ಎಸ್‌ಸಿ -ಎಸ್‌ಟಿ ಗುತ್ತೇದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಹನುಮಂತ ಅಧ್ಯಕ್ಷರಾಗಿ ಆಯ್ಕೆ

0
122

ಸಿರವಾರ:  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಿರವಾರ ತಾಲೂಕ ಎಸ್‌ಸಿ/ ಎಸ್ ಟಿ ಗುತ್ತೇದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದೂ ಅಧ್ಯಕ್ಷರಾಗಿ ಹನುಮಂತ ಮರಾಠ(ಲಂಕೇಶ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪಿಆರ್‌ಇಡಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಎಸ್.ಸಿ/ಎಸ್.ಟಿ ಸಭೆ ಕರೆದಿದ್ದೂ, ಸಭೆಯಲ್ಲಿ ಜಿಲ್ಲೆಯಾದ್ಯಾಂತ ಆಯಾ ತಾಲೂಕುಗಳ ಎಸ್ಸಿ/ಎಸ್ಟಿ ಗುತ್ತೇದಾರರ ಸಂಘ ರಚನೆ ಮಾಡಿ ಗುತ್ತೇದಾರರ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸದಂತೆ ನೂತನ ಸಿರವಾರ ತಾಲೂಕು ಘಟಕ ರಚನೆ ಮಾಡಲಾಗಿದೆ. ಸಂಘಕ್ಕೆ ಅಧ್ಯಕ್ಷರಾಗಿ ಹನುಮಂತ ಮರಾಠ, ಉಪಾಧ್ಯಕ್ಷರಾಗಿ ಬಸವರಾಜ ಕೆ. ಗಣದಿನ್ನಿ, ಕಾರ್ಯಾಧ್ಯಕ್ಷ ಎಲ್.ವಿ.ಸುರೇಶ ಜಾಲಾಪೂರುಕ್ಯಾಂಪ್, ಪ್ರಧಾನ ಕಾರ್ಯದರ್ಶಿ ಶರಣಪ್ಪ ದೊಡ್ಡಮನಿ, ಜಂಟಿ ಕಾರ್ಯದರ್ಶಿಯಾಗಿ ಹನುಮಂತಪ್ಪ ಕೋರಿ, ವೆಂಕಟೇಶ ಬಾಗಲವಾಡ, ಅಶೋಕ ಕೆ. ಜಾಲಾಪೂರು ಕ್ಯಾಂಪ್, ಪ್ರದೀಪ ಕವಿತಾಳ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದೆ. ಸಂಘ ರಚನೆಗೆ ಸಲಹೆ ಸೂಚನೆಗಳನ್ನು ನೀಡಿದ ಎಲ್ಲಾರಿಗೂ ಧನ್ಯವಾದಗಳನ್ನು ಹನುಮಂತ ಮರಾಠ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here