ನಿರಮಾನ್ವಿ 10 ಶಾಲಾ‌ ಕೊಠಡಿಗಳ‌ ಉದ್ಘಾಟನೆ.

0
257

ಮಾನ್ವಿ:ಜ.18 ನೂತನವಾಗಿ ನಿರ್ಮಾಗೊಂಡ‌ 10 ಶಾಲಾ ಕೊಠಡಿಗಳನ್ನು ಶಾಸಕ ರಾಜ ವೆಂಕಟಪ್ಪ ‌ನಾಯಕ ಮತ್ತು ವಿಧಾನ ‌ಪರಿಷತ್‌ ಸದಸ್ಯರಾದ ಎನ್.ಎಸ್.ಬೋಸುರಾಜ ಇವರು ಉದ್ಘಾಟನೆ ಮಾಡಿದರು.

ಇಂದು ನಿರಮಾನ್ವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ‌ಶಾಲೆಯಲ್ಲಿ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಎನ್.ಎಸ್.ಬೋಸುರಾಜ್ ಇವರು ಶಾಲಾ ಕೊಠಡಿಗಳು ಉದ್ಘಾಟನೆ ಮಾಡಿದ್ದು ಅತ್ಯಂತ ‌ಸಂತೋಷದಾಯಕ ವಿಷಯ. ಈ ಶಾಲಾ ಮುಖ್ಯಸ್ಥರು ಮತ್ತು ಗ್ರಾಮಸ್ಥರ ‌ಸಮ್ಮುಖದಲ್ಲಿ ಈ ಕೊಠಡಿಗಳನ್ನು ಉತ್ತಮ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕು ಮತ್ತು ಈಗಾಗಲೇ ‌ನಾವು ಪ್ರತಿ ‌ವರ್ಷ ನೋಡುವಂತೆ ರಾಜ್ಯದಲ್ಲಿ ಶಿಕ್ಷಣ ‌ಕ್ಷೇತ್ರದಲ್ಲಿ ಹಿಂದುಳಿದ ‌ಹಣೆಪಟ್ಟಿ ಕಟ್ಟಿಕೊಂಡ ತರುವಾಯ 28, 29 ನೇ ಸ್ಥಾನಕ್ಕೆ ‌ಸೀಮಿತವಾಗಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ ಈತರಹ ಶಿಕ್ಷಣ ‌ಕ್ಷೇತ್ರದಲ್ಲಿ ಹಿಂದುಳುದಿರುವಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಸರಕಾರ ಶಿಕ್ಷಣ ಸಂಬಂಧಿಸಿದಂತೆ ಒಳ್ಳೆ ಒಳ್ಳೆ ಯೋಜನೆಗಳನ್ನು ಜಾರಿಗೆ ತರುತ್ತಿವೆ ಮತ್ತು ಅದರಲ್ಲಿ‌ ಸರಕಾರದ ಅತ್ಯಂತ ಮಹತ್ವದ ಯೋಜನೆಯಾದ ಬಿಸಿಯೂಟ ಯೋಜನೆಯು ಸಹ ಪ್ರಪ್ರಥಮವಾಗಿ ಜಾರಿಗೆ ತಂದಿರುವುದು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರೇಕೆರ ಗ್ರಾಮದಲ್ಲಿ ಎಂಬುದು ಬಹು ಮುಖ್ಯವಾದದ್ದು ನಾವು ಕಳೆದ ಕೆಲವು ವರ್ಷಗಳ ಹಿಂದೆ ನಾವು ನಿರಮಾನ್ವಿ ಗ್ರಾಮಕ್ಕೆ ಬಂದಾಗ ಸ್ಥಳಿಯರ ಮನವಿಯ ಮೇರೆಗೆ ಅಂದಿನ ಶಿಕ್ಷಣ ‌ಸಚಿವರೊಂದಿಗೆ ಮಾತನಾಡಿ ನಿರಮಾನ್ವಿ ಗ್ರಾಮಕ್ಕೆ ಮತ್ತು ಪೋತ್ನಾಳ್ ಗ್ರಾಮಕ್ಕೆ ನನ್ನ ಅನುದಾನಕ್ಕೆ ಎಚ್.ಕೆ.ಡಿ.ಬಿ ಅನುದಾನವನ್ನು ಕೊಡಿಸಿ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಶಾಸಕ ರಾಜ ವೆಂಕಟಪ್ಪ ನಾಯಕ ಮಾತನಾಡಿ ಈ ಭಾಗ ಶೈಕ್ಷಣಿಕವಾಗಿ ಅಭಿವೃದ್ಧಿ ಆಗಬೇಕು ಮಕ್ಕಳಿಗೆ ಚಿಕ್ಕವರಿದ್ದಾಗ ನಿಮ್ಮ ‌ತಂದೆ ತಾಯಿಯೇ ಗುರುಗಳು ‌ನೀವು ಶಾಲಾ ‌ಮೆಟ್ಟಿಲು ಹತ್ತಿದ ಮೇಲೆ‌‌ ನಿಮ್ಮ ಶಿಕ್ಷಕರೆ ನಿಮಗೆ ಗುರುಗಳು ಮಕ್ಕಳು ಏನಾಗಬಹುದೆಂದು ಶಿಕ್ಷಕರಿಗೆ ಗೊತ್ತಿರುತ್ತದೆ ಆದ್ದರಿಂದ ‌ನೀವು ಶಿಕ್ಷಕರನ್ನು ಅತ್ಯಂತ ಗೌರವದಿಂದ ‌ಕಾಣಬೇಕು ಮತ್ತು ನಾನು ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕಂಕಣ ಬದ್ದವಾಗಿ ದುಡಿಯುತ್ತೆನೆ ಎಂದು ‌ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗುಡಿಯಾಳ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಗಂಗಣ್ಣ ನಾಯಕ್, ಶರಣಯ್ಯ ನಾಯಕ ಕೆ ಗುಡದಿನ್ನಿ, ಚನ್ನಬಸವಣ್ಣ ಬೆಟ್ಟದೂರು, ರಾಜಾ ರಾಮಚಂದ್ರ ನಾಯಕ್,ಸಿದ್ದರಾಮಪ್ಪ ನೀರಮಾನ್ವಿ, ಶ್ರೀಶೈಲಾ ಗೌಡ, ವಿಎಂ ಪಾಟೀಲ್ ವಕೀಲರು,ಮಾಮುನಿಯಮ್ಮ ಹನುಮಂತ ತಾಸಿ, ರಾಮಣ್ಣ ಅರಿಕೇರಾ,ನಾಗಲಕ್ಷ್ಮಿ ನರಸಿಂಹ, ಶ್ರೀನಿವಾಸ್,ಸುರೇಶ್ ಕುರುಡಿ ಶಿಕ್ಷಕರ ವೃಂದ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here