ಫೆ.21ರಂದು ಬಸನಗೌಡ ಬಾದರ್ಲಿ ಪೌಂಡೇಷನ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

0
104

ಸಿಂಧನೂರು: ಫೆ.21ರಂದು ಬಸನಗೌಡ ಬಾದರ್ಲಿ ಪೌಂಡೇಷನ್ ಹಾಗೂ ಸಮಾನ ಮನಸ್ಕ ಹಿತೈಷಿ ಬಳಗದ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ರಾಜ್ಯ ಎಸ್ಟಿ ಘಟಕದ ಕಾರ್ಯದರ್ಶಿ ವೆಂಕಟೇಶ ನಾಯಕ ರಾಗಲಪರ್ವಿ ಅವರು ತಿಳಿಸಿದರು.
ಅವರು ನಗರದ ಯುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಸನಗೌಡ ಬಾದರ್ಲಿ ಪೌಂಡೇಷನ್ ನಿಂದ ಈಗಾಗಲೇ ಸುಮಾರು ವರ್ಷಗಳಿಂದ ಹಲವಾರು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ರಕ್ತದಾನ ಶಿಬಿರ, ಯುವಕರಿಗೆ ವಿವಿಧ ತರಬೇತಿ ಶಿಬಿರಗಳು, ಕ್ರೀಡಾಕೂಟಗಳು ಮತ್ತು ಶ್ರೀಶೈಲ ಪಾದಯಾತ್ರಿಗಳಿಗೆ ಪ್ರತಿವರ್ಷ ದೊಟ್ಟ ಮಟ್ಟದಲ್ಲಿ ಉಚಿತ ಪ್ರಸಾದ ವ್ಯವಸ್ಥೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ. ಫೆ.21 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕಿನ ಸಮಸ್ತ ಜನತೆ ಸಾಮೂಹಿಕ ವಿವಾಹದ ಕಾರ್ಯಕ್ರಮದ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಫೆ.15ರೊಳಗಾಗಿ ವೆಂಕಟೇಶ ರಾಗಲಪರ್ವಿ ಮೊ: 9449684327, ಖಾಜಾಹುಸೇನ್ ರೌಡಕುಂದಾ ಮೊ: 9663798999, ಮಲ್ಲಿಕಾರ್ಜುನ ನಾಡಗೌಡ ದಿದ್ದಗಿ ಮೊ: 998034275, ಬಸವರಾಜ ಆಯನೂರು ಮೊ: 8073202303 ಇವರಲ್ಲಿ ಹೆಸರು ನೊಂದಾಯಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಂಧನೂರು ಯುವ ಕಾಂಗ್ರೆಸ್ ತಾಲ್ಲೂಕಾಧ್ಯಕ್ಷ ಖಾಜಾಹುಸೇನ್ ರೌಡಕುಂದಾ, ಮಸ್ಕಿ ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಹುಸೇನ್ ಭಾಷಾ ಬಳಗಾನೂರು , ಗ್ರಾಮೀಣ ಘಟಕದ ಅಧ್ಯಕ್ಷ ಹನುಮೇಶ ಬಾಗೋಡಿ, ನಗರಸಭೆ ಸದಸ್ಯರಾದ ಮುರ್ತುಜಾ ಹುಸೇನ್, ಶರಣಪ್ಪ ಉಪ್ಪಲದೊಡ್ಡಿ, ಅಲಬನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಬಸವರಾಜ, ಮುಖಂಡರಾದ ಶಿವುಕುಮಾರ ಜವಳಿ, ವೀರರಾಜು, ಇಲಿಯಾಸ್ ಪಟೇಲ್, ಮಹಿಬೂಬ್, ಶಾಹೀನ್, ಮಲ್ಲಿಕಾರ್ಜುನ, ಜಾವೀದ್, ಮಹಾಂತೇಶ ಹೆಡಿಗನಾಳ, ಖಾಜಾ ಬಡಿಬೇಸ್, ಮುದಿಯಾ ಡೈಮಂಡ್, ಮುನ್ನಾ ಇದ್ದರು.

LEAVE A REPLY

Please enter your comment!
Please enter your name here