಮತ್ತು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ದೇಶದ ಜನತೆಗೆ ಇವು ಅನಗತ್ಯ ಹೆಚ್ಚುವರಿ ತೊಂದರೆ ನೀಡಲಿವೆ ಎಂದು ವೆಲ್ಫೇರ್ ಪಾರ್ಟಿ ಅಭಿಪ್ರಾಯಿಸಿದೆ. ಸಿಎಎಯನ್ನು ವಿರೋಧಿಸುವುದರ ಜತೆಗೆ ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ಗಳನ್ನು ಇಡೀ ದೇಶದಲ್ಲಿ ಜಾರಿಗೆ ತಂದಿರುವುದನ್ನು ಕೂಡಾ ಪಕ್ಷ ವಿರೋಧಿಸುತ್ತದೆ ಎಂದು ಹೇಳಿದರು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ನಡೆ ಆರಂಭಿಸಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಿಲ್ಲ, ಕಪ್ಪುಹಣ ವಾಪಾಸ್ ತಂದಿಲ್ಲ, ಸ್ವಾಮಿನಾಥನ್ ವರದಿ ಜಾರಿ ಗೊಳಿಸಿಲ್ಲ, ಬೆಲೆ ಏರಿಕೆ ನಿಯಂತ್ರಿಸಿಲ್ಲ,

ಬದಲಾಗಿ ದೇಶದ ಸಂಪತ್ತನ್ನು ಅದಾನಿ, ಅಂಬಾನಿ ಯಂತಹವರಿಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಇವುಗಳನ್ನು ಮರೆಮಾಚಲು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ

ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ಜನಜಾಗೃತಿ ಮೂಡಿಸುವುದು ನಮ್ಮ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕಡೆಗಳಲ್ಲಿ ವಿಚಾರಗೋಷ್ಠಿ, ಕಾರ್ನರ್ ಸಭೆ, ಬೃಹತ್ ಸಾರ್ವಜನಿಕ ಸಭೆ, ‍ರ್ಯಾಲಿ, ಕ್ಯಾಂಡಲ್ ಮಾರ್ಚ್, ಮಾನವ ಸರಪಳಿ, ಬೀದಿ ನಾಟಕ, ಕರಪತ್ರ ಹಂಚಿಕೆ, ಏಕದಿನ ಧರಣಿ, ಪೋಸ್ಟರ್ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಡಿಸಂಬರ್ 25 ರಂದು ಪಕ್ಷವು ಸಿಎಎ ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ನಲ್ಲಿ ರಿಟ್ ದಾಖಲಿಸಿದೆ.

ಅಭಿಯಾನದ ಅಂಗವಾಗಿ ಜನವರಿ 26ರಂದು ಮಂಗಳೂರಿನಲ್ಲಿ ಮಾನವ ಸರಪಳಿ ಮತ್ತು ವಿಚಾರ ಘೊಷ್ಠಿ ಹಮ್ಮಿಕೊಳ್ಳಲಾಗಿದೆ. ಜನವರಿ 30 ರಂದು ಮಂಗಳೂರಿನ ಪುರಭವನದ ಮುಂಭಾಗದಲ್ಲಿ ಏಕದಿನ ಧರಣಿ ನಡೆಸಲಾಗುವುದು.

ಈ ಸಂದರ್ಭದಲ್ಲಿ ಪುತ್ತೂರು ವಲಯದ ಅಧ್ಯಕ್ಷರು ಬ್ರಾಹೀಮ್ ಎಸ್, ಅನ್ವರ್ ಸಾದತ್ ಅಧ್ಯಕ್ಷರು ಉಪ್ಪಿನಂಗಡಿ ಘಟಕ, ಇಸಾಕ್ ನೀರ್ಕಜೆ ಅಧ್ಯಕ್ಷರು ವಿಟ್ಲ ಘಟಕ, ಇಂಜಿನಿಯರ್ ಮುಜಮ್ಮಿಲ್ ಅಧ್ಕಕ್ಷರು ಬೆಳ್ತಂಗಡಿ ಘಟಕ,  ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪಕ್ಷದ ವತಿಯಿಂದ ನಡೆಯುವ ಅಭಿಯಾನದ ಪೊಸ್ಟರ್ ಗಳನ್ನ ಬಿಡುಗಡೆ ಮಾಡಲಾಯಿತು.

LEAVE A REPLY

Please enter your comment!
Please enter your name here