ರಾಜ್ಯದ ವಿವಿಧ ಜಿಲ್ಲಾ ಪಂಚಾಯ್ತಿ, ನಗರಸಭೆ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ; ರಾಜ್ಯ ಚುನಾವಣಾ ಆಯೋಗ

0
986

ಬೆಂಗಳೂರು : ರಾಜ್ಯದ 1 ಜಿಲ್ಲಾ ಪಂಚಾಯ್ತಿ, 4 ನಗರಸಭೆ ಹಾಗೂ 10 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ರಾಜ್ಯ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.

4 ನಗರಸಭೆ, 1 ಜಿಲ್ಲಾ ಪಂಚಾಯ್ತಿ ಹಾಗೂ 10 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಫೆಬ್ರವರಿ 9 ರಂದು ಮತದಾನ ನಡೆಯಲಿದ್ದು, ಒಂದು ವೇಳೆ ಮರುಮತದಾನವಿದ್ದಲ್ಲಿ ಫೆಬ್ರವರಿ 10 ರಂದು ನಡೆಯಲಿದೆ. ಇನ್ನು ಫೆಬ್ರವರಿ 11 ರಂದು ಮತಎಣಿಕೆ ನಡೆಯಲಿದೆ.

ಬೆಳಗಾವಿ ಜಿಲ್ಲಾ ಪಂಚಾಯತ್ ನ ಹುಕ್ಕೇರಿ ತಾಲೂಕಿನ 59-ಹೆಬ್ಬಳಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಹೊಸಕೋಟೆ, ಚಿಕ್ಕಬಳ್ಳಾಪುರ, ಸಿರುಗುಪ್ಪ, ಹುಣಸೂರು ನಗರಸಭೆಗಳಿಗೂ ಚುನಾವಣೆ ನಿಗದಿಯಾಗಿದೆ. ಇದರೊಂದಿಗೆಹತ್ತು ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

LEAVE A REPLY

Please enter your comment!
Please enter your name here