ಪೌರತ್ವ ಕಾಯ್ದೆ ವಿರೋಧಿಸಿ ಜ.19ರಂದು ಸಿಂಧನೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

0
241

ಸಿಂಧನೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಭಾರತೀಯ ಜನಸಂಖ್ಯೆ ನೊಂದಣಿ (ಎನ್‌ಪಿಆರ್), ಮತ್ತು ಭಾರತೀಯ ನಾಗರೀಕತ್ವ ನೊಂದಣಿ (ಎನ್‌ಆರ್‌ಸಿ) ವಿರೋಧಿಸಿ ಸಿಂಧನೂರಿನ ಆರ್‌ಜಿಎಂ ಶಾಲಾ ಮೈದಾನದಲ್ಲಿ ಜ.19 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಹಕ್ಕು ರಕ್ಷಣಾ ಹೋರಾಟ ಸಮಿತಿಯ ಸಂಚಾಲಕರು ತಿಳಿಸಿದರು.
ಗುರುವಾರ ನಗರದ ಶಾದಿಮಹಲ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲದೇಶದಿಂದ ವಲಸೆ ಬಂದು ಮುಸ್ಲೀಂಮೇತರರಿಗೆ ಮಾತ್ರ ಪೌರತ್ವ ಕೊಡುತ್ತೇವೆ ಎಂದು ಪೌರತ್ವ ಕೊಡುವ ಕಾಯ್ದೆ ಭಾರತ ಸಂವಿಧಾನದ ಆಶೆಯವನ್ನೇ ಉಲ್ಲಘಿಸಲಾಗಿದೆ ಎಂದು ಅಪಾದಿಸಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಧರ್ಮಾಧಾರಿತ ನೆಲೆಯಲ್ಲಿ ರೂಪಿಸುವ ಮೂಲಕ ದೇಶದಲ್ಲಿ ನೆಲೆಸಿರುವ ಸಹಸ್ರಾರು ವರ್ಷಗಳಿಂದ ಶಾಂತಿ ಸಹಭಾಳ್ವೆಯಿಂದ ಬದುಕುತ್ತಿರುವ ಜನರಲ್ಲಿ ಶಾಂತಿ ಕದಡುವ ಅಸ್ತçವಾಗಿದೆ
ಬಾಗಲಕೋಟೆ ಜಿಲ್ಲೆಯ ಶಿರೂರಿನ ವಿಜಯಮಹಾಂತೇಶ್ವರತಿರ್ಥ ಡಾ.ಬಸವಲಿಂಗ ಸ್ವಾಮಿಜಿ ಸಮಾವೇಶ ಉದ್ಘಾಟಿಸಲಿದ್ದಾರೆ. ಇಲಕಲ್ ಗುರುಮಹಾಂತ ಸ್ವಾಮಿಜಿ ಸಾನಿಧ್ಯವಹಿಸುವರು. ಬಸವಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಕುರುಕುಂದಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನಮ್ಮ ಧ್ವನಿಯ ಮಹೇಂದ್ರಕುಮಾರ, ಹೈದ್ರಬಾದ್ ಉರ್ದು ವಿಶ್ವವಿದ್ಯಾಲಯದ ಬಾಷಾಂತರ ವಿಭಾಗದ ಮುಖ್ಯಸ್ಥ ಮಹಮ್ಮದ್ ಖಾಲಿದ್, ಮುಬಷರ್‌ಜಫರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಮಹಿಳಾ ಹೋರಾಟಗಾರ್ತಿ ಕೇ.ನೀಲಾ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ ಎಂದು ಅವರು ವಿವರಿಸಿದರು.
ಸಂಚಾಲಕರಾದ ಡಿ.ಎಚ್.ಕಂಬಳಿ, ಎಸ್.ದೇವೇಂದ್ರಗೌಡ, ಚಂದ್ರಶೇಖರ ಗೊರಬಾಳ, ಖಾದರಸುಭಾನಿ, ಅಶೋಕ ನಂಜಲದಿನ್ನಿ, ಕೆ.ಜಿಲಾನಿಪಾಷ, ಬಾಬರ್ ಪಟೇಲ್, ಶೇಕ್ಷಾಖಾದ್ರಿ, ವೀರಭದ್ರಪ್ಪ ಕುರುಕುಂದಿ, ಮಲ್ಲಿಕಾರ್ಜುನ ಪಾಟೀಲ್, ಹೆಚ್.ಎನ್.ಬಡಿಗೇರ, ಶೇಖರಪ್ಪ ಗಿಣಿವಾರ, ಯಮನಪ್ಪ, ಶ್ರೀದೇವಿ ಶ್ರೀನಿವಾಸ, ಮಹ್ಮದ್‌ಸಾಬ್ ಮುಸ್ತಫಾ ಜ್ಯುವೆರ‍್ಸ್, ಮುರ್ತುಜಾ ಹುಸೇನ, ಶಪ್ಪುಖಾನ್, ಮುನೀರಪಾಷಾ, ಸರಸ್ವತಿ ಪಾಟೀಲ್, ವಕೀಲರಾದ ಬಾಬರಪಾಷ, ಮಹಿನುದ್ದಿನ್‌ಯತ್ಮಾರಿ, ಖಾಜಿಮಲ್ಲಿಕ್, ಜಹಿರುಲ್ಲಾಹಸನ್, ಜಾವಿದ್‌ಹುಸೇನ, ಮುನೀರ ಪಾಷಾ, ಎಂ.ಡಿ.ನದೀಮ್ ಮುಲ್ಲಾ, ಅಂಬರಖಾನ್ ದೇಸಾಯಿ, ಸಮದ್ ಚೌದ್ರಿ ಇದ್ದರು.

LEAVE A REPLY

Please enter your comment!
Please enter your name here