‘ಭರವಸೆ-ಬೆಳಕು’ ಲೋಕಾರ್ಪಣೆ, ಪತ್ರಿಕೆಗಳು ಶೋಷಿತರ ಧ್ವನಿಯಾಗಲಿ : ರಮಾನಂದ ಸಾಗರ

0
269

ಸಿಂಧನೂರು ಜ-20 ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದೇ ಭಾವಿಸುವ ಪತ್ರಿಕೆಗಳು ಸಮಾಜದ ಶೋಷಿತ, ತುಳಿತಕ್ಕೆ ಒಳಗಾದವರ ಧ್ವನಿಯಾಗಿ, ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ, ಅನ್ಯಾಯ, ಅಕ್ರಮಗಳಿಗೆ ಅಸ್ತçವಾಗವಾಗಬೇಕು ಎಂದು ಭಾರತ ಯುವಜನ ಸೇನೆಯ ಸಂಸ್ಥಾಪಕರು ಹಾಗೂ ಬೆಂಗಳೂರು ಎಂ2ಬಿ ನ್ಯೂಸ್ ಟಿವಿ ಮಾಧ್ಯಮ ಮುಖ್ಯಸ್ಥರಾದ ರಮಾನಂದ ಸಾಗರ ಅಭಿಪ್ರಾಯಪಟ್ಟರು.

ಅವರು ನಗರದ ತಾಲೂಕಾ ಪಂಚಾಯತಿ ಆವರಣದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ನಡೆದ ನಾಗರಾಜ ದುನಿಯಾ ಸಂಪಾದಕತ್ವದಲ್ಲಿ ಹೊರಬಂದಿರುವ ‘ಭರವಸೆ-ಬೆಳಕು’ ವಾರಪತ್ರಿಕೆಯ ಲೋಕಾರ್ಪಣೆ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಇಂದು ನಮ್ಮ ಸಂಘಟನೆ ಮತ್ತು ನನ್ನ ಪತ್ರಿಕೆ ಮೂಲಕ ಪತ್ರಿಕಾರಂಗವನ್ನು ಪ್ರವೇಶಿಸಿ ತನಿಖಾ ವರದಿಗಳನ್ನು ಬರೆದು ಹೆಸರು ಮಾಡಿ ಈಗ ತನ್ನದೇಯಾದ ಸ್ವಂತ ಪತ್ರಿಕೆಯನ್ನು ಹೊರತರುತ್ತಿರುವ ನಾಗರಾಜನನ್ನು ಬೆಳೆಸಿದ್ದೇನೆ ಎನ್ನುವ ಖುಷಿ ಒಂದಡೆಯಾದರೆ, ಸ್ವಂತಿಕೆಯಲ್ಲಿ ಪತ್ರಿಕೆಯನ್ನು ಪ್ರಕಟಿಸುತ್ತಿರುವುದು ಆತನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಉತ್ತರ ಕರ್ನಾಟಕದ ಯುವಕರು ಮತ್ತು ಜನರ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಈ ಅಭಿಮಾವನ್ನು ಇಟ್ಟುಕೊಂಡೇ ನಾನು ಇಲ್ಲಿಗೆ ಬಂದಿದ್ದೇನೆ. ಇಂದು ಎಷ್ಟೇ ಸಾಮಾಜಿಕ ಜಾಲತಾಣಗಳು ಇದ್ದರೂ ಸಹ ಮುದ್ರಣ ಮಾಧ್ಯಮಕ್ಕೆ ತನ್ನದೇಯಾದ ವಿಶಿಷ್ಟ ಸ್ಥಾನಮಾನವಿದೆ ಎಂದರು.
ಸಮಾರAಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತಿ ಸದಸ್ಯ ಎನ್ ಶಿವನಗೌಡ ಗೊರೆಬಾಳ ಮಾತನಾಡುತ್ತಾ, ನಮ್ಮೂರಿನ ವ್ಯಕ್ತಿಯೊಬ್ಬರು ರಾಜ್ಯ ಮಟ್ಟದ ಪತ್ರಿಕೆಯನ್ನು ಹೊರತರುತ್ತಿರುವ ಅಭಿನಂದನೀಯ ಅವರು ಹಾಕಿರುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿ ಪತ್ರಿಕೆಯನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಹಿರಿಯ ಪರ್ತಕರ್ತ ಶರಣು ಪಾ.ಹಿರೇಮಠ ಮಾತನಾಡಿ, ವಿವಿಧ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಪತ್ರಿಕೆಗಳನ್ನು ಹೊರತರುವುದು ತುಂಬಾ ಪ್ರಯಾಸದ ಕೆಲಸ. ಆದರೂ ತಮ್ಮೆಲ್ಲರ ಅಭಿಮಾನ ಮತ್ತು ಶೋಷಿತರ ಧ್ವನಿಯಾಗಿ ಜನಪಂಥ ಪರವಾಗಿರುವ, ಸಾಮಾಜಿಕ ಕಳಕಳಿಯ ಸುದ್ದಿಗಳನ್ನು ಜನತೆಗೆ ತಲುಪಿಸಬೇಕು ಎನ್ನುವ ಮಹಾದಾಸೆಯೊಂದಿಗೆ ಪತ್ರಿಕೆಯನ್ನು ಹೊರತರುತ್ತಿರು ವುದು ನಾಗರಾಜರ ಸಮಾಜಪರ ಚಿಂತನೆಯನ್ನು ಎತ್ತಿತೋರಿಸುತ್ತದೆ ಎಂದರು.
ಜೆಡಿಎಸ್ ಮುಖಂಡ ಚಂದ್ರಭೂಪಾಲ್ ನಾಡಗೌಡ ಮಾತನಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗವ ಸುದ್ದಿಗಳಿಗೂ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಗಳಿಗೂ ಸಾಕಷ್ಟು ವ್ಯತ್ಯಾಸವಿದ್ದು ದಾಖಲೀಕರಣವಾಗುವ ಮುದ್ರಣ ಮಾಧ್ಯಮಗಳು ಬಹುಕಾಲ ಇರುತ್ತವೆ. ಮಾಧ್ಯಮದ ಮಿತ್ರರು ಸುದ್ದಿಯ ಸತ್ಯಾಸತ್ಯೆಯನ್ನು ಕಂಡು ಸುದ್ದಿಯನ್ನು ಪ್ರಕಟಿಸಬೇಕು. ನ್ಯಾಯ ಮತ್ತು ಜನಪರವಾಗಿರುವ ಸುದ್ದಿಗಳು ಬರಲಿ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಚಿಟ್ಟಿಬಾಬು, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಬೆನ್ನೂರು, ಪತ್ರಕರ್ತರಾದ ಶರಣಪ್ಪ ಗೋನಾಳ, ಚಂದ್ರಶೇಖರ ಬೆನ್ನೂರು, ಶಿಕ್ಷಕ ವೀರೇಶ ಗೋನವಾರ, ನೌಕರರ ಸಂಘದ ಕಾರ್ಯದರ್ಶಿ ಭರತಕುಮಾರ, ವಕೀಲರಾದ ಬಾಲಸ್ವಾಮಿ, ಆರ್.ಅಂಬ್ರೂಸ್, ಎಂ.ಗAಗಾಧರ, ಮುಖಂಡರಾದ ಭೀಮೇಶ, ನೀಲಕಂಠಪ್ಪ, ಬಸವರಾಜ ಬುಕ್ಕನಟ್ಟಿ, ಆನಂದ, ನಾರಾಯಣಪ್ಪ ಮಾಡಶಿರವಾರ, ಚೆನ್ನಪ್ಪ ಬೊಮ್ಮನಾಳ, ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here