ಪೌರತ್ವ ತಿದ್ದುಪಡಿ ಕಾಯಿದೆ ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಘೋಷಣೆಯನ್ನು ಕೂಗುವ ಮೂಲಕ ಗಮನ ಸೆಳೆದ ಕ್ರಿಕೆಟ್ ಅಭಿಮಾನಿಗಳು

0
213

ಮುಂಬಯಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮುಂಬಯಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯಕ್ಕೂ ಸಿಎಎ ಮತ್ತು  ಎನ್‌ಆರ್‌ಸಿ ಪ್ರತಿಭಟನೆಯ ಕಾವು ತಟ್ಟಿದೆ.

ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಘೋಷಣೆ ಕೂಗಿದರು. ವಿಶೇಷ ಜೆರ್ಸಿಯೊಂದಿಗೆ ಬಂದ ಅಭಿಮಾನಿಗಳು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದರು.

‘ನೊ ಸಿಎಎ’, ‘ನೊ ಎನ್‌ಪಿಆರ್’ ಮತ್ತು ‘ನೊ ಎನ್‌ಆರ್‌ಸಿ’ ಆಂಗ್ಲ ಭಾಷೆಯಲ್ಲಿ ಮುದ್ರಿತ ಶ್ವೇತ ವರ್ಣದ ಟೀ ಶರ್ಟ್‌ ಧರಿಸಿದ್ಧ ಅಭಿಮಾನಿಗಳು ಭಾರತದ ಇನ್ನಿಂಗ್ಸ್ ಆದ ಕೂಡಲೇ ಮೈದಾನವನ್ನು ಬಿಟ್ಟು ತೆರಳಿದರು.

ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ದೇಶದ್ಯಾಂತ ಪ್ರತಿಭಟನೆಯ ಕಾವು ಜೋರಾಗುತ್ತಿದೆ. ಮುಂಬಯಿನಲ್ಲೂ ವಿವಿಧ ಸಂಘ ಸಂಸ್ಥೆಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಬಲ್ಲ ಮೂಲಗಳ ಪ್ರಕಾರ 26ರಷ್ಟು ಮಂದಿ ಗುಂಪಿನಲ್ಲಿ ಕಾಣಿಸಿದ್ದರು

ಸಿಎಎ ಪ್ರತಿಭಟನೆಯ ಭೀತಿ ಹಿನ್ನೆಲೆಯಲ್ಲಿ ಕಪ್ಪು ಬಣ್ಣದ ಉಡುಪು ಧರಿಸಿದವರಿಗೆ ಮೈದಾನದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇಂತಹ ವಾರ್ತೆಯನ್ನು ಮುಂಬಯಿ ಕ್ರಿಕೆಟ್ ಸಂಸ್ಥೆ (ಎಂಸಿಎ) ನಿರಾಕರಿಸಿದೆ. ಯಾವುದೇ ಬಣ್ಣಕ್ಕೆ ತೊಂದರೆ ಇರಲಿಲ್ಲ. ಆದರೆ ಸ್ಥಳೀಯ ಪೊಲೀಸ್ ಸೂಚನೆಯ ಮರೆಗೆ ಕ್ರೀಡಾಂಗಣದೊಳಗೆ ಯಾವುದೇ ಪೋಸ್ಟರ್‌ಗಳನ್ನು ಅನುಮತಿ ನೀಡಿರಲಿಲ್ಲ ಎಂದು ವಿವರಣೆ ನೀಡಿದೆ.

LEAVE A REPLY

Please enter your comment!
Please enter your name here