ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಣೆಗೆ ಅಗ್ರಹಿಸಿ ವಿದ್ಯಾರ್ಥಿಗಳ ಒಕ್ಕೂಟದಿಂದ ಪ್ರತಿಭಟನೆ

0
219

ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಣೆಗೆ ಅಗ್ರಹಿಸಿ ಪ್ರತಿಭಟನೆ
ಮಾನ್ವಿ : ಸರಕಾರಿ ಪದವಿ ಕಾಲೇಜಿನ ದ್ವಿತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವಂತೆ ಅಗ್ರಹಿಸಿ ಸೋಮುವಾರ ವಿದ್ಯಾರ್ಥಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವವೃತ್ತದಿಂದ ತಹಸೀಲ್ದಾರ ಕಛೇರಿಗೆ ಪ್ರತಿಭಟನಾ ಮೂಲಕ ಮನವಿ ಸಲ್ಲಿಸಿ ವಿದ್ಯಾರ್ಥಿಗಳು ಸರ್ಕಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಯೋಜನೆ ಜಾರಿಗೂಳಿಸಿರುವುದು ಸಾಗರ್ತಾಹ ಅದರೆ ಕಳೆದ ಸಿದ್ದರಾಮಯ್ಯ ಸರ್ಕಾರದಿಂದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸರಕಾರದಿಂದ ಲ್ಯಾಪ್‌ಟಾಪ್ ವಿತರಣೆ ಮಾಡವುದಾಗಿ ಹೇಳಿದರು. ಕಳೆದ ವಿಧಾನಸಭಾ ಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಿಂದ ಸರಕಾರ ವಿತರಣೆಯನ್ನು ವಿಳಂಬ ಮಾಡಲಾಯಿತು. ಅದರೆ ಬದಲಾದ ಸರ್ಕಾರದಿಂದ ೨೦೧೮-೧೯ ಸಾಲಿನ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ ನೀಡದೇ ನಿರ್ಲಕಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸರಕಾರ ವಿದ್ಯಾರ್ಥಿಗಳ ಏಳಿಗೆಗಾಗಿ ವಿಶೇಷ ಬಜೆಟ್ ಮೀಸಲು ಇಡಲಾಗಿದೆ ಎನ್ನಲಾಗುತ್ತಿದೆ ಅದರೆ ಸರಕಾರದ ಯುವ ಸಮುದಾಯಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿಲ್ಲ. ಕೂಡಲೇ ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಗಣಿಸಿ ಪ್ರಸತ್ತ ದ್ವಿತೀಯ ಹಾಗೂ ಅಂತಿಮ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ ಮಾಡಿ ವಿದ್ಯಾರ್ಥಿಗಳ ಅನುಕೂಲವಂತೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಬರೆದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂಧರ್ಭದಲ್ಲಿ ಹೈದ್ರಾಬಾದ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ರಾಜ್ಯಧ್ಯಕ್ಷ ಮಲ್ಲೇಶ ಮಚನೂರು, ತಾಲೂಕಧ್ಯಕ್ಷ ವಿಜಯ ಮಾಚನೂರು, ವಿದ್ಯಾರ್ಥಿ ಒಕ್ಕೂಟದ ತಾಲೂಕ ಸಂಯೋಜಕ ದತ್ತಾತ್ರೇಯ ವಕೀಲರು, ಜಿಲ್ಲಾ ಉಪಾಧ್ಯಕ್ಷ ಸುರೇಶ, ಶ್ರೀನಿವಾಸ ನಂದಿಹಾಳ ವಿದ್ಯಾರ್ಥಿಗಳಾದ ಬಸವರಾಜ, ವರಪ್ರಸಾದ, ಮೌಲಪ್ಪ, ನಾಗರಾಜ, ಚನ್ನಬಸವ, ವೆಂಕಟೇಶ ಮತ್ತಿತತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here