ಹಿರೇಕೊಟ್ನೆಕಲ್ ಪ್ರಾ. ಕೃ.ಪ.ಸ.ಸಂಘಕ್ಕೆ 12 ಸದಸ್ಯರ ‌ಅವಿರೋಧ ಆಯ್ಕೆ.

0
205

ಮಾನ್ವಿ: ಹಿರೇಕೊಟ್ನೆಕಲ್ ಪ್ರಾಥಮಿಕ ‌ಕೃಷಿ ಪತ್ತಿನ‌ ಸಹಕಾರ ‌ಸಂಘದ ಚುನಾವಣೆಯಲ್ಲಿ 12 ಸದಸ್ಯರು ಅವಿರೋಧವಾಗಿ ‌ಆಯ್ಕೆಯಾದರು.
ಹಿರೇಕೊಟ್ನೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಬಸವರಾಜ ನಾಡಗೌಡ ಪೋತ್ನಾಳ್ ಇವರ ಬೆಂಬಲದೊಂದಿಗೆ ಮೂರು ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಮೂರು ಜನ ಸದಸ್ಯರು ಬಸವರಾಜ್ ನಾಡಗೌಡರಿಗೆ ಸನ್ಮಾನಿಸಿ ಗೌರವಿಸಿದರು.
1 ಎಸ್ಸಿ, 1 ಎಸ್.ಟಿ, 2 ಹಿಂದುಳಿದ ವರ್ಗ, ಹಾಗೂ 2 ಮಹಿಳಾ ಮಿಸಲು, ಮತ್ತು 4 ಸಾಮಾನ್ಯ ಕ್ಷೇತ್ರಗಳು ಸೇರಿದಂತೆ ‌1 ಸಾಲಗಾರರಲ್ಲದ ನಿರ್ದೇಶಕರ ಆಯ್ಕೆ ಚುನಾಣೆ ನಡೆದಿದ್ದು ಸಾಲಗಾರರಲ್ಲದ ‌ನಿರ್ದೇಶಕ ಕ್ಷೇತ್ರದಲ್ಲಿ ಶಿವಪ್ಪ ತಂ .ಮಲ್ಲಪ್ಪ ಬುಸಾರಿ, ಮಹಿಳಾ ಮೀಸಲ ಕ್ಷೇತ್ರದಲ್ಲಿ ಸುಮಲತ ಗಂ ಚನ್ನಬಸವ, ಲಕ್ಷ್ಮಿ ಗಂ ಗೌಡಪ್ಪ, ಹಿಂದುಳಿದ ವರ್ಗದ ಕ್ಷೇತ್ರದಲ್ಲಿ ಮಾಳಿಂಗರಾಯ ಅಯ್ಯಪ್ಪ ಪೋತ್ನಾಳ್, ಮತ್ತು ಸಾಮಾನ್ಯ ಕ್ಷೇತ್ರದಲ್ಲಿ ‌ಬಸಂತ್ರಾಯ ಮುದ್ದಮಗುಡ್ಡಿ ಪ.ಜಾ. ಕ್ಷೇತ್ರದಲ್ಲಿ ಹುಲಿಗೆಮ್ಮ‌ ಯಂಕೋಬ ‌ಪ.ಪಂ‌.ಕ್ಷೇತ್ರದಲ್ಲಿ ಯಂಕೋಪ್ಪ ‌ಸಿದ್ರಾಮಪ್ಪ ಸೇರಿದಂತೆ ಹಿರೇಕೊಟ್ನೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಜನ‌ ನಿರ್ದೇಶಕರು ಅವಿರೋಧವಾಗಿ ‌ಆಯ್ಕೆಯಾಗಿದ್ದಾರೆ ಎಂದಿ ಸಹಕಾರ ಸಂಘದ ರಿಟರ್ನಿಂಗ ಅಧಿಕಾರಿ ಶ್ರೀ ಯುತ ಸತೀಶ್ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸೋಮನಗೌಡ, ಹಸನ್ ಭಾಷಾ, ಮಲ್ಲಯ್ಯ, ಟೇಲರ್ ಯಲ್ಲಪ್ಪ ,ಈಶ್ವರ ಮುದ್ದನಗುಡಿ,ಟಿಪ್ಪು ಹಾಗೂ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here